ಮಗು ಹೇಗ್ ಹುಟ್ಟುತ್ತೆ ಅನ್ನೋ ಕುತೂಹಲ ಇರೋರು ತಪ್ಪದೆ ಈ 23 ಫೋಟೋ ನೋಡಿ

ಮೊದಲನೇ ಕ್ಷಣದಿಂದ 9 ತಿಂಗಳ ವರೆಗೆ

ಮನುಷ್ಯನ ಭ್ರೂಣ ಹೇಗೆಲ್ಲಾ ಬೆಳೆಯತ್ತೆ? ಮಗು ಹೇಗೆ ಹುಟ್ಟುತ್ತೆ? ಅನ್ನೋದನ್ನ ಫೋಟೋಗಳಲ್ಲಿ ತೋರ್ಸಕ್ಕೆ 10 ವರ್ಷ ಕಷ್ಟಪಟ್ಟಿದ್ದಾರೆ ಲೆನ್ನಾರ್ಟ್ ನಿಲ್ಸನ್ ಅನ್ನೋ ಈ ಫೋಟೋಗ್ರಾಫರ್.  ಇವ್ರು ತೆಗೆದ ಫೋಟೋಗಳನ್ನ ’ಲೈಫ್’ ಅನ್ನೋ ಮ್ಯಾಗಝಿನ್‌‍ 1965ರಲ್ಲಿ 16 ಪುಟಗಳಲ್ಲಿ ಪ್ರಕಟಿಸ್ತು. ಆಗ್ಲೇ ಈ ಜಗತ್ತಿಗೆ ಇವ್ರ ಹೆಸರು ಗೊತ್ತಾಗಿದ್ದು. 

ಆಮೇಲೆ ಅದೇ ಫೋಟೋಗಳ್ನ ಸ್ಟರ್ನ್, ಪ್ಯಾರಿಸ್ ಮಾರ್ಚ್, ದಿ ಸಂಡೇ ಟೈಂಸ್ ಸೇರಿದಂತೆ ಬೇರೆಬೇರೆ ಪತ್ರಿಕೆಳು ಅಚ್ಚಾಕಿದ್ವು. ಚಿಕ್ಕಂದಿನಿಂದ್ಲೇ ಮೈಕ್ರೋಸ್ಕೋಪ್ ಮತ್ತೆ ಕ್ಯಾಮೆರಾಗಳ ಬಗ್ಗೆ ತುಂಬಾ ಆಸಕ್ತಿ ಬೆಳೆಸಿಕೊಂಡಿದ್ರಂತೆ ನಿಲ್ಸನ್. ಆಮೇಲೆ ಆ ಆಸಕ್ತಿನೇ ದೊಡ್ಡದಾಯ್ತು. ಭ್ರೂಣಾವಸ್ಥೆಯಿಂದ ಮಗು ಹೇಗೆಲ್ಲಾ ಡೆವಲಪ್ ಆಗುತ್ತೆ ಅನ್ನೋ ಅದ್ಭುತ ಜಗತ್ತನ್ನ ತೋರಿಸೋದಕ್ಕೆ ಕೈಹಾಕಿದ್ರು.      

1957ರಲ್ಲೇ ಮನುಷ್ಯನ ಭ್ರೂಣದ ಫೋಟೋ ತೆಗೆದಿದ್ರಂತೆ. ಆದರೆ ಅದು ಪ್ರಕಟಿಸೋಷ್ಟು ಚೆನ್ನಾಗಿರಲಿಲ್ವಂತೆ. ಮನುಷ್ಯನ ಉಚ್ಚೆಚೀಲವನ್ನ ಪರೀಕ್ಷಿಸೋ ’ಸಿಸ್ಟೋಸ್ಕೋಪ್’ ಅನ್ನೋ ಮೆಡಿಕಲ್ ಇನ್‌ಸ್ಟ್ರುಮೆಂಟ್ ಬಳಸಿ ಈ ಫೋಟೋಗಳನ್ನ ತೆಗೆದ್ರು. ಪುಟ್ಟ ಕ್ಯಾಮೆರಾಗೆ ಲೈಟ್ ಅಟ್ಯಾಚ್ ಮಾಡಿ ತಾಯಿ ಹೊಟ್ಟೇಲಿ ಬೆಳೀತಿರೋ ಮಗುವಿನ ಸಾವಿರಾರು ಫೋಟೋ ತೆಗೆದ್ರಂತೆ. 

ಇವ್ರ ಫೋಟೋಗಳು ಬಿಡುಗಡೆಯಾದ್ಮೇಲೆ ಇಡೀ ಜಗತ್ತು ಬೆರಗಾಯ್ತು. ಭ್ರೂಣಾವಸ್ಥೆಯಿಂದ ಮಗು ಹೇಗೆಲ್ಲಾ ಬೆಳೆಯುತ್ತೆ ಅನ್ನೋದನ್ನ ನೋಡಿ ಅಚ್ಚರಿಪಟ್ರು. ಮಗು ಹೇಗ್ ಹುಟ್ಟುತ್ತೆ ಅಂತ ತೋರಿಸೋ 23 ಫೋಟೋ ಇಲ್ಲಿವೆ ನೋಡಿ. 

ಫೆಲೋಪಿಯನ್ ನಾಳದ ಮೂಲಕ ಅಂಡಾಣು ಕಡೆಗೆ ವೀರ್ಯಾಣು ಹೋಗ್ತಾ ಇರೋದನ್ನ ನೋಡ್ಬೋದು
ಅಂಡಾಣು ಫೋಟೋ
ಗರ್ಭಿಣಿ ಆಗೋಕು ಮುಂಚಿನ ಕೆಲವೇ ಸೆಕೆಂಡುಗಳ ಫೋಟೋ
ತಂದೆಯ 2000 ಲಕ್ಷ ವೀರ್ಯಾಣುಗಳಲ್ಲಿ ಒಂದೇ ಒಂದು ಅಂಡಾಣುವಿನೊಳಗೆ ನುಗ್ಗೋ ಸಮಯ
ವೀರ್ಯಾಣು ತಲೆಭಾಗ ಅನುವಂಶಿಕ ಅಂಶಗಳನ್ನ ಒಳಗೊಂಡಿರುತ್ತೆ
ಒದ್ ವಾರ ಆದ್ಮೇಲೆ, ಫೆಲೋಪಿಯನ್ ಟ್ಯೂಬಿಂದ ಭ್ರೂಣ ಕೆಳಕ್ಕೆ ತೇಲ್ತಾ ಬಂದು ಗರ್ಭಕೋಶ ತಲುಪುತ್ತೆ
ಇನ್ನೊಂದ್ ವಾರ ಆದ್ಮೇಲೆ, ಭ್ರೂಣ ಗರ್ಭಾಶಯಕ್ಕೆ ಅಂಟಿಕೊಳ್ಳುತ್ತೆ
22 ದಿನಗಳ ಭ್ರೂಣ ಇದು. ಕಂದುಬಣ್ಣ ಇರೋದು ಮಗುವಿನ ಮಿದುಳು
18ನೇ ದಿನದ ಬೆಳವಣಿಗೆ, ಭ್ರೂಣದ ಹೃದಯ ಬಡಿತ ಶುರುವಾಗೋ ಹಂತ
ಬಸಿರಾದ ಮೇಲೆ 28ನೇ ದಿನದ ಹಂತ
ಐದು ವಾರದ ಬಳಿಕ, ಭ್ರೂಣ 9 ಮಿ.ಮೀ ಉದ್ದ ಬೆಳೆದಿರುತ್ತೆ; ಮೂಗು, ಬಾಯಿ, ಕಣ್ಣು ಬೆಳೀತಿರೋದನ್ನ ಗುರುತಿಸ್ಬೋದು
40 ದಿನಗಳಲ್ಲಿ ಆಗಿರೋ ಬೆಳವಣಿಗೆ. ಭ್ರೂಣದ ಹೊರಗಿನ ಭಾಗ ಗರ್ಭಕೋಶಕ್ಕೆ ಅಂಟಿಕೊಂಡು ಮಾಸು ತಯಾರಾಗುತ್ತೆ
8 ವಾರಗಳ ಭ್ರೂಣ
10 ವಾರಗಳು. ಕಣ್ಣಿನ ರೆಪ್ಪೆ ಅರ್ಧ ತೆರಕೊಂಡಿದೆ. ಕೆಲವೇ ದಿನಗಳಲ್ಲಿ ಪೂರ್ಣವಾಗಿ ಕಣ್ಣು ಬೆಳೆಯುತ್ತೆ.
10 ವಾರ ಆದ್ಮೇಲೆ ಭ್ರೂಣ ಕೈಗಳನ್ನ ಆಡಿಸೋಕೆ ಶುರು ಮಾಡುತ್ತೆ
16 ವಾರ ಆದ್ಮೇಲೆ
ಚರ್ಮದ ಮೂಲಕ ರಕ್ತನಾಳ ಬೆಳವಣಿಗೆ ಆಗಿರೋದನ್ನ ನೋಡ್ದ್ಬೋದು
18 ವಾರಗಳು. ಭ್ರೂಣ ಈಗ ಹೊರಗಿನ ಶಬ್ದಗಳನ್ನ ಕೇಳಿಸ್ಕೊಳ್ಳತ್ತೆ
19 ವಾರದ ನಂತರ ಉಗುರು ಬೆಳೆದಿರೋದನ್ನ ನೋಡ್ಬೋದು
20 ವಾರದ ಬಳಿಕ ಭ್ರೂಣ 20 ಸೆಂ.ಮೀ ಬೆಳೆದಿರುತ್ತೆ. ತಲೆ ಮೇಲೆ ಕೂದಲು ಬೆಳೆಯೋಕೆ ಶುರುವಾಗುತ್ತೆ
24 ವಾರಗಳ ಬಳಿಕ
6 ತಿಂಗಳ ಭ್ರೂಣ
36 ವಾರಗಳಾದ್ಮೇಲೆ ಇನ್ನೊಂದ್ ತಿಂಗ್ಳಲ್ಲಿ ಮಗೂನ ತಾಯಿ ಹೆರೋ ಸಮಯ

’A Child is Born’ ಅನ್ನೋದು 1965ರಲ್ಲಿ ನಿಲ್ಸನ್ ಬರೆದಿರೋ ಪುಸ್ತಕ. ಪ್ರಕಟಣೆ ಆದ ಕೆಲವೇ ದಿನಗಳಲ್ಲಿ ಎಲ್ಲಾ ಪ್ರತಿಗಳು ಮಾರಾಟವಾಗಿ ಸಾಕಷ್ಟು ಸಲ ರೀಪಬ್ಲಿಶ್ ಆಗಿದೆ. ಫೋಟೋಗ್ರಫಿ ಪುಸ್ತಕಗಳಲ್ಲೇ ಅತ್ಯಂತ ಜನಪ್ರಿಯ ಕೃತಿ ಇದು ಅಂತ ಹೆಸರಾಗಿದೆ. ನಿಲ್ಸನ್ ಅವರಿಗೆ ಈಗ 91 ವರ್ಷ ವಯಸ್ಸು. ಈಗ್ಲೂ ಆವರಿಗೆ ವಿಜ್ಞಾನ ಮತ್ತೆ ಫೋಟೋಗ್ರಫಿ ಅಂದ್ರೆ ಇಷ್ಟವಂತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: