ಹಳೇ ಬೆಂಗಳೂರಿನ ಈ ಹೊಸ ಫೋಟೋಗಳ್ನ ನೋಡಿ ನಿಮ್ಮ ಅನುಭವಗಳು, ನಿಮ್ಮ ನೆನಪುಗಳು ಉಕ್ಕಿ ಬರುತ್ತವೆ

ಹಿಂಗಿತ್ತಾ ನಮ್ಮ ಜೀವನ?

ನಮ್ಮೂರು ಅಂದ್ರೆ ನಮಗೆ ಯಾವತ್ತೂ ಸ್ಪೆಶಲ್ಲು. ನಾವು ಅದನ್ನ ಬಿಟ್ಟು ಎಲ್ಲೆಲ್ಲಿಗೋ ಹೋಗಬಹುದು, ಆದರೆ ಅದು ನಮ್ನ ಬಿಡಲ್ಲ.

ಈಗ ನೋಡಿ, ಅರ್ಜುನ್ ಕಾಮತ್ ಅನ್ನೋರೊಬ್ರು ಬೆಂಗಳೂರಲ್ಲಿ ಇದ್ದು ಈಗ ಅಮೇರಿಕದಲ್ಲಿ ಸೆಟಲ್ ಆಗಿದಾರೆ (ಲಾಸ್ ಆಂಜಲೀಸಲ್ಲಿ). ಆದರೆ ಅವರಿಗೆ ಬೆಂಗಳೂರಿನ ನೆನಪುಗಳು ಎಷ್ಟು ಕಾಡಿವೆ ಅಂದ್ರೆ ಒಂದು ಅದ್ಭುತವಾದ ಫೋಟೋ‌ ಆಲ್ಬಂ ಹೊರತಂದಿದಾರೆ. ಆಲ್ಬಂ ಹೆಸರು: Nam Ooru Bengaluru: A walk down memory lane ಅಂತ ಇಟ್ಟಿದಾರೆ. ಹೆಸರಲ್ಲೇ ಅವರ ನೆನಪುಗಳು ಕಾಣ್ತಿವೆ. ಇನ್ನು ಫೋಟೋಗಳಲ್ಲಿ ಕೇಳಬೇಕಾ? ಬನ್ನಿ, ಕಣ್ಣು ಹಾಯಿಸಿ... ಎಲ್ಲಾ ಚಾಮರಾಜಪೇಟೆ, ಕಮರ್ಶಿಯಲ್ ಸ್ಟ್ರೀಟಲ್ಲಿ ತೆಗೆದಿರೋ ಫೋಟೋಗಳಿವು... ಅದರಲ್ಲಿ ಕಾಣಿಸೋ ಹುಡುಗಿ ಅರ್ಚನಾ ಅಕಿಲ್ ಕುಮಾರ್ ... ಬೆಂಗಳೂರಲ್ಲಿ ಬಾಲ್ಡ್-ವಿನ್ ಸ್ಕೂಲಲ್ಲಿ ಓದಿ ಈಗ ಮುಂಬೈಲಿ ಮಾಡೆಲ್ಲು... ಅಂದ್ರೆ ಇವಳನ್ನೂ ಬೆಂಗಳೂರಿನ ನೆನಪುಗಳು ಕಡಿಮೆ ಕಾಡ್ತಿಲ್ಲ...

"ಅಜ್ಜಿ, ನಿಂಗೊಂದು ಸೀರೆ ತಂದಿದೀನಿ..." ಅಂದಾಗ ಅವಳು ಮುದ್ದು ಮಾಡೋದು ತಂದಿದೀನಿ ಅಂತಲ್ಲ, ಬಂದಿದೀನಿ ಅಂತ...

ಬೆಳ್-ಬೆಳಗ್ಗೆ ದೇವಸ್ಥಾನದ ಗಂಟೆ ಹೊಡೆದಾಗ ಎಚ್ಚರ ಆಗ್ತಿತ್ತು... ಅಡುಗೆ ಮನೆಯಿಂದ ಅಮ್ಮ ಮಾಡಿರೋ ಗಮಗಮ ಕಾಫಿ ವಾಸನೆ ಬೇರೆ...

ಪಕ್ಕದ್ಮನೆ ಅಜ್ಜಿ "ಅಲ್ಲ ಕಣೇ, ನೀನು ಯಾವಾಗಲೇ ಮದುವೆ ಆಗೋದು?" ಅಂತ ಕೇಳಿದಾಗ...

ಎಲೆಮರೆ ಕಾಯಿ ಥರ ಈ ಗಲ್ಲೀಲಿ ನಾನು ಹುಟ್ಟಿ ಬೆಳೆದೆ... ಆ ದಿನಗಳ್ನ ಮರೆಯಕ್ಕಾಗತ್ತಾ?

ಅಮ್ಮ ನನಗೆ ರಂಗೋಲಿ ಹಾಕೋದು ಹೇಳಿಕೊಟ್ಟ ನೆನಪಾಯಿತು...

ಆ ದೇವಸ್ಥಾನದ ಗಂಟೆ ಸದ್ದು, ಆ ಪೂಜಾರಿ ಮುಖದ ಮೇಲಿನ ಸಂತೋಷ ನೆಮ್ಮದಿಗಳು...

ಯಾವುದೇ ಯೋಚನೆ ಇಲ್ಲದ ಬಾಲ್ಯ ನನಗೂ ಇತ್ತಾ ಅನ್ನಿಸುತ್ತೆ... ಈಗಿನ ಜಂಜಾಟಗಳ ನಡುವೆ ಆ ದಿನಗಳ ನೆನಪೇ ಒಂದು ನೆಮ್ಮದಿ...

ಹೂ ತೊಗೊಳ್ವಾಗ ಅದೆಷ್ಟು ಚೌಕಾಸಿ ಮಾಡ್ತಿದ್ರು ನಮ್ಮಮ್ಮ... ಆಗ ಆ ಕ್ಷಣಗಳ ಬೆಲೆ ಗೊತ್ತಾಗ್ತಿರ್ಲಿಲ್ಲ... ಈಗ ಎಷ್ಟು ದುಡ್ಡು ಕೊಟ್ಟರೂ ಸಿಗಲ್ಲ...

ಈ ಬೀದೀಲಿ ಹೆಜ್ಜೆಹೆಜ್ಜೆಗೂ ನೆನಪುಗಳು ಕಾಡ್ತಿವೆ... ಅಲ್ಲಿ ನಾವೆಲ್ಲ ಆಡ್ತಾ ಇದ್ವಿ... ಅವರ ಮನೆ ಗಾಜು ಒಡೆದಿದ್ವಿ... ಇಲ್ಲಿ ಕುಂಟೇಬಿಲ್ಲಿ ಆಡ್ತಿದ್ವಿ...

ಅಂದಹಾಗೆ ಇವರೇ ಅರ್ಜುನ್ನು...

ಆಮೇಲೆ ಅರ್ಚನಾ...

 

ನೆನ್ನೆಗಳ್ನ ಮರೆತು ಬಿಟ್ಟರೆ ಅದೆಂಥ ಜೀವನ? ನಿಜ ತಾನೇ?

ಚಿತ್ರಗಳ ಮೂಲ: ಅರ್ಜುನ್ ಕಾಮತ್

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

IIT ಮದ್ರಾಸ್ ಕರಾಮತ್ತು

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ ಇತಿಶ್ರೀ ಹಾಡೋ ಅಂತ ಸಮಯ ಬಂದಿದೆ. ಇದು IIT ಮದ್ರಾಸ್ ಸಿಬ್ಬಂದಿ ಕೃಪೆ! ನಾವೇನ್ ಹೇಳ್ತಾ ಇದ್ದೀವಿ ಅಂತ ತಲೆಕೆಡ್ತಾ ಇದ್ಯಾ? ಮುಂದೋದಿ...ನಿಮಗೇ ಗೊತ್ತಾಗತ್ತೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿರೋ ಪ್ರಕಾರ IIT ಮದ್ರಾಸಲ್ಲಿ ಒಂದಿಷ್ಟು ಜನ ಪುಣ್ಯಾತ್ಮರು ಸೇರ್ಕೊಂಡು ನಮ್ಮನೆ ಟೀಪಾಯ್ ಅಷ್ಟಗಲದ್ದು ಸೋಲಾರ್ ಪ್ಲಾಂಟ್ ತಯಾರು ಮಾಡಿದ್ದಾರೆ. ಈ ಸೋಲಾರ್ ಪ್ಲಾಂಟನ್ನ ನಮ್ಮನೆ ತಾರ್ಸಿ ಮೇಲೆ ಅಳವಡಿಸೋದ್ರಿಂದ ಕರೆಂಟ್ ಹೋಗೋ ಸಮಸ್ಯೆ ಇಂದ ಮುಕ್ತಿ ಸಿಗತ್ತೆ. ಇದರ ಜೊತೆಗೆ, ಕರೆಂಟ್ ಬಿಲ್ಲೂ ಅರ್ಧಕ್ಕರ್ಧ ಕಡಿಮೆ ಆಗುತ್ತಂತೆ. ಇದನ್ನ ಹಾಕ್ಸಕ್ಕೆ 20,000ದಷ್ಟು ದುಡ್ಡಿದ್ರೆ ಸಾಕು. ಇದರಲ್ಲಿ 125W ಪ್ಯಾನೆಲ್ ಜೊತೆಗೆ 0.5kWh ಬ್ಯಾಟರಿ ಇರುತ್ತೆ.

ಮೂಲ

ಏನು... ಇದನ್ನ ಕೇಳಿ ನಿಮಗೂ ಖುಷಿ ಆಯ್ತೋ ಇಲ್ವೋ? ಯಾಕಂದ್ರೆ, ಈಗಿರೋ ಮಾರ್ಕೆಟ್ ರೇಟ್ ಪ್ರಕಾರ, ಇದೇ ರೀತಿ ಪ್ಯಾನಲ್ ಹಾಕ್ಸಕ್ಕೆ ಬರೋಬ್ಬರಿ 1,20,000 ರುಪಾಯಿ ಬೇಕು ಅಂತ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದೋರು ಹೇಳ್ತಾರೆ. ಆದ್ರೆ, ಈ ಪ್ಲಾಂಟ್ ಅದಕ್ಕಿಂತ ಎಷ್ಟು ಪಟ್ಟು ಕಡಿಮೆ ನೋಡಿದ್ರಾ?

ಈ ಸೋಲಾರ್ ಪ್ಯಾನಲ್ ಇಂದ ಒಂದೆರ್ಡು ಟ್ಯೂಬ್ಲೈಟು, ಫ್ಯಾನು, ಚಾರ್ಜಿಂಗ್ ಪಾಯಿಂಟು, ಟೀವಿ ಎಲ್ಲಾನೂ ಓಡಿಸ್ಬೋದಂತೆ. ಇದಕ್ಕಿಂತ ಸ್ವಲ್ಪ ದೊಡ್ದ ಮಾಡೆಲ್ ತಗೊಂಡ್ರೆ, AC ಮತ್ತು ವಾಶಿಂಗ್ ಮಷಿನ್ ಬಿಟ್ಟು ಇನ್ನೆಲ್ಲಾ ಸಲಕರಣೆಗಳನ್ನೂ ಓಡಿಸ್ಬೋದಂತೆ ಕಣ್ರೀ!

ಪ್ರೊಫೆಸರ್ ಅಶೋಕ್ ಝುಂಝುಂನ್ವಾಲಾ ಹೇಳೋ ಪ್ರಕಾರ, ಈ ಸೋಲಾರ್ ಪ್ಲಾಂಟು ಪೂರ್ತಿ DC ವೈರಿಂಗ್ ಜೊತೆ ಬರೋದ್ರಿಂದ, ಬೇರೆ ಸೋಲಾರ್ ಪ್ಯಾನಲ್ಗಳ ಥರ DCನ ACಗೆ ಪರಿವರ್ತಿಸಲ್ಲ. ಇದ್ರಿಂದ ತುಂಬ ಎನರ್ಜಿ ಉಳಿತಾಯ ಆಗಿ ಕರೆಂಟ್ ಬಿಲ್ಲು ಕಮ್ಮಿ ಆಗುತ್ತೆ. ಗಮನಿಸಿ: ಸಾಮಾನ್ಯವಾಗಿ ನಮ್ಮ ಮನೆಗಳಲ್ಲೆಲ್ಲ AC ವೈರಿಂಗ್ ಮತ್ತು ಎಲೆಕ್ಟ್ರಿಕ್ ಸಾಮನುಗಳು ಇರೋದ್ರಿಂದ ಅದನ್ನೆಲ್ಲ ನೇರವಾಗಿ ಇದಕ್ಕೆ ಅಳವಡಿಸಕ್ಕೆ ಆಗಲ್ಲ.

ತಮಿಳುನಾಡು ಸರ್ಕಾರ, ದೊಡ್ಡ ದೊಡ್ದ MNCಗಳ ಜೊತೆ ಸೇರಿ  ಆಗ್ಲೇ 15,000 ಹಳ್ಳಿ ಮನೆಗಳಿಗೆ ಇದನ್ನ ಅಳವಡಿಸಿದ್ದಾರಂತೆ. ಮದ್ರಾಸಲ್ಲಿ 2015ರಲ್ಲಿ ಪ್ರವಾಹ ಬಂದಾಗ, ಇದರ ಸಹಾಯದಿಂದ 3 ದಿನ ಕರೆಂಟ್ ತೊಂದರೆ ಆಗ್ಲಿಲ್ವಂತೆ. ಇದರ ಜೊತೆ ರಾಜಸ್ಥಾನ್, ಅಸ್ಸಾಮಲ್ಲೂ ಹಾಕಿದ್ದಾರೆ. ಇನ್ಮುಂದೆ, ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಒರಿಸ್ಸಾಲೂ ಇವುಗಳನ್ನ ಅಳವಡಿಸ್ತಾರಂತೆ.

IIT ಅವರ ಈ ಕೆಲಸ ಇಷ್ಟ ಆಗಿ, ನ್ಯೂಯಾರ್ಕಲ್ಲಿರೋ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (IEEE) ಇವರು ಈ ಯೋಜನೆಗೆ '2017ರ ಅತ್ಯುತ್ತಮ ಜನಸೇವಾ ತಂತ್ರಜ್ಞಾನ' ಅನ್ನೋ ಪ್ರಶಸ್ತಿ ಕೊಟ್ಟಿದ್ದಾರೆ.

ನಂಗಂತೂ ಇದನ್ನ ಕೇಳಿ ತುಂಬಾನೇ ಖುಷಿಯಾಯ್ತಪ್ಪ. ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: