ಟ್ರೈನಲ್ಲಿ ಓಡಾಡೋರ್ಗೆ ಮೊನ್ನೆ ಮುಂಬೈನಲ್ಲಿ ನಡೆದಿರೋ ಈ ಘಟನೆ ಒಂದು ದೊಡ್ಡ ಪಾಠ ಆಗೋಗಿದೆ

ಮೈ ಝುಂ ಅನ್ನುತ್ತೆ

ಈ ಸೀನ್ ನೋಡ್ತಿದ್ರೆ ಯಾವುದೋ ಫಿಲಂನ ಆಕ್ಷನ್ ಸೀನ್ ತರ ಕಾಣುತ್ತೆ, ಮೈ ಝುಂ ಅನ್ನುತ್ತೆ. ಆದರೆ ಇದು ನಿಜವಾಗ್ಲೂ ನಡೆದಿರೋದು. ಮುಂಬೈನ ಲೋನಾವಾಲಾ ರೈಲ್ವೇ ಸ್ಟೇಶನ್ನಿನ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರೋ ವಿಡಿಯೋ ಇದು. 

ಟ್ರೈನ್ ಇಳೀಬೇಕು ಅಂದ್ರೆ ಅದೇನ್ ಆತ್ರಾನೋ ಏನೋ. ಒಂದ್ 5 ನಿಮಿಷ ತಡ್ಕೊಳ್ಳೋಕು ಆಗಲ್ಲ. ಮೂವ್ ಆಗ್ತಿರೋ ಟ್ರೈನಿಂದ ಇಳಿಯಕ್ಕೋಗಿ ಪ್ರಾಣಾನೇ ಕಳ್ಕೋತಿದ್ಲು ಈ ಹೆಂಗಸು. ಆದ್ರೆ ಅಲ್ಲೇ ಇದ್ದ ಪೊಲೀಸ್ ಆಕೆಯನ್ನ ಸೈಡಿಗೆ ಎಳೆದು ಪ್ರಾಣ ಕಾಪಾಡಿದ್ದಾನೆ. 

ಇದು ಯಾವಾಗ್ಲೋ ನಡೆದ ಘಟನೆ ಅಂತೂ ಅಲ್ಲ. ಮೊನ್ನೆ ಸೋಮವಾರ (ಸೆ.26) ನಡೆದಿರೋದು.

ಗಮನಿಸಿ: ಕಳೆದ 5 ವರ್ಷಗಳಲ್ಲಿ ಮೂವ್ ಆಗ್ತಿರೋ ಟ್ರೈನಿಂದ ಬಿದ್ದು 33,445 ಜನ ಸತ್ತಿದ್ದಾರೆ. ಇದ್ರಲ್ಲಿ ಶೇ.15ರಷ್ಟು ಜನ ಮೂವ್ ಆಗ್ತಿರೋ ಟ್ರೈನಿಂದ ಇಳಿಯೋಕ್ಕೋಗಿ ಪ್ರಾಣ ಕಳ್ಕೊಂಡವ್ರು.

ಒಂದ್ 5 ನಿಮಿಷ ಲೇಟಾದ್ರೂ ಪರ್ವಾಗಿಲ್ಲ, ಟ್ರೈನ್ ನಿಂತ್ ಮೇಲೆ ಇಳೀರಿ, ಹತ್ರಿ. ಯಾಕಂದ್ರೆ ಪ್ರಾಣ ಹೋದ್ರೆ ಮತ್ತೆ ಬರಲ್ಲ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: