ಮಗಳ ಮದುವೆಗೆ ಜನಾರ್ಧನ ರೆಡ್ಡಿ ಮಾಡ್ಸಿರೋ ಹೈಟೆಕ್ ಕಾರ್ಡಿನ ಕುಲ ಗೋತ್ರ ಎಲ್ಲಾ ಹೇಳಿಬಿಡ್ತೀವಿ ಕೇಳಿ

ಅವರ ಐಡಿಯಾಗೇ ಕೊಡಬೇಕು

ಗಣಿ ಧಣಿ ಗಾಳಿ ಜನಾರ್ಧನ ರೆಡ್ಡಿ ಯಾರಿಗ್ ಗೊತ್ತಿಲ್ಲ ಹೇಳಿ?

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಇವರು ಅವರ ಸಚಿವ ಸಂಪುಟದಲ್ಲಿ ಮಂತ್ರಿ ಆಗಿದ್ದರು. ಅಕ್ರಮ ಗಣಿಗಾರಿಕೆ ಕೇಸಲ್ಲಿ ಮೂರು ವರ್ಷ ಕಂಬಿ ಏಣಿಸಿ ಜನವರಿ 2015ಕ್ಕೆ ಜಾಮೀನ್ ತೊಗೊಂಡ್ ಹೊರಗ್ ಬಂದಿದ್ದು ಎಲ್ಲರಿಗೂ ಗೊತ್ತಿದೆ.

ಈಗ ಅವರ ಮಗಳ ಮದುವೆಗೆ ಹೆಂಗ್ ಮಾಡ್ತಿದಾರೆ ಅಂತ ನೋಡಿ ತಬ್ಬಿಬ್ಬಾಗೋಗ್ತೀರಿ

ಏನಿಲ್ಲ, ಸಿಂಪಲ್ಲಾಗಿ ಒಂದು ವೀಡಿಯೋ ಮಾಡ್ಸಿದಾರಪ್ಪ... ಅಚ್ಚಕನ್ನಡದಲ್ಲಿ ಒಂದು ಹಾಡು, ಅದಕ್ಕೆ ಅವರು, ಅವರ ಹೆಂಡ್ತಿ, ಮಗಳು ಬ್ರಾಹ್ಮಣಿ, ಅಳಿಯ ಆಗಕ್ಕೆ ಹೊರಟಿರೋ ರಾಜೀವ್ ರೆಡ್ಡಿ - ಇವರೆಲ್ಲ ಅದರಲ್ಲಿ ನೋಡಕ್ಕೆ ಸಿಗ್ತಾರೆ. ವೀಡಿಯೋ‌ ನೋಡಿಬಿಡಿ. ಇದನ್ನ ABN ತೆಲುಗು ಚಾನೆಲ್ನೋರು ಯೂಟ್ಯೂಬಿಗೆ ಅಪ್ಲೋಡ್ ಮಾಡಿದಾರೆ, ಆದರೆ ಒಳಗೆ ಹಾಡು ಅಪ್ಪಟ ಕನ್ನಡ. ಕೇಳಿ, ನೋಡಿ, ಆನಂದಿಸಿ. ಆಮೇಲೆ ಪಾಯಿಂಟ್ಗೆ ಬರ್ತೀವಿ.

ಇನ್ವಿಟೇಶನ್ ಕಾರ್ಡು ಹಿಂಗಿದೆ ನೋಡಿ... ಏನ್ ಎಲ್ಲರೂ‌ ಮಾಡ್ಸೋ ಥರ ಇದೆ ಅನ್ನಿಸುತ್ತೆ...

ಆದರೆ ಕೆಳಗಡೆ ಮಾತ್ರ ಮಾಮೂಲಿ ಮೇಲಗಡೆ ನೋಡಿ! ಒಂದು ಟ್ಯಾಬಲ್ಲಿ ಅವರು ಮಾಡ್ಸಿರೋ ಹಾಡು ಲೋಡ್ ಮಾಡಿ ಅದನ್ನ ಒಳಗಿಟ್ಟಿದಾರೆ! ತೆಗೆದ ತಕ್ಷಣ ಹಾಡು ಬರುತ್ತೆ:

ಇದನ್ನ ನೋಡುದ್ರೆ ಗೊತ್ತಾಗುತ್ತೆ ಇಡೀ ಕಾರ್ಡ್ ಹೆಂಗಿದೆ ಅಂತ:

ಈ ಕಾರ್ಡ್ನ ಇಂಥ ಒಂದು ಪೆಟ್ಟಗೇಲಿ ಇಟ್ಟು ಜನರಿಗೆ ಕಳುಸ್ತಿದಾರೆ ರೀ:

ಅಂದಹಾಗೆ ಮದುವೆ ನವೆಂಬರ್ 16ಕ್ಕೆ.

ನಂಬಿಕೆ ಬರ್ತಿಲ್ಲ ಅಂದ್ರೆ ಈ ವೀಡಿಯೋ ನೋಡಿ:

ಹೀಗ್ ಮಾಡುಸ್ಬೇಕು ಅಂತ ಇವರಿಗೆ ಎಲ್ಲಿಂದ ಐಡಿಯಾ ಬಂದಿರಬಹುದು ಹೇಳಿ? ಸ್ವಲ್ಪ ಯೋಚನೆ ಮಾಡಿ.

ಇವರ ಮೇಲೆ ತೆಲುಗು ಪ್ರಭಾವ ಇದೆ ಅನ್ನೋದನ್ನ ಮನಸ್ಸಲ್ಲಿ ಇಟ್ಕೊಂಡ್ರೆ ಚಕ್ ಅಂತ ಹೇಳಿಬಿಡ್ತೀರಿ.

ಗೊತ್ತಾಗ್ಲಿಲ್ಲ ಅಂದ್ರೆ ಇಲ್ಲಿ ಕ್ಲಿಕ್ ಮಾಡಿ:

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಕಷ್ಟ ಬಂದಾಗ ಈ 12 ಸತ್ಯಗಳ್ನ ನೆನಪಿಸಿಕೊಂಡರೆ ಇನ್ನಷ್ಟು ಗಟ್ಟಿಯಾಗಿ ಹೊರಬರ್ತೀರಿ

ಸೋಲು ಗೆಲುವು ಎಲ್ಲಕ್ಕೂ ಮನಸ್ಸೇ ಕಾರಣ

ಕಷ್ಟ ಅನ್ನೋದ್ ಎಲ್ಲಾರ್ಗೂ ಬಂದೇ ಬರತ್ತೆ. ಒಂದೊಂದ್ಸಲ ಯಾವಾಗ್ ಮುಗ್ಯತ್ತಪ್ಪ ಅನ್ನೋ ಅಷ್ಟು ಕಷ್ಟಗಳು ಬರತ್ತೆ. 

ಆದ್ರೆ ನಮಗೆ ನಾವೇ ಈ 12 ಸತ್ಯಗಳ್ನ ಹೇಳ್ಕೊಂಡ್ ಸಮಾಧಾನ ಮಾಡ್ಕೊಂಡ್ರೆ ಕಷ್ಟಾನ ಎದುರಿಸೋ ಧೈರ್ಯ ಬರತ್ತೆ.

1. ಗೆಲ್ಲೋದಕ್ಕೆ ಸೋಲೋದಕ್ಕೆ ಎರಡಕ್ಕೂ ನಮ್ಮ ಮನಸ್ಸೇ ಕಾರಣ

ನಾವ್ ಮನಸ್ಸಿನಲ್ಲಿ ಏನ್ ಯೋಚ್ನೆ ಮಾಡ್ತೀವೋ ಅದೇ ತರ ನಡ್ಕೊಳ್ತೀವಿ. ನಮಗೆ ಅದೇ ತರ ಸಂದರ್ಭಗಳು ಒದಗಿ ಬರತ್ತೆ.

ನಾವು ಒಳ್ಳೇದನ್ನ ಯೋಚ್ನೆ ಮಾಡ್ತಾ, ಒಳ್ಳೇ ಕೆಲ್ಸಾನೇ ಯಾವಾಗ್ಲೂ ಮಾಡ್ತಾ ಇದ್ರೆ, ಮನಸ್ಸೂ ಒಳ್ಳೇದಾಗಿರತ್ತೆ. 

2. ನೋವು ಬರತ್ತೆ ಹಾಗೆ ಹೋಗತ್ತೆ

ಎಲ್ಲಾರ್ ಬದುಕಲ್ಲೂ ಒಂದಲ್ಲ ಒಂದು ತೊಂದ್ರೆ ಇದ್ದೇ ಇರತ್ತೆ, ಮನಸ್ಸಿಗೆ ನೋವು ತರೋ ಸಂದರ್ಭನೂ ಇದ್ದಿದ್ದೇ. ಇವೆಲ್ಲ ನಮ್ಮನ್ನ ಇನ್ನೂ ಗಟ್ಟಿ ಆಗ್ಸತ್ತೆ. ಕುಗ್ಗಕ್ಕೆ ಅವಕಾಶ ಕೊಡ್ಬಾರ್ದು ಅಷ್ಟೆ.

3. ಯೋಚ್ನೆ ಮಾಡೋದ್ರಿಂದ ಯಾವ ಸಮಸ್ಯೆನೂ ಪರಿಹಾರ ಆಗಲ್ಲ

ಯೋಚ್ನೆ ಮಾಡೋದ್ರಿಂದ ಯಾವ್ದೂ ಸರಿ ಹೋಗಲ್ಲ. ಅದ್ರಿಂದ ಮನಸ್ಸಿಗೆ ಮತ್ತೆ ದೇಹಕ್ಕೆ ಒತ್ತಡ ಜಾಸ್ತಿ ಆಗತ್ತೆ ಅಷ್ತೇ

4. ಕಷ್ಟ ಎದುರಿಸಕ್ಕೆ ಭಯಪಟ್ರೆ ಮುಂದೆ ಹೋಗಕ್ಕೆ ಆಗಲ್ಲ

ಕಷ್ಟ ಬಂತು ಅಂತ ಭಯದಿಂದ ಮನಸ್ಸು ಮುದುಡಿಕೊಂಡು ಕೂತ್ಕೋಂಡ್ರೆ ಯಾವ ಕೆಲ್ಸನೂ ಆಗಲ್ಲ.  ಹಿಂದೇನೆ ಉಳೀತೀವಿ.

ನಿಮಗೆ ಬೇಕಾಗಿರೋದೆಲ್ಲಾ ಭಯದ ಇನ್ನೊಂದು ಕಡೆ ಇದೆ. ಧೈರ್ಯವಾಗಿ ಮುನ್ನುಗ್ಗಿ ಗುರಿ ಸಾಧಿಸಿ.

5. ಅನುಭವಾನೇ ಇಲ್ದಿದ್ರೆ ಯಾವ್ದೇ ಪಾಠಾನೂ ಇರಲ್ಲ

ನಾವು ತುಂಬಾ ದ್ವೇಷ ಮಾಡೋಂಥ, ಮತ್ತೆ ನಮಗೆ ಬೇಡದೇ ಇರೋ ಅನುಭವಗಳೇ ನಮ್ಮನ್ನ ಗಟ್ಟಿಯಾಗಿ ನಿಲ್ಲೋಹಂಗೆ ಮಾಡೋದು.

6. ಪ್ರಯತ್ನಪಡದೆ ಯಾವ್ದೂ ಬದಲಾಗಲ್ಲ

ಬದಲಾವಣೆ ಅನ್ನೋದು ಏನಾದ್ರೂ ಮಾಡೋದಿಕ್ಕೆ ಸಂಬಂಧಿಸಿದ್ದು. ಸುಮ್ಮನೆ ಇರೋಕಲ್ಲ. ಯಾವುದೇ ವಿಚಾರಾನ ಬದಲಾಯಿಸಕ್ಕೆ ಪ್ರಯತ್ನ ಪಡ್ದೇ ಇದ್ರೆ ಏನೂ ಬದಲಾಗೋದೇ ಇಲ್ಲ.

7. ಆಗೋಗಿರೊದನ್ನ ಬದಲಾಯ್ಸಕ್ಕೂ ಆಗಲ್ಲ

ಆಗೋಗಿದ್ದು ಹಿಂದೆ ಸರಿದಿದ್ದು ಆಯ್ತು. ಅದನ್ನ ಬದಲಾಯ್ಸಕ್ಕೆ ಬ್ರಹ್ಮನಿಂದ್ಲೂ ಆಗಲ್ಲ

8. ರಾತ್ರೋರಾತ್ರಿ ಯಾವ್ದೇ ಕೆಲ್ಸ ಮುಗ್ಸಕ್ಕಾಗಲ್ಲ

ಯಾವ್ದೇ ಕೆಲ್ಸಾನೂ ಒಂದ್ ನಿಮಿಷದಲ್ಲಿ, ಒಂದ್ ದಿನದಲ್ಲಿ ಆಗೋದಿಲ್ಲ. ಸರಿಯಾಗಿ ಮಾಡ್ಬೇಕೂಂದ್ರೆ ಸಮಯ ಬೇಕು. ತಾಳ್ಮೆ ಇರ್ಬೇಕು. ದೊಡ್ಡ ದೊಡ್ಡ ಕನಸುಗಳನ್ನ ಸಾಧಿ ತೋರ್ಸ್ಬೇಕಾದ್ರೆ ಗುರಿ ಅಷ್ಟೆ ಅಲ್ಲ ಅದರ ಕಡೆ ಹೆಜ್ಜೆ ಹೆಜ್ಜೆನೂ ಮೆಲುಕು ಹಾಕ್ತ ಸರಿಯಾದ ದಾರೀಲಿ ನಡಿತಾ ಇದ್ದೀರಾ ಅಂತ ವಿಮರ್ಶೆ ಮಾಡೊ ಛಲ ಇರಲಿ. ಅತುರದಲ್ಲಿ ಮುಗ್ಸಕ್ಕೆ ಹೋಗಿ ಕೈ ಸುಟ್ಕೋಳೋದು ಸರಿಯಲ್ಲ.

9. ಎಲ್ಲಾ ಕೆಟ್ಟದ್ರಲ್ಲೂ ಒಳ್ಳೇದೇನೋ ಒಂದ್ ಇರತ್ತೆ

ಬರೀ ಕೆಟ್ಟದಾಗ್ತಾ ಇದೆ ಅಂತ ಆ ಟೈಮಲ್ಲಿ ಆಗೊ ಒಳ್ಳೇದನ್ನ ಗಮನ್ಸೋದೇ ಇಲ್ಲ ನಾವು. ಆದ್ರೆ, ಎಷ್ಟೇ ಕೆಟ್ಟದಾಗ್ತಾ ಇದ್ರೂ ಏನೋ ಒಂದ್ ಒಳ್ಳೇದ್ ಇದ್ದೇ ಇರತ್ತೆ.

10. ಸೋಲು ಗೆಲ್ಲೋದಿಕ್ಕೆ ಒಂದ್ ಮೆಟ್ಟಿಲು ಅಷ್ಟೇ

ಸೋತೋದೆ ಅಂತ ಆಕಾಶ ಏನೂ ತಲೆ ಮೇಲೆ ಬೀಳಲ್ಲ. ಸೋಲು ಅನ್ನೋದ್ ಗೆಲ್ಲಕ್ಕೆ ಒಂದೊಂದೇ ಮೆಟ್ಟಿಲು.

11. ಬಂದಿರೋ ಕಷ್ಟನ ಎದುರಿಸಕ್ಕೆ ನನ್ನ ಕೈಲಿ ಆಗತ್ತೆ

ಯಾರೋ ಏನೋ ಮಾಡಿದ್ರೂ ಅಂದ್ರೆ ಅದೆಲ್ಲಾ ನಮಗೂ ಆಗ್ಬೇಕೂಂತ ಏನೂ ಇಲ್ಲ. ಐದು ಬೆರೆಳೂ ಸಮ ಇರಲ್ಲ; ಹಾಗೆ ಇದೂನು. ಅವರಿವರಿಗೆ ಹೋಲಿಸಿಕೊಂಡ್ರೆ ನಿಮಗೆ ನೀವು ಅವಮಾನ ಮಾಡ್ಕೊಂಡ್ ಹಾಗೆ.

12. ಯಾರೂ ಒಂಟಿ ಅಲ್ಲ

ಈ ಪ್ರಪಂಚ್ದಲ್ಲಿ ಯಾರೂ ಒಂಟಿ ಅಲ್ಲ. ಏನೇನೆ ಅಡ್ಡಿ ಆತಂಕ ಬಂದ್ರೂ ಯಾರ್ದಾದ್ರೂ ಸಹಾಯ ಸಿಕ್ಕೇ ಸಿಗತ್ತೆ. ಎಲ್ಲಾರ್ಗೂ ಅವರವರ್ ಕಷ್ಟ ಇರತ್ತೆ. ಅದನ್ನ ಗೆದ್ದು ಬರೋ ದಾರಿ ನೋಡ್ಕೋಬೇಕು ಅಷ್ಟೇ.

ನೀವು ಎದುರಿಸ್ತಾ ಇರೋ ಸಂಕಷ್ಟ ಯಾವ್ದೇ ಇರ್ಲಿ – ಈ 12 ಸತ್ಯಗಳ್ನ ಹೇಳ್ಕೊಳಿ. ಮುನ್ನಗ್ಗಕ್ಕೆ ಧೈರ್ಯ ಬಂದೇ ಬರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: