ಕಲಿಯುಗದ ಬಗ್ಗೆ ಭಾಗವತದಲ್ಲಿ ಸಾವ್ರಾರ್ ವರ್ಷದ ಹಿಂದೆ ಹೇಳಿರೋ ಈ 11 ಮಾತು ಎಷ್ಟು ಕರೆಕ್ಟಾಗಿದೆ ನೋಡಿ

’ಗಂಡು-ಹೆಣ್ಣು ಬರೀ ದೈಹಿಕ ಸುಖಕ್ಕೋಸ್ಕರ ಒಟ್ಟಗೆ ವಾಸ ಮಾಡ್ತಾರೆ’

ಬ್ರಹ್ಮಂಗೆ ಒಂದು ಹಗಲು/ರಾತ್ರಿ ಅಂದ್ರೆ ನಮ್ಗೆ 167,389,960,000 ವರ್ಷದ ಜೀವನಕ್ಕೆ ಸಮಾನವಂತೆ. ಬ್ರಹ್ಮ ತಾನು ಜೀವಿಸೋಷ್ಟು ವರ್ಷದಲ್ಲಿ 36,000 ಬ್ರಹ್ಮಾಂಡಗಳ್ನ ಸೃಷ್ಟಿ ಮಾಡ್ತಾನಂತೆ. ಬ್ರಹ್ಮನ ಪ್ರತಿಯೊಂದು ದಿನಕ್ಕೂ (ಬ್ರಹ್ಮ ಕಲ್ಪ) 14 ಮನ್ವಂತರಗಳಿವೆ. ಪ್ರತೀ ಮನ್ವಂತರದಲ್ಲಿ 72 ಚತುರ್ಯುಗ ಇವೆ. ಪ್ರತಿ ಚತುರ್ಯುಗದಲ್ಲಿ 4 ಯುಗ - ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಈಗ ನಾವಿರೋದು ಕಲಿಯುಗದಲ್ಲಿ.

ಕಲಿಯುಗದಲ್ಲಿ ನಮ್ಮ ಸುತ್ತ ಮುತ್ತ ಏನೇನ್ ಬದಲಾವಣೆ ಆಗತ್ತೆ ಅಂತ 5,000 ವರ್ಷದ ಹಿಂದೇನೇ ಭಾಗವತ ಪುರಾಣದಲ್ಲಿ ಬರೆದಿದೆ. ಅವು ಈಗಿನ ಕಾಲಕ್ಕೆ ಎಷ್ಟು ಸರಿಯಾಗಿ ಹೇಳಿದೆ ಅನ್ನೋದನ್ನ ಕೆಳಗೆ ಕೊಟ್ಟಿರೋ ವಿಷಯಗಳ್ನ ಓದಿ ನೀವೇ ತೀರ್ಮಾನ ಮಾಡಿ...

1. ಕಲಿಯುಗದಲ್ಲಿ ದುಡ್ಡೇ ದೊಡ್ದಪ್ಪ; ಒಳ್ಳೇ ವ್ಯಕ್ತಿತ್ವ ಅಂದರೇನು, ಒಳ್ಳೆ ಗುಣ ಅಂದರೆ ಯಾವುದು, ನ್ಯಾಯ ಯಾವುದು ಅನ್ನೋದರ  ತೀರ್ಮಾನವೆಲ್ಲ ಅದರಿಂದಲೇ ಆಗುತ್ತೆ - ಶ್ರೀಮದ್ ಭಾಗವತ 12.2.2

2. ಗಂಡು-ಹೆಣ್ಣು ಬರೀ ದೈಹಿಕ ಸುಖಕ್ಕೋಸ್ಕರ ಒಟ್ಟಗೆ ವಾಸ ಮಾಡ್ತಾರೆ; ಗಂಡಸಿನ ಗಂಡಸುತನ, ಹೆಂಗಸಿನ ಹೆಂಗಸುತನ ಎರಡಕ್ಕೂ ಲೈಂಗಿಕ ಅರ್ಥಗಳು ಮಾತ್ರ ಉಳಿದಿರುತ್ತವೆ; ವ್ಯಾಪಾರದಲ್ಲಿ ಮೋಸವೇ ಮುಖ್ಯವಾಗುತ್ತೆ; ಜನಿವಾರ ಹಾಕಿಕೊಂಡಿದ್ದರೆ ಸಾಕು, ಅವನ್ನ ಬ್ರಾಹ್ಮಣ ಅಂತ ಕರೀತಾರೆ - ಶ್ರೀಮದ್ ಭಾಗವತ 12.2.3

3. ಭೂಮಿಯ ಮೇಲೆ ಭ್ರಷ್ಟರ ಜನಸಂಖ್ಯೆ ಹೆಚ್ಚಾಗಿ, ಯಾರು ಹೆಚ್ಚು ಬಲಿಷ್ಠರು ಅಂತ ತೋರಿಸಿಕೊಳ್ತಾರೋ ಅವರೇ ರಾಜಕೀಯವಾಗಿ ಮೇಲಕ್ಕೆ ಏರ್ತಾರೆ - ಶ್ರೀಮದ್ ಭಾಗವತ 12.2.7

4. ಎಲ್ಲೆಲ್ಲೂ ಚಳಿ, ಗಾಳಿ, ಸೆಕೆ, ಮಳೆ ಮತ್ತು ಮಂಜುಗಳಿಂದ ಜನರಿಗೆ ತೊಂದರೆಯಾಗುತ್ತೆ; ಜಗಳ, ಹಸಿವು, ಬಾಯಾರಿಕೆ, ರೋಗ-ರುಜಿನಗಳು, ಆತಂಕ ಹೆಚ್ಚಾಗುತ್ತೆ - ಶ್ರೀಮದ್ ಭಾಗವತ 12.2.10

5. ವಯಸ್ಸಾದ ತಂದೆ ತಾಯಿಗಳ್ನ ಮಕ್ಕಳು ನೋಡ್ಕೊಳಲ್ಲ - ಶ್ರೀಮದ್ ಭಾಗವತ 12.3.42

6. ಊರುಗಳಲ್ಲಿ ಕಳ್ಳರೇ ತುಂಬಿರ್ತಾರೆ; ವೇದಗಳಿಗೆ ನಾಸ್ತಿಕರು ಅರ್ಥ ಕೊಡ್ತಾರೆ; ರಾಜಕೀಯ ನಾಯಕರು ಪ್ರಜೆಗಳನ್ನ ಹೆಚ್ಚು-ಕಡಿಮೆ ತಿಂದು ಹಾಕ್ತಾರೆ; ಚಿಂತಕರು ಅನ್ನಿಸಿಕೊಳ್ಳುವವರು ತಮ್ಮ ಹೊಟ್ಟೆ ಪೂಜೆ ಮಾಡ್ಕೋತಾರೆ - ಶ್ರೀಮದ್ ಭಾಗವತ 12.3.32

7. ಸೇವಕರು ದುಡ್ಡಿಗೋಸ್ಕರ ಮಾತ್ರ ಕೆಲ್ಸ ಮಾಡ್ತಾರೆ. ಕೆಲ್ಸ ಮಾಡದೇ ಇರೋ ಸೇವಕರನ್ನ ಯಜಮಾನ ಒಂದ್ ನಿಮಿಷ ಕೂಡ ಇಟ್ಕೊಳಲ್ಲ -  ಶ್ರೀಮದ್ ಭಾಗವತ 12.3.36

8. ನಾಲ್ಕು ಕಾಸಿಗೋಸ್ಕರ ಜನ ಒಬ್ಬರನ್ನೊಬ್ಬರು ದ್ವೇಷಿಸ್ತಾರೆ; ದುಡ್ಡಿಗಾಗಿ ತಾವೂ ಜೀವ ಕೊಡಕ್ಕೆ ರೆಡಿ ಇರ್ತಾರೆ, ತಮ್ಮ ನೆಂಟರಿಷ್ಟರನ್ನ ಸಾಯಿಸಕ್ಕೂ ರೆಡಿ ಇರ್ತಾರೆ - ಶ್ರೀಮದ್ ಭಾಗವತ 12.3.41

9. ದೇವರ ಹೆಸರಿನಲ್ಲಿ ಕಾವಿ ಬಟ್ಟೆ ಹಾಕ್ಕೊಂಡು ಜನ ದುಡ್ಡು ಮಾಡ್ಕೊತಾರೆ; ಧರ್ಮ ಅಂದ್ರೆ ಏನು ಅಂತ್ಲೇ ಗೊತ್ತಿಲ್ಲದಿರೋರು ದೊಡ್ಡ ದೊಡ್ಡ ಸ್ಥಾನಗಳಿಗೆ ಏರಿ ಧರ್ಮದ ಬಗ್ಗೆ ಪ್ರವಚನ ಕೊಡ್ತಾರೆ - ಶ್ರೀಮದ್ ಭಾಗವತ 12.3.38

10. ಮನುಷ್ಯನ ಆಯಸ್ಸು 50 ವರ್ಷಕ್ಕೆ ಇಳಿಯತ್ತೆ - ಶ್ರೀಮದ್ ಭಾಗವತ 12.2.11

11. ಧರ್ಮ, ಸತ್ಯ, ಶುಚಿತ್ವ, ತಾಳ್ಮೆ, ದಯೆ, ಕರುಣೆ, ದೈಹಿಕ ಶಕ್ತಿ ಮತ್ತು ನೆನಪಿನ ಶಕ್ತಿ ದಿನೇ ದಿನೇ ಕುಂದತ್ತೆ; ಇದು ಕಲಿಯ ಪ್ರಭಾವ - ಶ್ರೀಮದ್ ಭಾಗವತ 12.2.1

ಎಲ್ಲಾ ಎಷ್ಟು ಕರೆಕ್ಟಾಗಿ ಹೇಳಿದಾರೆ ಅನ್ಸಲ್ವಾ ನಿಮ್ಗೆ?

ಏನೇ ಇರಲಿ, ತುಂಬ ಬೇಜಾರ್ ಮಾಡ್ಕೋಬೇಡಿ. ಕೃಷ್ಣನ ನಾಮಸ್ಮರಣೆಯಿಂದ ಭವಬಂಧನದ ಜಂಜಾಟದಿಂದ ಮುಕ್ತಿ ಸಿಗತ್ತೆ ಅನ್ನೋದು ಕೂಡ ಅದೇ ಶ್ರೀಮದ್ಭಾಗವತದಲ್ಲಿ ಬರೆದಿದೆ (12.2.51).

ಚಿತ್ರಗಳು: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: