ಈಗಿನ್ ಕಾಲದಲ್ಲಿ ಎಲ್ಲರಿಗೂ ಮನುಷ್ಯನ ಹೃದಯದ ಬಗ್ಗೆ ಈ 11 ವಿಷಯ ಗೊತ್ತಿರಬೇಕು

ಗಂಡಸರಗಿಂತ ಹೆಂಗಸರ ಹೃದಯ ಜಾಸ್ತಿ ಹೊಡ್ಕೊಳುತ್ತೆ

ಹೃದಯದ ಬಗ್ಗೆ ಆಗಾಗ ಮಾತಾಡ್ತಾನೇ ಇರ್ತೀವಿ. ಅದರ ಆರೋಗ್ಯದ ಬಗ್ಗೆ, ಹೃದಯ ಕರಗೋ ವಿಚಾರಗಳ ಬಗ್ಗೆ, ನನ್ ಹೃದಯದಲ್ಲಿ ನೀನಿದ್ದೀಯ ಅಂತ ಪ್ರೇಮಿಗಳು ಡೈಲಾಗ್ ಕೂಡ ಹೊಡೀತಿರ್ತಾರೆ. ಆದ್ರೆ ನಿಜವಾಗ್ಲೂ ಹೃದಯದ ಬಗ್ಗೆ ಎಷ್ಟೋ ಜನಕ್ಕೆ ಕೆಲವೊಂದು ಸಂಗತಿಗಳು ಗೊತ್ತಿಲ್ಲ. ಇಲ್ಲಿವೆ ನೋಡಿ ನಮ್ ಹೃದಯದ ಬಗ್ಗೆ 11 ಇಂಟರೆಸ್ಟಿಂಗ್ ಸಂಗತಿಗಳು. 

1. ದೊಡ್ಡೋರ ಹೃದಯದ ಗಾತ್ರ ಎರಡು ಮುಷ್ಟಿಯಷ್ಟಿರುತ್ತೆ, ಮಕ್ಕಳದು ಒಂದು ಮುಷ್ಠಿಯಷ್ಟಿರುರುತ್ತೆ
2. ಒಂದ್ ದಿನಕ್ಕೆ ನಮ್ ಹೃದಯ 100,000 ಸಲ ಢವಢವ ಅಂತ ಹೊಡ್ಕೊಳ್ಳುತ್ತೆ, ಸಾಯೋವರೆಗೆ ಸರಾಸರಿ 250 ಕೋಟಿ ಸಲ ಹೊಡ್ಕೊಳ್ಳತ್ತಂತೆ
3. ಬದುಕಿರೋಷ್ಟು ದಿನ ನಮ್ ಹೃದಯ 16 ಲಕ್ಷ ಲೀಟರ್ ರಕ್ತ ಪಂಪ್ ಮಾಡುತ್ತೆ, ಅಂದ್ರೆ ಒಂದು 5 ಸೂಪರ್ ಟ್ಯಾಂಕರ್‌ ಹಡಗು ತುಂಬಿಸೋಷ್ಟು!
4. ಅಡುಗೆಮನೆಯಲ್ಲಿರೋ ನಲ್ಲೀನ 45 ವರ್ಷ ಆನ್ ಮಾಡಿ ಬಿಟ್ರೆ ಎಷ್ಟ್ ನೀರು ಹರಿದೋಗುತ್ತೋ ಅಷ್ಟ್ ರಕ್ತಾನ ನಮ್ ಹೃದಯ ಒಂದು ಜೀವನಾವಧಿಯಲ್ಲಿ ಪಂಪ್ ಮಾಡುತ್ತೆ
5. ಹೃದಯ ತನಗೆ ತಾನೆ ಎಲೆಕ್ಟ್ರಿಕ್ ಎನರ್ಜಿ ತಯಾರಿಸಿಕೊಳ್ಳುತ್ತೆ, ಹಾಗಾಗಿ ಅದು ನಮ್ ದೇಹದಿಂದ ಬೇರ್ಪಟ್ರೂ ಹೊಡ್ಕೊಳ್ತಾ ಇರುತ್ತೆ, ಆಕ್ಸಿಜನ್ ಸಪ್ಲೈ ಸಿಗೋವರೆಗೂ ಹೊಡ್ಕೊಳ್ತಿರುತ್ತೆ
6. ಹೃದಯ ನಮ್ ದೇಹದ 75 ಲಕ್ಷ ಕೋಟಿ ಸೆಲ್‌ಗಳಿಗೆ ರಕ್ತ ಪಂಪ್ ಮಾಡುತ್ತೆ, ಕಾರ್ನಿಯಾಗೆ ಮಾತ್ರ ರಕ್ತ ಸರಬರಾಜು ಆಗಲ್ಲವಂತೆ
7. ಹೃದಯದ ನಾಲ್ಕು ಕವಾಟಗಳು ಮುಚ್ಚಿಕೊಳ್ಳೊದ್ರಿಂದ ಢವಢವ ಅಂತ ಸೌಂಡ್ ಬರುತ್ತೆ
8. ಹೃದಯ ಬಿಡುಗಡೆ ಮಾಡೋ ಶಕ್ತಿ 1-5 ವ್ಯಾಟ್ಸ್ ಇರುತ್ತೆ. 80 ವರ್ಷಗಳಲ್ಲಿ ಸರಿಸುಮಾರು 2.5 ಗೀಗಾಜೌಲ್ ಶಕ್ತಿ ಉತ್ಪಾದಿಸುತ್ತೆ, ಅಂದ್ರೆ ಇದು 277 kWh ವಿದ್ಯುತ್ತಿಗೆ ಸಮವಂತೆ!
9. ತಾಯಿ ಹೊಟ್ಟೆಯಲ್ಲಿ ನಾಲ್ಕು ವಾರದ ಮಗುವಾಗಿ ಇದ್ದಾಗಿಂದ ಹೃದಯದ ಬಡಿತ ಶುರುವಾಗುತ್ತೆ
10. ಗಂಡಸರ ಹೃದಯಕ್ಕಿಂತ ಹೆಂಗಸರ ಹೃದಯ ಜಾಸ್ತಿ ಹೊಡ್ಕೊಳುತ್ತೆ. ಗಂಡಸರ್ದು ನಿಮಿಷಕ್ಕೆ 70 ಸಲ, ಹೆಂಗಸರದು 78 ಸಲ.
11. ನಾವು ನಿದ್ದೆ ಮಾಡ್ತಿದ್ದಾಗ ಹೃದಯದಿಂದ ಶ್ವಾಸಕೋಸಕ್ಕೆ ರಕ್ತ ಹೋಗಿ ಬರೋದಕ್ಕೆ ತಗೊಳ್ಳೊ ಟೈಮು 6 ಸೆಕೆಂಡ್, ಮಿದುಳು ಮತ್ತೆ ಬೆನ್ನಿನ ಭಾಗಕ್ಕೆ ಹೋಗಿ ಬರೋದಕ್ಕೆ 8 ಸೆಕೆಂಡ್ ಬೇಕಾಗುತ್ತದೆ. ಕಾಲಿನ ಬೆರಳ ತನಕ ಹೋಗಿ ಬರೋದಕ್ಕೆ 16 ಸೆಕೆಂಡ್ ಸಾಕು.

ಹೃದಯ ಆರೋಗ್ಯವಾಗಿ ಇರ್ಬೇಕು ಅಂದ್ರೆ... ಪಾಲಿಶ್ ಮಾಡ್ದೇ ಇರೋಂತ ಅಕ್ಕಿ, ಸಂಸ್ಕರಿಸದೇ ಇರೋಂತ ಆಹಾರ ತಿನ್ನೋದು ಒಳ್ಳೇದು. ನಿತ್ಯ ವ್ಯಾಯಾಮ, ಯೋಗಾಸನ, ಧ್ಯಾನ, ಪ್ರಾಣಾಯಾಮ ಮಾಡೋದು ಹೃದಯದ ಆರೋಗ್ಯಕ್ಕೆ ಒಳ್ಳೇದು. ವಿಟಮಿನ್ ಡಿ ಕೊರತೆ ಆಗ್ದಂಗೆ ನೋಡ್ಕೊಳ್ಳಿ. ನಿಮ್ಮ ಆಹಾರದಲ್ಲಿ ಒಮೆಗಾ 3 ಫ್ಯಾಟ್ಸ್ ಹೆಚ್ಚಾಗಿದ್ರೆ ಯಾವ ಹೃದಯ ಕಾಯಿಲೇನೂ ಹತ್ರ ಸುಳಿಯಲ್ಲ ಅಂತಿದ್ದಾರೆ ಹೃದಯ ತಜ್ಞರು. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: