ಈ 5 ತಂತ್ರಗಳು ಗೊತ್ತಿದ್ದರೆ ನೀವು ಬೆವರು ಸುರಿಸಿ ಸಂಪಾದನೆ ಮಾಡಿದ ದುಡ್ಡು ಹಾಳಾಗಲ್ಲ

ಕರೆಕ್ಟ್ ಟೈಮಿಗೆ ಬಿಲ್ ಕಟ್ಬಿ

ಕೆಲವರು ಎಷ್ಟೆಷ್ಟೋ ದುಡ್ಡು ಸಂಪಾದ್ನೆ ಮಾಡ್ತಾರೆ. ಆದ್ರೆ ತಿಂಗಳು ಕಳೆಯೋಷ್ಟರಲ್ಲಿ ಲೆಕ್ಕ ಹಾಕ್ದಾಗ ಹೆಂಗ್ ಖರ್ಚಾಯ್ತು ಅಂತ ಗೊತ್ತೇ ಆಗಲ್ಲ. ಆಮೇಲೆ ಒದ್ದಾಡ್ತಾರೆ. ಸಾಲ ಮಾಡ್ತಾರೆ. ಇನ್ನೊಂದ್ ತಿಂಗ್ಳು ಕಳೆಯೋಷ್ಟರಲ್ಲಿ ಮತ್ತೆ ಅದೇ ಪರಿಸ್ಥಿತಿ. ಹೀಗಾಗಬಾರ್ದು ಅಂದ್ರೆ ಮನಿ ಮ್ಯಾನೇಜ್‌ಮೆಂಟ್ ಗೊತ್ತಿರಬೇಕು. ಐದು ಸಿಂಪಲ್ ಟೆಕ್ನಿಕ್ಸ್ ಇಲ್ಲಿವೆ ನೋಡಿ.
 

1. ಕರೆಕ್ಟ್ ಟೈಮಿಗೆ ಬಿಲ್ಲುಗಳನ್ನ ಕ್ಲಿಯರ್ ಮಾಡ್ಕೊಳ್ಳಿ

ಫೋನ್ ಬಿಲ್, ಎಲೆಕ್ಟ್ರಿಸಿಟಿ ಬಿಲ್ ಏನೇ ಇರ್ಲಿ ಮೊದಲು ಟೈಮಿಗೆ ಸರಿಯಾಗಿ ಅದನ್ನ ಕಟ್ಬಿಡಿ. ಮನಿ ಮ್ಯಾನೇಜ್‌ಮೆಂಟಿನ ಮೊದಲ ಪಾಠ ಇದೆ. ಲೇಟಾಗಿ ಕಟ್ಟೋದ್ರಿಂದ ಲೇಟ್ ಫೀ ಅದೂ ಇದೂ ಅಂತ ನಿಮ್ಮ ಬಿಲ್ಲಿನ ಹಣದ ಜೊತೆಗೆ ಕಟ್ಟಬೇಕಾಗುತ್ತೆ. ವರ್ಷ ಪೂರ್ತಿ ನೀವು ಇದೇ ತರಹ ಮಾಡ್ತಾ ಹೋದ್ರೆ ಗಳಿಸಿದ ಹಣನಾ ಸುಮ್ನೆ ಕಳೀತಿದ್ದೀರ ಎಂದರ್ಥ.

2. ಬೋನಸ್ ಹಣಾನ ಕೂಡಿಡಿ

ಬೋನಸ್ ಹಣಾನ ಕೂಡಿಡೋದು ಒಂದು ಕಲೆ. ಇದ್ರಿಂದ ಮುಂದೆ ದುಡ್ಡು ಬೇಕಾದಾಗ ಸಹಾಯವಾಗುತ್ತೆ. ಬೋಸನ್ ಬಂತು ಅಂತೇಳಿ ಇದ್ದಬದ್ದ ಹಣಾನೂ ಖರ್ಚು ಮಾಡಿಕೊಂಡರೆ ಮುಂದೆ ತೊಂದರೆ ತಪ್ಪಿದ್ದಲ್ಲ. ಮುಂದೇನಾಗುತ್ತೋ ಏನೋ ಯಾರಿಗೂ ಗೊತ್ತಿಲ್ಲ. ಕೈಯಲ್ಲಿ ಒಂದಷ್ಟು ಹಣ ಇದ್ರೆ ಒಳ್ಳೇದು.

3. ತಿಂಗಳ ಬಜೆಟ್ ತಯಾರಿಸಿಕೊಳ್ಳಿ

ಬಂದನ್ನ ಹಾಗ್ ಹಾಗೇ ಖರ್ಚ್ ಮಾಡ್ತಾ ಹೋದ್ರೆ ಏನೇನು ಪ್ರಯೋಜನ ಇಲ್ಲ. ತಿಂಗಳ ಬಜೆಟ್ ಪ್ಲಾನ್ ಮಾಡೋದು ಎಲ್ಲ ರೀತಿಯಲ್ಲೂ ಒಳ್ಳೇದು. ಪೆಟ್ರೋಲು, ಡೀಸೆಲ್ಲು, ದಿನಸಿ ಅದೂಇದೂ ಅಂತ ತಿಂಗಳಿಗೆ ಎಷ್ಟು ಖರ್ಚಾಗುತ್ತಿದೆ, ಎಷ್ಟು ಉಳಿತಾಯ ಮಾಡ್ಬೋದು ಅಂತ ಬಜೆಟ್ ತಯಾರಿಸೋದು ಉತ್ತಮ. 

4. ಸ್ವಲ್ಪ ಹಣಾನ ಇನ್ವೆಷ್ಟ್ ಮಾಡಿ

ಈಗೇನೂ ಪರ್ವಾಗಿಲ್ಲ. ಜೀವನ ನಡೀತಿದೆ ಅಂದ್ಕೊಂಡಿರ್ತೀರ. ಆದ್ರೆ ಮುಂದೆ ಏನಾಗುತ್ತೋ ಏನೋ ಅನ್ನೋದು ಯಾರಿಗೂ ಗೊತ್ತಿಲ್ಲ. ಒಂದಷ್ಟು ಹಣಾನ ಒಳ್ಳೆ ಸ್ಕೀಮುಗಳಲ್ಲಿ ಇನ್ವೆಷ್ಟ್ ಮಾಡೋದು ಒಳ್ಳೆದು. ನಿಮ್ಮ ಸಂಬಳದಲ್ಲಿ ಎಷ್ಟು ಹಣಾನ ಇನ್ವೆಷ್ಟ್ ಮಾಡ್ಬೋದು ಅಂತ ಲೆಕ್ಕಾಚಾರ ಹಾಕ್ಕೊಳ್ಳಿ. ತಿಂಗಳಿಗಿಷ್ಟು ಅಂತ ಟ್ಯಾಕ್ಸ್ ಉಳಿಸೋ ಸ್ಕೀಮುಗಳಲ್ಲಿ ಹಣ ತೊಡಗಿಸಿ.   ಇಲ್ಲಾ ವರ್ಷಕ್ಕೆ ಇಂತಿಷ್ಟು ಅಂತ ಒಂದೇ ಸಲ ಹಣ ಹೂಡೋ ಹಂಗೆ ಪ್ಲಾನ್ ಮಾಡ್ಕೊಳ್ಳಿ. 

5. ಸ್ವಲ್ಪ ಹಣಾನ ದಾನ ಮಾಡಿ

ನಾವು ಗಳಿಸಿದ ಹಣದಿಂದ ಸಮಾಜಕ್ಕೂ ಒಂದಷ್ಟು ಒಳ್ಳೇದಾಗ್ಬೇಕು. ಹಾಗಂತೇಳಿ ಲಕ್ಷಾಂತರ ದುಡ್ಡನ್ನ ದಾನ ಮಾಡಿ ಅಂತ ಹೇಳ್ತಿಲ್ಲ. ನಿಮ್ಮ ಕೈಲಾದಷ್ಟು ಹಣಾನ ಸಮಾಜಕ್ಕೆ ಕೊಡೋದ್ರಿಂದ ಮಾನಸಿಕ ತೃಪ್ತಿ ಸಿಗುತ್ತೆ. ಇದ್ರಿಂದ ಆರೋಗ್ಯಾನೂ ಚೆನ್ನಾಗಿರುತ್ತೆ. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: