ಆಫೀಸ್ ಕೆಲಸ ಮಾಡೋರು ಆರೋಗ್ಯ ಕಾಪಾಡ್ಕೊಳಕ್ಕೆ ಈ 10 ವಿಷಯದ ಕಡೆ ಒಂಚೂರು ಗಮನ ಕೊಡಿ

ನಿಮ್ಮ ಜೀವನಾನೇ ಬದಲಾಗುತ್ತೆ

ಆಫೀಸ್ ಕೆಲಸ ಅಂದ್ರೆ ಬರೀ ಡೆಸ್ಕು, ಕಂಪ್ಯೂಟರು, ನಾಲ್ಕು ಗೋಡೆಗಳು. ಇದ್ರ ನಡುವೆ ದಿನಾ ಪೂರ್ತಿ ಇರ್ಬೇಕು. ಹೊರಗಡೆ ಕೆಲಸ ಅಂದ್ರೆ ಒಂಚೂರಾದ್ರೂ ಮೈಕೈಗೆ ಕೆಲಸ ಸಿಗತ್ತೆ. ಆದ್ರೆ ಆಫೀಸಲ್ಲಿ ಹಾಗಲ್ಲ. ಕೂತ ಕಡೇನೇ ಕೂತೂ ಕೂತೂ ಆರೋಗ್ಯ ಸಮಸ್ಯೆಗಳು ಬರೋ ಛಾನ್ಸ್ ಜಾಸ್ತಿ. ಇಲ್ಲಿ ಕೊಟ್ಟಿರೋ 10 ವಿಷಯಗಳ ಬಗ್ಗೆ ಕಾಳಜಿ ತೊಗೊಂಡ್ರೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತೆ. ಆರೋಗ್ಯ ಮಹಾಭಾಗ್ಯ ಅಲ್ಲವೇ?

1. ಕೆಲಸದ ಒತ್ತಡದಲ್ಲಿ ನಿದ್ದೆ ಮಾಡೋದನ್ನ ಮರೀಬೇಡಿ, ದಿನಕ್ಕೆ 8 ಗಂಟೆ ನಿದ್ದೆ ಮಾಡಿ

ಆಫೀಸ್ ಕೆಲಸಗಳಲ್ಲಿ ಎಷ್ಟೋ ಜನ ನಿದ್ದೇನೇ ಮರೆತು ಬಿಡ್ತಿದ್ದಾರೆ. ಆರೋಗ್ಯವಾಗಿ ಇರ್ಬೇಕು ಅಂದ್ರೆ ದಿನಕ್ಕೆ 8 ಗಂಟೆ ನಿದ್ದೆ ಮಾಡ್ಬೇಕು ಅಂತ ಡಾಕ್ಟ್ರುಗಳೇ ಹೇಳ್ತಿದ್ದಾರೆ.  ಅದನ್ನ ಪಾಲಿಸಿದ್ರೆ ಆಫೀದಲ್ಲೂ ನೀವೂ ಆರೋಗ್ಯವಾಗಿ ಕೆಲಸ ಮಾಡ್ಬೋದು. ಕೆಲಸದ ಒತ್ತಡ, ವರ್ಕ್ ಲೋಡಿಂದ ಕೆಲವರಿಗೆ ನಿದ್ದೆ ಮಾಡಕ್ಕೆ ಟೈಮೇ ಸಿಗಲ್ಲ. ಇದ್ರಿಂದ ನಿದ್ದೆ ಬರ್ದೆ ಇರೋದು, ಮಾನಸಿಕ ಸಮಸ್ಯೆಗಳು ಜೊತೆಗೆ ಹೃದಯ ಸಮಸ್ಯೆಗಳೂ ಬರ್ಬೋದು. ಆದ್ರಿಂದ ಕಣ್ತುಂಬ ನಿದ್ದೆ ಮಾಡೋದನ್ನ ರೂಢಿಸಿಕೊಳ್ಳಿ.

2. ಲ್ಯಾಪ್‌ಟಾಪನ್ನ ತೊಡೆ ಮೇಲೆ ಇಟ್ಕೊಂಡು ಕೆಲಸ ಮಾಡೋದನ್ನ ಕಡಿಮೆ ಮಾಡ್ಕೊಳ್ಳಿ

ಕೆಲವರು ಆಫೀಸಲ್ಲೂ ಅಷ್ಟೇ ಮನೆಯಲ್ಲೂ ಅಷ್ಟೆ ಲ್ಯಾಪ್‌ಟಾಪನ್ನ ತೊಡೆ ಮೇಲೆ ಇಟ್ಕೊಂಡು ಕೆಲಸ ಮಾಡ್ತಿರ್ತಾರೆ. ಈ ರೀತಿ ಮಾಡೋದ್ರಿಂದ ಆರೋಗ್ಯ ಕೆಡುತ್ತೆ. ಆ ಭಾಗದಲ್ಲಿರೋ ಚರ್ಮ ಸಮಸ್ಯೆಗಳು ಬರ್ತಾವೆ. ಮುಖ್ಯವಾಗಿ ಗಂಡಸರಲ್ಲಿ ವೀರ್ಯಾಣುಗಳ ಕೊರತೆ ಎದುರಾಗುತ್ತೆ. ಲ್ಯಾಪ್‌ಟಾಪನ್ನು ತೊಡೆ ಮೇಲೆ ಇಟ್ಕೊಂಡು ಹೆಚ್ಚಾಗಿ ಕೆಲಸ ಮಾಡೋದಕ್ಕೆ ಹೋಗ್ಬೇಡಿ.

3. ರೆಗ್ಯುಲರ್ ಆಗಿ ವ್ಯಾಯಾಮ ಮಾಡೋದನ್ನ ರೂಢಿಸಿಕೊಳ್ಳಿ

ಆಫೀಸಲ್ಲಿ ಒಂದೇ ಕಡೆ ತುಂಬಾ ಹೊತ್ತು ಕೂತಿರ್ತೀವಿ. ಆ ರೀತಿ ಮಾಡೋದ್ರಿಂದ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗ್ತಾವೆ. ಒಂದೇ ಕಡೆ 8 ಗಂಟೆಗಿಂತ ಜಾಸ್ತಿ ಹೊತ್ತು ಕೂರಬಾರದು. ಆ ರೀತಿ ಕೂತೇ ಇದ್ರೆ ಹೊಟ್ಟೆ ಬರೋದು, ಸಕ್ಕರೆ ಕಾಯಿಲೆ, ಹೃದಯ ಸಮಸ್ಯೆಗಳು, ಮೈಕೈ ನೋವು, ಕ್ಯಾನ್ಸರ್ ಕೂಡ ಬರ್ಬೋದು ಅಂತಿದ್ದಾರೆ ತಜ್ಞರು. ಒಂದೇ ಕಡೆ ಕೂತಿರ್ಬೇಡಿ. ಅತ್ತಿತ್ತ ಓಡಾಡಿ, ಲಿಫ್ಟ್ ಬಿಟ್ಟು ಮೆಟ್ಲು ಮೇಲೆ ನಡ್ಕೊಂಡ್ ಹೋಗಿ. ಇದ್ರ ಜೊತೆಗೆ ರೆಗ್ಯುಲರ್ ಆಗಿ ವ್ಯಾಯಾಮ ಮಾಡೋದನ್ನ ರೂಢಿಸಿಕೊಳ್ಳಿ. 

4. ಬೆಳಗ್ಗೆ ತಿಂಡಿ ತಿನ್ನೋದನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ

ಆಫೀಸಿಗೆ ಟೈಮ್ ಆಯ್ತು ಅಂತ ಎಷ್ಟೋ ಸಲ ಬೆಳಗಿನ ತಿಂಡಿ ಮಾಡೋದಕ್ಕೇ ಆಗಿರಲ್ಲ. ನಮ್ಮ ಆರೋಗ್ಯದ ದೃಷ್ಟಿಯಿಂದ ಬೆಳಗಿನ ತಿಂಡಿ ತುಂಬಾ ಮುಖ್ಯ. ಬೆಳಗಿನ ತಿಂಡಿ ತಿಂದೇ ಇದ್ರೆ ನಾನಾ ತರದ ಆರೋಗ್ಯ ಸಮಸ್ಯೆಗಳು ಎದುರಾಗ್ತಾವೆ. ಇದ್ರಿಂದ ಮಾನಸಿಕವಾಗಿ ಒತ್ತಡಾನೂ ಜಾಸ್ತಿ ಆಗುತ್ತೆ. ಆದ್ರಿಂದ ಆಫೀಸಲ್ಲಿ ಆರೋಗ್ಯವಾಗಿರ್ಬೇಕು ಅಂದ್ರೆ ಯಾವುದೇ ಕಾರಣಕ್ಕೂ ಬೆಳಗ್ಗೆ ತಿಂಡಿ ತಿನ್ನೋದನ್ನ ಮರೀಬೇಡಿ. 

5. ಆಫೀಸಲ್ಲಿ ಶುದ್ಧವಾದ ಗಾಳಿ ಇರೋ ಹಂಗೆ ನೋಡ್ಕೊಳ್ಳಿ

ಆಫೀಸಲ್ಲಿ ಎಲ್ಲಾ ಬಾಗಿಲು, ಕಿಟಕಿ ಕ್ಲೋಸ್ ಮಾಡ್ಕೊಂಡು ಕೆಲಸ ಮಾಡೋದ್ರಿಂದ ನಮ್ ದೇಹಕ್ಕೆ ಬೇಕಾಗಿರೋಷ್ಟು ಶುದ್ಧವಾದ ಗಾಳಿ ಸಿಗೋದಿಲ್ಲ. ಆಫೀಸುಗಳಲ್ಲಿ ಶುದ್ಧವಾದ ಗಾಳಿ ಸಿಗೋ ಹಂಗೆ ನೋಡ್ಕೊಳ್ಳಿ. ಶುದ್ಧವಾದ ಗಾಳಿ ಸಿಗಲಿಲ್ಲ ಅಂದ್ರೆ ತಲೆನೋವು, ವಾಕರಿಕೆ ಬರೋಹಂಗಾಗೋದು, ಸುಸ್ತಾಗೋದು ಆಗುತ್ತೆ. ಆಗಾಗ ಆಫೀಸಿಂದ ಹೊರಗ್ ಬಂದು ಶುದ್ಧವಾದ ಗಾಳಿಯಲ್ಲಿ ಉಸಿರಾಡಿ. 

6. ಕಂಪ್ಯೂಟರ್ ಕೀಬೋರ್ಡು ಬಳಸೋದನ್ನ ಕಡಿಮೆ ಮಾಡ್ಕೊಳ್ಳಿ

ಕಂಪ್ಯೂಟರ್ ಕೀಬೋರ್ಡನ್ನ ಜಾಸ್ತಿ ಬಳಸೋದ್ರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾರ್ಗಾವೆ. ಆಗಾಗ ಕೈಗಳಿಗೆ ವ್ಯಾಯಾಮ ಆಗೋ ತರ ನೋಡ್ಕೊಳ್ಳಿ. ಮುದ್ರಾ ಯೋಗ ಕಲಿತರೆ ಒಳ್ಳೇದು. ಕೀಬೋರ್ಡು ಜಾಸ್ತಿ ಬಳಸೋದ್ರಿಂದ ನರಗಳ ದೌರ್ಬಲ್ಯ ಬರೋ ಛಾನ್ಸ್ ಇದೆ. ಆಗಾಗಿ ಆಫೀಸಲ್ಲಿ ಇದ್ರ ಬಗ್ಗೆ ಎಚ್ಚರವಹಿಸಿ.

7. ಎಡಬಿಡದೆ ಕಾಡೋ ಬೆನ್ನು ನೋವನ್ನ ಕಡೆಗಣಿಸಬೇಡಿ

ಆಫೀಸಲ್ಲಿ ಕೂತೂ ಕೂತೂ ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗ್ತಾವೆ. ಅಂತವುಗಳಲ್ಲಿ ಎಡಬಿಡದೆ ಕಾಡೋ ಬೆನ್ನು ನೋವು ಒಂದು. ಆಗಾಗ ಎದ್ದು ಓಡಾಡೋದು, ಸೊಂಟಕ್ಕೆ ವ್ಯಾಯಾಮ ಆಗೋ ತರಹ ಸಣ್ಣಪುಟ್ಟ ವ್ಯಾಮಾಯಗಳನ್ನು ದಿನಾ ಮಾಡ್ತಿದ್ರೆ ಆ ರೀತಿ ಸಮಸ್ಯೆಗಳು ಬರಲ್ಲ. ಕಂಪ್ಯೂಟರು, ಕೀಬೋರ್ಡು ಜಾಸ್ತಿ ಬಳಸೋದ್ರಿಂದ ಈ ರೀತಿ ಸಮಸ್ಯೆ ಬರುತ್ತೆ. ಇದರ ಬಗ್ಗೆ ಎಚ್ಚರ ವಹಿಸಿ. 

8. ತುಂಬಾ ಕಿರಿಕ್ ಬಾಸ್ ಜೊತೆ ಇದ್ರೂನೂ ತೊಂದ್ರೆ ತಪ್ಪಿದ್ದಲ್ಲ

ಕೆಲವೊಂದು ಆಫೀಸುಗಳಲ್ಲಿ ಬಾಸು ಅಂದ್ರೆ ಸಾಕ್ಷಾತ್ ದೂರ್ವಾಸ ಮುನಿ ತರ ಇರ್ತಾರೆ. ಅಂತಾವ್ರಿಂದ ಮಾನಸಿಕ ಆರೋಗ್ಯನೂ ಕೆಡುತ್ತೆ. ಸರಿಯಾಗಿ ಕೆಲಸ ಮಾಡೋದಕ್ಕೆ ಆಗಲ್ಲ. ಹೃದಯ ಸಮಸ್ಯೆಗಳೂ ಬರಬಹುದು. ಇದಕ್ಕೆ ಏನ್ ಮಾಡ್ಬೇಕು ಅಂತ ಪರಿಹಾರಾನ ನೀವೇ ಹುಡುಕಿ. ಸೂಕ್ತ ನಿರ್ಧಾರ ಕೈಗೊಳ್ಳಿ. ತುಂಬಾ ಕಿರಿಕಿರಿ ತಪ್ಪಿದ್ದ ಅಂದ್ರೆ ಬೇರೆ ಕೆಲಸ ನೋಡೋದು ಉತ್ತಮ. 

9. ಮನೆಯಿಂದ ಆಫೀಸು ತುಂಬಾ ದೂರ ಇರದಂಗೆ ನೋಡ್ಕೊಳ್ಳಿ

ಮನೆಯಿಂದ ಆಫೀಸಿಗೆ ಹೋಗ್ಬೇಕು ಅಂದ್ರೆ ಗಂಟೆಗಟ್ಟಳೆ ಪ್ರಯಾಣ ಮಾಡೋದು ಒಳ್ಳೇದಲ್ಲ. ಇದ್ರಿಂದ ನಮ್ಮ ಶರೀರಕ್ಕೆ ಆಯಾಸ ಆಗುತ್ತೆ. ಕೆಲಸ ಮಾಡೋ ಮೂಡೋ ಹೊರಟು ಹೋಗುತ್ತೆ. ಮಾನಸಿಕ ಸಮಸ್ಯೆಗಳೂ ಬರ್ತಾವೆ. ಆದ್ರಿಂದ 20-30 ನಿಮಿಷದಲ್ಲಿ ಆಫೀಸಿಗೆ ಹೋಗೋ ಹಂಗೆ ನೋಡ್ಕೊಳ್ಳಿ. ಮಾನಸಿಕ ಒತ್ತಡ, ತಳಮಳ ತಪ್ಪುತ್ತೆ.

10. ಫಾಸ್ಟ್‌ಫುಡ್ ತಿನ್ನೋದು ಆರೋಗ್ಯದ ದೃಷ್ಟಿಯಿಂದ ಒಳ್ಳೇದಲ್ಲ

ಅನ್ನ ಸಾಂಬಾರ್ ಆದ್ರೂ ಪರ್ವಾಗಿಲ್ಲ ಮನೆ ಊಟನೇ ಆರೋಗ್ಯಕ್ಕೆ ಒಳ್ಳೇದು. ಅಡುಗೆ ಮಾಡಕ್ಕೆ ಟೈಮಿಲ್ಲ ಅಂತೇಳಿ ಫಾಸ್ಟ್‌ಫುಡ್ಡನ್ನ ಆಫೀಸಲ್ಲಿ ತಿನ್ನೋರೇ ಜಾಸ್ತಿ. ಇದ್ರಿಂದ ಆರೋಗ್ಯ ಕೆಡುತ್ತೆ. ಆದಷ್ಟು ಪೌಷ್ಠಿಕವಾಗಿರೋಂತ ಆಹಾರ ತಿನ್ನೋದನ್ನ ರೂಢಿಸಿಕೊಳ್ಳಿ. ಈಸಿಯಾಗಿ ಸಿಗುತ್ತೆ ಅಂತೇಳಿ ಫಾಸ್ಟ್‌ಫುಡ್ ಅಭ್ಯಾಸ ಬೆಳಸಿಕೊಂಡ್ರೆ ಹೊಟ್ಟೆ ಬರೋದು, ಹೃದಯ ಸಮಸ್ಯೆಗಳು ತಪ್ಪಿದ್ದಲ್ಲ.  

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ರಾಮಾಯಣ ಅರಿದು ಕುಡಿದಿದ್ದರೆ ಮಾತ್ರ ನಿಮಗೆ ಈ 10 ವಿಚಿತ್ರ ಸತ್ಯಗಳು ಗೊತ್ತಿರಕ್ಕೆ ಸಾಧ್ಯ

ಇಲ್ಲದಿದ್ದರೆ ಬಹಳ ಆಶ್ಚರ್ಯ ಆಗುತ್ತೆ

ಕೆಲವ್ರು ರಾಮಾಯಣ ಮತ್ತೆ ಮಹಾಭಾರತ ಅರಿದು ಕುಡಿದು ಬಿಟ್ಟಿದ್ದೀವಿ ಅಂತಿರ್ತಾರೆ. ಆದ್ರೂ ಕೆಲವೊಂದು ವಿಷಯಗಳು ಎಷ್ಟೋ ಮಂದಿಗೆ ಗೊತ್ತಿರಲ್ಲ. ವಾಲ್ಮೀಕಿ ಬರೆದಿರೋಂತ ರಾಮಾಯಣದ ರಾಮ, ಲಕ್ಷ್ಮಣ, ಸೀತೆ ಇಂದಿನವ್ರಿಗೂ ಆದರ್ಶ. ಈವತ್ತಿಗೂ ರಾಮಾಯಣ, ಅದ್ರ ಪಾತ್ರಗಳು ನಮಗೆಲ್ಲಾ ದಾರಿ ತೋರಿಸೋ ತರಹ ಇವೆ. ಆದ್ರೂ ರಾಮಾಯಣದ  ಬಗ್ಗೆ ಎಷ್ಟೋ ಸತ್ಯಗಳು ಜನಕ್ಕೆ ಗೊತ್ತಿರಲ್ಲ. ಮಹಾನ್ ಪಂಡಿತರಿಗೆ ಮಾತ್ರ ಗೊತ್ತಿರುವಂಥ 10 ವಿಚಿತ್ರ ಸತ್ಯಗಳನ್ನು ನಾವಿಲ್ಲಿ ಕೊಡ್ತಿದ್ದೇವೆ.

1. ರಾಮನಿಗೆ ಶಾಂತಾ ಅಂತ ಒಬ್ಬಳು ಅಕ್ಕ ಇರ್ತಾಳೆ

ದಶರಥನಿಗೆ ಕೌಸಲ್ಯೆಯಿಂದ ಹುಟ್ಟಿದ ಮಗಳು ಇವಳು. ಅಂಗದೇಶದ ರಾಜ ರೋಮಪಾದ ಅವಳನ್ನ ದತ್ತು ತೊಗೊಂಡಿರ್ತಾನೆ.

2. ರಾವಣನಿಗೆ 10 ತಲೆಗಳು ಬಂದದ್ದು ಈಶ್ವರನಿಂದ

ಈಶ್ವರನ ಪರಮ ಭಕ್ತನಾಗಿದ್ದ ರಾವಣ. ಘೋರ ತಪಸ್ಸು ಮಾಡಿ ತಲೆಯನ್ನೇ ಈಶ್ವರನಿಗೆ ಅರ್ಪಿಸಿದ್ದ. ಆದರೂ ತಲೆ ಮತ್ತೆ ಬೆಳೀತಿತ್ತಂತೆ. ಹತ್ತು ಸಲ ತಲೆ ಈಶ್ವರನಿಗೆ ಅರ್ಪಿಸಿದರೂ ಅದು ಮತ್ತೆಮತ್ತೆ ಬೆಳೀತಾನೇ ಇತ್ತಂತೆ. ಕೊನೆಗೆ ಶಿವನು ಪ್ರತ್ಯಕ್ಷನಾಗಿ ಎಲ್ಲಾ ಹತ್ತು ತಲೆಗಳನ್ನು ವಾಪಸ್ಸು ಕೊಟ್ನಂತೆ. ಹಾಗಾಗಿ ರಾವಣನಿಗೆ 10 ತಲೆಗಳು ಬಂದವು ಅಂತ ಪುರಾಣ ಹೇಳುತ್ತೆ.

3. ರಾವಣನಿಗಿಂತ ಮೊದಲು ಲಂಕೇನ ಕುಬೇರ ಆಳ್ತಿರ್ತಾನೆ

ಲಂಕೆಯನ್ನ ಕಟ್ಟಿ ಆಳ್ತಾ ಇದ್ದದ್ದು ಕುಬೇರ. ಅವನ ಮಲಣ್ಣ ರಾವಣ ಯುದ್ದ ಮಾಡಿ ಕುಬೇರನಿಂದ ಲಂಕೆಯನ್ನ ಕಿತ್ತುಕೊಂಡ ಅಂತ ಪುರಾಣ ಹೇಳುತ್ತೆ.

 

4. ಲಕ್ಷ್ಮಣ ಶೇಷನಾಗನ (ಆದಿಶೇಷನ) ಅವತಾರ

ವಿಷ್ಣುವಿನ ಅವತಾರ ರಾಮ ಅನ್ನೋದು ಎಲ್ರಿಗೂ ಗೊತ್ತು. ಆದರೆ ಶೇಷನಾಗನ ಅವತಾರ ಲಕ್ಷ್ಮಣ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ.   

5. ಹದಿನಾಲ್ಕು ವರ್ಷಗಳ ವನವಾಸದಲ್ಲಿ ಲಕ್ಷ್ಮಣ ನಿದ್ದೇನೇ ಮಾಡಲ್ಲ

ಯಾಕಂದ್ರೆ ವನವಾಸದಲ್ಲಿದ್ದ ರಾಮ ಮತ್ತೆ ಸೀತೆಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋಬೇಕಾಗಿತ್ತು. ಅದಕ್ಕಾಗಿ ತನಗೆ ನಿದ್ದೆ ಬರದೆ ಇರೋಹಂಗೆ ನಿದ್ರಾದೇವಿಯ ವರ ಪಡ್ಕೊಂಡಿರ್ತಾನೆ ಲಕ್ಷ್ಮಣ.

6. ಶ್ರೀಕೃಷ್ಣನನ್ನ ಬೇಟೆಗಾರನಾಗಿ ಬಂದು ಕೊಂದದ್ದು ವಾಲಿ

ಮರದ ಕೆಳಗೆ ಮಲಗಿ ನಿದ್ದೆ ಮಾಡ್ತಿದ್ದಾಗ ಶ್ರೀಕೃಷ್ಣನನ್ನ ಜರಾ ಅನ್ನೋ ಬೇಟೆಗಾರ ಬಾಣಬಿಟ್ಟು ಕೊಂದ. ಈ ಬೇಟೆಗಾರ ಬೇರೆ ಯಾರು ಅಲ್ಲ, ವಾಲಿ ಅವತಾರ. 

7. ಲಕ್ಷ್ಮಣ ಸಾಯೋದು ರಾಮನ ಒಂದು ಮಾತಿಂದ

ಒಮ್ಮೆ ಯಮಧರ್ಮನನ್ನು ರಾಮ ಭೇಟಿಯಾಗಿ ನಮ್ಮಿಬ್ಬರ ಮಾತುಕತೆಗೆ ಯಾರೇ ಬಂದು ಅಡ್ಡಿಪಡಿಸಿದ್ರೂ ಅವರನ್ನ ಸಾಯಿಸಿಬಿಡು ಅಂತ ಕೇಳ್ಕೊಂಡಿದ್ದ. ಅದೇ ಟೈಮಿಗೆ ಪಾಪ ಲಕ್ಷ್ಮಣ ಬರ್ತಾನೆ. ರಾಮನನ್ನ ಮಾತಾಡ್ಬೇಕು ಅಂತಾನೆ. ಆಗ ರಾಮ ಹೇಳಿದಂಗೆ ಲಕ್ಷ್ಮಣನ್ನ ಯಮ ಸಾಯಿಸ್ತಾನೆ.

8. ಹನುಮಂತನಿಗೆ ಒಂದು ಹೂವಿನಿಂದ ಭಜರಂಗಬಲಿ ಅಂತ ಹೆಸರು ಬಂತು

ಸಿಂಧೂರ ಹೂವು ತಲೆ ಮೇಲೆ ಇದ್ದಷ್ಟು ಹೊತ್ತು ರಾಮ ಆರೋಗ್ಯವಾಗಿರ್ತಾನೆ ಅಂತ ಹನುಮಂತನಿಗೆ ಒಮ್ಮೆ ಸೀತೆ ಹೇಳಿದ್ಲು. ಅದನ್ನ ಕೇಳಿ ಹನುಮ ದೇಹವನ್ನೇ ಸಿಂಧೂರವಾಗಿ ಬದಲಾಯಿಸಿಕೊಂಡಿದ್ದ. ಭಜರಂಗ್ ಅಂದ್ರೆ ಸಿಂಧೂರ ಅಂತ ಅರ್ಥ. ತನ್ನನ್ನು ತಾನು ಸಿಂಧೂರವಾಗಿಸಿಕೊಂಡ ಕಾರಣ ಭಜರಂಗಬಲಿ ಅಂತ ಹೆಸರು ಬಂತು.

9. ಅಳಿಲು ಬೆನ್ನ ಮೇಲೆ ಮೂರು ಗೆರೆ ಇರೋದಕ್ಕೆ ರಾಮ ಕಾರಣ

ಲಂಕೆಗೆ ಹೋಗ್ಬೇಕಾದ್ರೆ ಕಪಿಸೈನ ರಾಮಸೇತು ಕಟ್ಟಿತು. ಅದನ್ನ ಕಟ್ಟಬೇಕಾದ್ರೆ ಅಳಿಲುಗಳು ಮಣ್ಣನ್ನ ತಂದುಕೊಡ್ತಿದ್ವು. ಇದನ್ನ ಕಂಡ ಕಪಿಸೈನ್ಯ ನಗಾಡ್ತಿತ್ತು. ಆದರೆ ರಾಮನು ಅವುಗಳ ಅಳಿಲು ಸೇವೆಯನ್ನ ತುಂಬಾ ಇಷ್ಟಪಟ್ಟಿದ್ದ. ಅಳಿಲನ್ನ ಎತ್ಕೊಂಡು ಬೆನ್ನು ಸವರಿದಾಗ ಈ ಮೂರು ಗೆರೆಗಳು ಮೂಡಿದ್ವಂತೆ. 

 

10. ಶೂರ್ಪಣಖೀಗೆ ಅಣ್ಣ ರಾವಣನ್ನ ಸಾಯಿಸಬೇಕು ಅನ್ನೋ ಬಯಕೆ ಇರುತ್ತೆ

ಇದು ನಿಜವಾಗ್ಲೂ ಅಚ್ಚರಿ ಪಡೋಂತ ಸಂಗತಿ. ಶೂರ್ಪಣಕಿಯ ಗಂಡ ದುಷ್ಟಬುದ್ಧಿ ಅನ್ನೋನ್ನ ರಾವಣ ಸಾಯಿಸಿರ್ತಾನೆ. ಕೆಲವು ರಾಮಾಯಣಗಳಲ್ಲಿ ರಾವಣನ ಮೇಲೆ ಸೇಡು ತೀರಿಸಿಕೊಳಕ್ಕೆ ಶೂರ್ಪಣಕಿ ದೊಡ್ಡ ನಾಟಕ ಮಾಡಿ, ಯುದ್ಧ ಆಗೋಹಾಗೆ ನೋಡ್ಕೊಂಡು ರಾವಣನ ಸಾವಿಗೆ ಕಾರಣ ಆಗ್ತಾಳೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: