ಧೋನಿಗೆ ’ಹೆಲಿಕಾಪ್ಟರ್ ಶಾಟ್’ ಕಲಿಸಿ ಕೊಟ್ಟ ಸಂತೋಷ್ ಏನಾದ ಅಂತ ಗೊತ್ತಾದ್ರೆ ಅಯ್ಯೋ ಪಾಪ ಅನ್ಸತ್ತೆ

ರಾಂಚಿ ಕಂಡ ಅತ್ಯದ್ಭುತ ಕ್ರಿಕೆಟಿಗ

ಕೆಲವು ಜನ ಎಷ್ಟೇ ಸಾಧನೆ ಮಾಡಿದ್ರೂ ಬೆಳಕಿಗೇ ಬರಲ್ಲ. ಎಲೆಮರೆಯ ಕಾಯಿಗಳಂತೆ ಇದ್ ಬಿಡ್ತಾರೆ. ಅಂತವ್ರಲ್ಲಿ ಈ ಸಂತೋಷ್ ಲಾಲ್ ಕೂಡ ಒಬ್ಬ. ಇವರ ಊರು ರಾಂಚಿ. ಮಾಜಿ ರಣಜಿ ಆಟಗಾರ. ಇನ್ನೂ ಸಂತೋಷ್ ಬಗ್ಗೆ ಹೇಳ್ಬೇಕು ಅಂದ್ರೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆಪ್ತಮಿತ್ರ, ಜೀವದ ಗೆಳೆಯ. ಈ ಜೀವದ ಗೆಳೆಯ ಈವತ್ತು ಜೀವಂತ ಇಲ್ಲ ಅಂತ ನೆನಸ್ಕೊಂಡ್ರೆ ತುಂಬಾ ಬೇಜಾರಾಗುತ್ತೆ.

ಆವತ್ತು ಏನಾಯ್ತು ಅಂದ್ರೆ ತುಂಬಾ ಹೊಟ್ಟೆನೋವು ಕಾಣಿಸ್ಕೊಂಡು ಆಸ್ಪತ್ರೆ ಸೇರ್ಕೊಂಡಿದ್ದ ಸಂತೋಷ್‌ಗೆ ಪಾಪ ಪ್ಯಾಂಕ್ರಿಯಾಟೈಟಿಸ್ ಆಗಿ (ಮೇದೋಜೀರಕದ ಉರಿಯೂತ) ಸತ್ತೋದ. ಇದೆಲ್ಲಾ ನಡೆದದ್ದು 2013ರಲ್ಲಿ. ಆದ್ರೂ ಈ ಕಾಡ್ತಾನೇ ಇದ್ದಾನೆ. ಸಂತೋಷ್ ಬಗ್ಗೆ ಹೇಳ್ಬೇಕು ಅಂದ್ರೆ ಧೋನಿಗೆ ತುಂಬಾ ಕ್ಲೋಸ್ ಫ್ರೆಂಡ್ ಆಗಿದ್ದ. ಧೋನಿಗೆ ಹೆಲಿಕಾಫ್ಟರ್ ಶಾಟ್ ಕಲಿಸಿಕೊಟ್ಟಿದ್ದೇ ಈ ಸಂತೋಷ್.

ಹೊಟ್ಟೆನೋವಿನಿಂದ ತುಂಬಾ ತೊಂದ್ರೆ ಅನುಭವಿಸ್ತಿದ್ದ ಸಂತೋಷನನ್ನು ಆಸ್ಪತ್ರೆಗೆ ಸೇರಿಸಿದ್ದು ಅವನ ಇನ್ನೊಬ್ಬ ಗೆಳೆಯ ರಮೇಶ್ ಕುಮಾರ್. ಆದರೆ ಆಸ್ಪತ್ರೆಗೆ ಹೋಗೋ ಟೈಮಿಗೆ ಪ್ಯಾಂಕ್ರಿಯಾಟೈಟಿಸ್ ಸಮಸ್ಯೆ ಜಾಸ್ತಿ ಆಗಿತ್ತು. ರಾಂಚಿಯಲ್ಲಿರೋ ಗುರುನಾನಕ್ ಆಸ್ಪತ್ರೆ ವೈದ್ಯರು ಬದುಕಿಸೋದು ಕಷ್ಟ ಅಂತ ಹೇಳ್ಬಿಟ್ರು.

ನಾವು ಈವತ್ತು ಧೋನಿಯ ಆಕರ್ಷಕ ಬ್ಯಾಟಿಂಗ್ ನೋಡಿ ಖುಷಿಪಡ್ತೀವಿ. ಆದ್ರೆ ಅದರ ಹಿಂದೆ ಸಂತೋಷ್ ಎಂಬ ಗೆಳೆಯ ಇದ್ದ ಅಂತ ಎಷ್ಟೋ ಮಂದಿಗೆ ಗೊತ್ತಿಲ್ಲ. "ರಾಂಚಿ ಕಂಡ ಅತ್ಯದ್ಭುತ ಕ್ರಿಕೆಟಿಗ ಸಂತೋಷ್. ತುಂಬಾ ಸಭ್ಯ. ಅವನಲ್ಲಿ ಒಂಚೂರು ಸ್ವಾರ್ಥ ಇರ್ಲಿಲ್ಲ. ಪ್ರತಿಯೊಬ್ರಿಗೂ ನಿಸ್ವಾರ್ಥವಾಗಿ ಸಹಾಯ ಮಾಡ್ತಿದ್ದ. ಜಾರ್ಖಂಡ್ ಕ್ರಿಕೆಟ್‌ನ ಧ್ರುವನಕ್ಷತ್ರ ಇದ್ದಂಗೆ ಅಂತ ಹೇಳ್ಬೋದು" ಅಂತ ನೆನಪಿಸ್ಕೋತಾರೆ ಸಂತೋಷ್ ಗೆಳೆಯ ರಮೇಶ್.

ಈ ತರಹ ಜೀವದ ಗೆಳೆಯನನ್ನ ಬದುಕಿಸಿಕೊಳ್ಳೋಕೆ ಧೋನಿ ತುಂಬಾ ಕಷ್ಟಪಟ್ಟಿದ್ದ. ಸಂತೋಷ್ ಚಿಕಿತ್ಸೆಗೆ ಸಾಕಷ್ಟು ಖರ್ಚು ಮಾಡಿದ್ದ. ಅವ್ರ ಮನೆಯವರ ಜೊತೆ ಕಾಂಟ್ಯಾಕ್ಟಲ್ಲಿದ್ದ. ಆದ್ರೂ ವಿಧಿ ಸಂತೋಷ್‌ನನ್ನು ಬಿಡ್ಲಿಲ್ಲ. ಒಳ್ಳೇವ್ರಿಗೆ ಕಾಲ ಇಲ್ಲ ಅಂತೀವಲ್ಲಾ ಹಂಗಾಯ್ತು. 

ಹೆಲಿಕಾಪ್ಟರ್ ಶಾಟ್ ಕಲಿಸಿದ ಗುರು ಗೆಳೆಯನನ್ನ ಧೋನಿ ಮರೆತಿಲ್ಲ. ಆ ರೀತಿ ಶಾಟ್ ಹೊಡೆದಾಗಲೆಲ್ಲಾ, ಇದು ನೀನು ಕಲ್ಸಿಕೊಟ್ಟ ಆಟ ಕಣೋ, ಇದು ನಿನಗೆ ಸೇರ್ಬೇಕಾಗಿರೋದು ಅಂತ ಆಕಾಶ ನೋಡ್ಕೊಂಡು ಮನಸ್ಸಲ್ಲೇ ಈಗ್ಲೂ ಥ್ಯಾಂಕ್ಸ್ ಹೇಳ್ತಾನೇ ಇದ್ದಾನೆ. ''ವರ್ಣ ಮಾತ್ರಂ ಕಲಿಸಿದಾತಂ ಗುರು'' ಅಂತಾರೆ. ಕ್ರಿಕೆಟಲ್ಲೂ ಅಷ್ಟೇ ಈ ಮಾತು ಸತ್ಯ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಗ್ಯಾಸ್ ಸಿಲಿಂಡರ್ ಬಗ್ಗೆ ಈ ಒಂದು ಮುಖ್ಯವಾದ ವಿಷಯ ಎಲ್ಲರಿಗೂ ತುರ್ತಾಗಿ ಗೊತ್ತಾಗಬೇಕು

ಇಷ್ಟು ದಿನ ಯಾರೂ ಹೇಳೇ ಇಲ್ಲವಲ್ಲ, ಹೆಂಗೆ?

LPG ಸಿಲಿಂಡರ್ ಇಲ್ಲದೆ ಮನೇಲಿ ಅಡುಗೇನೇ ಇಲ್ಲ ಅನ್ನೋ ಪರಿಸ್ಥಿತಿ ಇದೆ.

ಆದರೆ ಈ‌ ಸಿಲಿಂಡರ್ಗಳು ಸ್ವಲ್ಪ ಡೇಂಜರ್ರೇ. ಏನಾದರೂ ತೊಂದರೆ ಆದರೆ ಸಿಲಿಂಡರ್ಗೆ ಬೆಂಕಿ ಹತ್ತಿ, ಅದು ಸಿಡಿದು ಅನಾಹುತ ಆಗೋ ಸಾಧ್ಯತೆ ಇರುತ್ತೆ.

ಆದರೆ ಈ ಸಿಲಿಂಡರ್ಗಳಿಗೂ ಒಂದು expiry date ಇರುತ್ತೆ ಅಂತ ನಿಮಗೆ ಗೊತ್ತಾ?

ಸಿಲಿಂಡರ್ ಒಳಗಿರೋ ಗ್ಯಾಸ್ ಬಗ್ಗೆ ಮಾತಾಡ್ತಿಲ್ಲ, ಬರೀ ಖಾಲಿ ಸಿಲಿಂಡರ್ ಬಗ್ಗೆ ಮಾತಾಡ್ತಿರೋದು. ಅದಕ್ಕೆ expiry date ಇರುತ್ತೆ ಅಂತ ನಿಮಗೆ ಗೊತ್ತಾ? Expiry date ಆಗೋಗಿರೋ ಸಿಲಿಂದರ್ ಉಪಯೋಗಿಸಿದರೆ ಏನಾದರೂ‌ ಅನಾಹುತ ಆಗೋ ಸಾಧ್ಯತೆ ಜಾಸ್ತಿ.

ಈ ಸಿಲಿಂಡರ್ಗಳು ಮಾರುಕಟ್ಟೇಲಿ ಸುಲಭವಾಗಿ ಸಿಗುತ್ತವೆ. ಖಾಲಿ ಆದರೆ ಅದನ್ನ ತುಂಬಿಸೋದು ವಾಡಿಕೆ. ಆದರೆ expiry date ಆಗಿದ್ದರೆ ಅದನ್ನ ತುಂಬಿಸಬಾರದು. ಆಗ ಅದರಿಂದ ಗ್ಯಾಸ್ ಸೋರಿಕೆ ಆಗಿ ಸಿಡಿಯೋ ಸಾಧ್ಯತೆ ಇರುತ್ತೆ. ಆದ್ದರಿಂದ ಡೇಟ್ ಆಗೋಗಿರೋ ಸಿಲಿಂಡರ್ಗಳ್ನ ಉಪಯೋಗಿಸಬಾರದು.

ಗ್ಯಾಸ್ ಅಂಗಡಿಯೋರು ಒಂದರ ಮೇಲೊಂದು ಸಿಲಿಂಡರ್ ಪೇರಿಸೋದು, ಅದನ್ನ ಎಸೆದಾಡೋದು, ಎಲ್ಲಾ ಮಾಡ್ತಾರೆ ನೋಡಿದೀರಿ ತಾನೇ?

ಮೂಲ

ಇದರಿಂದ ಸಿಲಿಂಡರ್ಗೆ ಏಟು ಬೀಳೋ ಸಾಧ್ಯತೆ ಇರುತ್ತೆ. ತುಂಬಾ ಉಜ್ಜಾಡಿ ಉಜ್ಜಾಡಿ ಮಾಡಿದಾಗ ಅದರಿಂದ ಗ್ಯಾಸ್ ಸೋರಿಕೆ ಆಗೋ‌ಸಾಧ್ಯತೆ ಇರುತ್ತೆ.

ಆದರೆ ಡೇಟ್ ಆಗಿದ್ಯೋ ಇಲ್ವೋ ಅಂತ ಕಂಡ್ ಹಿಡಿಯೋದು ಹೇಗೆ ಅಂತ ಸಾಮಾನ್ಯವಾಗಿ ಜನರಿಗೆ ಗೊತ್ತಿರಲ್ಲ. ಹೇಳ್ತೀವಿ ಕೇಳಿ.

ಸಿಲಿಂಡರ್ ಹಿಡಿ ಕೆಳಗೆ ಮೂರು ಸೈಡ್ ಪಟ್ಟಿ ಇರುತ್ತೆ. ಅದರಲ್ಲಿ ಒಳಕ್ಕೆ expiry dateನ ಒಂದು ಕೋಡ್ ಮಾಡಿ ಬರೆದಿರ್ತಾರೆ. ಆ ಕೋಡು A, B, C, ಅಥವಾ D ಇಂದ ಶುರು ಆಗಿ ಅದಾದಮೇಲೆ ಎರಡಂಕಿ ಸಂಖ್ಯೆ ಇರುತ್ತೆ. ಉದಾಹರಣೆಗೆ B13.

ಮೂಲ

ಇದರಿಂದ ಡೇಟ್ ಕಂಡ್ ಹಿಡಿಯೋದು ಸುಲಭ.

A, B, C, ಮತ್ತೆ D ಅನ್ನೋ ಇಂಗ್ಲಿಷ್ ಅಕ್ಷರಗಳು ತಿಂಗಳನ್ನ ಸೂಚಿಸುತ್ತವೆ. ಸಂಖ್ಯೆ ವರ್ಷ ಸೂಚಿಸುತ್ತೆ.

ಯಾವ ಅಕ್ಷರಕ್ಕೆ ಯಾವ ತಿಂಗಳು ಅಂತ ತಿಳಿದಿರಲಿ:

A - ಮಾರ್ಚ್

B - ಜೂನ್

C - ಸೆಪ್ಟೆಂಬರ್

D - ಡಿಸೆಂಬರ್

ಈಗ, ಉದಾಹರಣೆಗೆ ನಿಮ್ಮ ಸಿಲಿಂಡರ್ ಮೇಲೆ B-13 ಅಂತ ಬರೆದಿದ್ದರೆ ಅದರ expiry date ಜೂನ್ 2013. ಮೂರು ತಿಂಗಳ ಅಂದಾಜು ಸಾಕು ಅಂತ ಎಲ್ಲಾ ತಿಂಗಳಿಗೂ ಒಂದೊಂದು ಅಕ್ಷರ ಕೊಟ್ಟಿರಲ್ಲ.

ಕೆಲವರು ಈ expiry date ಕೋಡನ್ನ ಅಳಿಸಿ ತಮಗೆ ಬೇಕಾದ್ದು ಬರೆದುಕೊಳ್ತಾರೆ ಅಂತಾನೂ ವರದಿಗಳು ಬಂದಿವೆ. ಆದ್ದರಿಂದ ಮುಂದಿನ ಸಲ ಸಿಲಿಂಡರ್ ಬಂದಾಗ ಅದರ ಕೋಡ್ ಏನು ಅಂತ ನೋಡಿ.

ಮೂಲ

ಕೋಡ್ ಇರಬೇಕಾದ ಜಾಗದಲ್ಲಿ ಏನಾದರೂ ಗೀಚಿರೋದು, ಪೇಂಟ್ ಹಚ್ಚಿರೋದು, ತಿದ್ದಿರೋದು ಎಲ್ಲಾ ಆಗಿದ್ದರೆ ಮುಲಾಜಿಲ್ಲದೆ ವಾಪಸ್ ಕೊಟ್ಟುಬಿಡಿ. ಕಷ್ಟಕ್ಕೆ ಸಿಕಾಕೋಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: