ಈ 22 ಸಿಂಪಲ್ ವಿಷಯಗಳು ಗೊತ್ತಿದ್ದರೆ ಡ್ರಸ್ ಮಾಡ್ಕೊಳೋದ್ರಲ್ಲಿ ನಿಮ್ನ ಮೀರ್ಸಕ್ಕಾಗಲ್ಲ

ಗಂಡಸಾದರೂ ಸರಿ ಹೆಂಗಸಾದರೂ‌ ಸರಿ ಸಕ್ಕತ್ತಾಗಿ ಮಿಂಚ್ತೀರಿ

ಪ್ರತಿಯೊಬ್ರೂ ಅಷ್ಟೇ ಚೆನ್ನಾಗಿ ಕಾಣ್ಬೇಕು ಅಂತ್ಲೇ ಬಟ್ಟೆ ಹಾಕ್ಕೋತಾರೆ. ಆದ್ರೆ ಹಾಕ್ಕೊಳ್ಳೋದನ್ನೇ ಸರಿಯಾಗಿ ಹಾಕ್ಕೋಬೇಕಷ್ಟೆ. ಇನ್‌ಶರ್ಟ್ ಹೆಂಗ್ ಮಾಡ್ಕೋಬೇಕು, ಯಾವ ಪ್ಯಾಂಟಿಗೆ ಯಾವ ಬೆಲ್ಟ್ ಮ್ಯಾಚ್ ಆಗುತ್ತೆ ಅನ್ನೋದು ತಿಳಿದಿದ್ರೆ ನಿಮಗೆ ಒಳ್ಳೇ ಅಭಿರುಚಿ ಇದೆ ಅಂತ. ಜೊತೆಗೆ ಪರ್ಫೆಕ್ಟ್ ಆಗಿಯೂ ಕಾಣ್ತೀರ. ಇದೇನು ಬ್ರಹ್ಮವಿದ್ಯೆ ಏನಲ್ಲ. ಈ ಸಣ್ಣಪುಟ್ಟ 22 ವಿಷಯಗಳನ್ನ ನೆನಪಿಟ್ಟುಕೊಂಡ್ರಾಯ್ತು. 

1. ಸ್ಟಿಪ್ ಆಗಿ ಇನ್‌ಶರ್ಟ್ ಮಾಡ್ಕೊಳ್ಳೋದು ಒಂದ್ ಕಲೆ, ಟೀಕು ಟಾಕಾಗಿರ್ಬೇಕು ಮಿಲ್ಟ್ರಿ ತರಹ ಇರ್ಬೇಕು
ಟೀಕು ಟಾಕಾಗಿ ಇನ್‌ಶರ್ಟ್ ಮಾಡ್ಕೊಳ್ಳೋದು ಹೇಗೆ? ಈ ವಿಡಿಯೋ ನೋಡಿ
2. ಭುಜದ ಮೇಲೆ ಹೊಲಿಗೆ ಪಟ್ಟಿ ಹತ್ರ ಶರ್ಟು ಮಡಿಚಿಕೊಳ್ಳದಂಗೆ ಸರಿಪಡಿಸಿಕೊಳ್ಳಿ
3. ಶರ್ಟಿನ ಕೊನೆ, ಬೆಲ್ಟ್ ಮತ್ತೆ ಜಿಪ್ ಇವೆಲ್ಲವೂ ಒಂದೇ ನೇರಕ್ಕೆ ಇರೋ ಹಾಗೆ ಸರಿಪಡಿಸಿಕೊಳ್ಳಿ
4. ಬಾರ್ಡರ್ ಚಿಕ್ಕದಾಗಿರೋ ಅಥ್ವಾ ಬಾರ್ಡರೇ ಇಲ್ದಿರೋ ಸೀರೆ ಉಟ್ರೆ ಎತ್ತರವಾಗಿ ಕಾಣ್ತೀರ
5. ನೀವು ತುಂಬಾ ತೆಳ್ಳಗಿದ್ದೀರಾ ಅಂದ್ರೆ, ಎಂಬ್ರಾಯಿಡರಿ ಜಾಸ್ತಿ ಇರೋದೋ ಅಥ್ವಾ ನೇಯ್ಗೆ ಕೆಲಸ ಜಾಸ್ತಿ ಇರೋಂತ ಸೀರೆ ಉಟ್ಕೊಳ್ಳಿ
6. ನೀವು ಎಷ್ಟೇ ಚೆನ್ನಾಗಿ ಡ್ರೆಸ್ ಮಾಡ್ಕೊಂಡ್ರೂ ಜಿಪ್ ಹಾಕೋದನ್ನ ಮರೆತ್ರೋ... ಮುಗೀತು! ಹಾಗೆ ಆಗದೆ ಇರೋಹಂಗೆ ನೋಡ್ಕೊಳಕ್ಕೆ ಒಂದು ಚಿಂದಿ ಐಡಿಯಾ ಇದೆ ನೋಡಿ...
7. ನಿಮ್ಮ ಚರ್ಮದ ಬಣ್ಣದ ಶೂ ಹಾಕ್ಕೊಳ್ಳೋದ್ರಿಂದ ಎತ್ತರವಾಗಿ ಕಾಣ್ತೀರ
8. ವೈಡ್ ನೆಕ್ ಟಾಪ್ಸ್ ಹಾಕ್ಕೊಂಡಾಗ ಒಂದೊದ್ಸಲ ಬ್ರಾ ಪಟ್ಟಿ ಹೊರಗೆ ಕಾಣ್ತಾ ಇರುತ್ತೆ, ಅದು ಹೊರಗೆ ಬರದಂಗೆ ಮಾಡೋ ಟೆಕ್ನಿಕ್ ಇದು
9. ಸ್ಲಿಮ್ ಆಗಿ ಕಾಣ್ಬೇಕು ಅಂದ್ರೆ ಸ್ವೆಟರ್ ಮತ್ತೆ ಬಟನ್ ಅಪ್ ಮಧ್ಯೆ ಟೈಟ್ ಟಾಪ್ ಹಾಕ್ಕೊಳ್ಳಿ
10. ನೆಕ್‌ಲೈನ್‌ಗೆ ತಕ್ಕಂತೆ ನೆಕ್ಲೇಸ್ ಹಾಕ್ಕೊಳ್ಳಿ
11. (ಹುಡುಗೀರು/ಹೆಂಗಸರು) ಬೆಲ್ಟ್-ನ ಈ ರೀತಿ ಕಟ್ಕೊಳ್ಳೋದ್ರಿಂದ ಹೊಸ ಲುಕ್ ಬರುತ್ತೆ
12. ರಿಪ್ಡ್ ಜೀನ್ಸ್ ಹಾಕ್ಕೊಂಡಾಗ ಅದ್ರೊಳಗೆ ಟೈಟ್ಸ್ ಹಾಕ್ಕೊಂಡ್ರೆ ಸೂಪರ್ ಆಗಿ ಕಾಣ್ತೀರ
13. ಅಡ್ಡಡ್ಡ ಪಟ್ಟಿ ಇರೋ ಬಟ್ಟೆ ಹಾಕ್ಕೊಂಡ್ರೆ ದಪ್ಪ ಇರೋ ಹಂಗೆ, ಉದ್ದುದ್ದ ಪಟ್ಟಿ ಇರೋದು ಹಾಕ್ಕೊಂಡ್ರೆ ತೆಳ್ಳಗೆ ಕಾಣ್ತೀರ
14. ಸ್ಕಿನ್ ಟೈಟ್ ಜೀನ್ಸ್ ಅಲ್ದೆ ಇದ್ರೆ ಶೂ ಹಾಕ್ಕೊಳ್ಳೋ ವಿಧಾನ
15. ಬ್ಲೇಜರ್ ಒಳಗಿಂದ ಟೈ ಎಷ್ಟು ಅಗಲ ಕಾಣುತ್ತೋ ಗಂಟೂ ಅಷ್ಟೇ ಅಗಲ ಇರಬೇಕು
16. ಯಾವಾಗಲೂ ಅಷ್ಟೆ ಬೆಲ್ಟ್ ಕಲರ್ ಶೂಗೆ ಮ್ಯಾಚ್ ಆಗೋ ಹಂಗಿರಬೇಕು
17. ಹೊಸ ಪ್ಯಾಂಟ್‌ ತಗೊಂಡಾಗ, ಶೂ ಹಾಕ್ಕೊಂಡ್ರೆ ನೆಲಕ್ಕೆ ಇನ್ನೇನು ತಾಕೋಹಂಗಿರಬೇಕು
18. ಫಾರ್ಮಲ್ ಹಾಕ್ಕೊಂಡಾಗ, ಪ್ಯಾಂಟ್ ಕಲರ್‌ಗೆ ಸಾಕ್ಸ್ ಕಲರ್ ಮ್ಯಾಚ್ ಆಗೋ ತರಹ ನೋಡ್ಕೊಳ್ಳಿ. ಒಂದ್ ವೇಳೆ ಆ ತರಹ ಕಲರ್ ಇಲ್ಲಾ ಅಂದ್ರೆ ಶೂ ಕಲರ್‌ಗೆ ಮ್ಯಾಚ್ ಆಗೋ ತರಹ ನೋಡ್ಕೊಳ್ಳಿ
19. ಬಟ್ಟೆ ಜಾಸ್ತಿ ಸುಕ್ಕುಗಟ್ಟಿದ್ರೆ ಅದನ್ನ ತಪ್ಪಿಸಕ್ಕೆ ತೋಳನ್ನ ಮಡಿಚಿಕೊಳ್ಳಿ
20. ಕಡಿಮೆ ಬೆಲೆಯ ಬ್ರಾ ಕಪ್ಸ್ ಬ್ಯಾಕ್‌ಲೆಸ್ ಡ್ರೆಸ್‌ಗೆ ಚೆನ್ನಾಗಿ ಫಿಟ್ ಆಗ್ತಾವೆ
21. ಆಂಕಲ್ ಲೆಂತ್ ಬೂಟ್ಸ್ ಹಾಕ್ಕೊಳ್ಳೋ ಕರೆಕ್ಟ್ ಮೆಥೆಡ್
22. ಶೂಗಳು ಈ ರೀತಿ ಹರಿದಿದ್ರೆ ಅದೇ ಬಣ್ಣದ ಮಾರ್ಕರ್ರಿಂದ ಬಣ್ಣ ಹಚ್ಚಿ ಅದು ಕಾಣ್ದಂಗೆ ಮಾಡಿ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: