ಹೆಣ್ಣು ಸುಖದ ತುತ್ತತುದಿಗೆ ತಲುಪಿದಾಗ ಹೇಗೆ ಕಾಣ್ತಾಳೆ ಅಂತ ತೋರಿಸೋ 15 ಫೋಟೋಗಳು

ಇದು ಆಕ್ಟಿಂಗ್ ಅಲ್ಲ

ಆಲ್ಬರ್ಟ್ ಪೋಸೀಜ್ ಅನ್ನೋರು ಇಂಗ್ಲಿಷ್ನಲ್ಲಿ ಬರೆದ ಒಂದು ಬರಹವನ್ನ ಅಂತೆಕಂತೆ ನಿಮಗಾಗಿ ಕನ್ನಡದಲ್ಲಿ ತಂದಿದೆ...

"ನನ್ನ ಹೆಸರು ಆಲ್ಬರ್ಟ್ ಪೊಸೀಜ್ ಅಂತ. ಹತ್ತು ವರ್ಷಗಳಿಂದ ಫೋಟೋಗ್ರಫಿ ಕೆಲಸ ಮಾಡ್ತಿದ್ದೇನೆ. ಹೆಣ್ಣು ಸುಖದ ಉತ್ತುಂಗ ತಲುಪಿದಾಗ ಹೇಗೆ ಕಾಣ್ತಾಳೆ ಅನ್ನೋ ಕಾನ್ಸೆಪ್ಟನ್ನ ಇಟ್ಟುಕೊಂಡು ಸ್ವತಃ ನಾನೇ ತೆಗೆದಿರೋಂತ ಫೋಟೋಗಳಿವು. ಪರ್ಸನಲ್ ಆಗಿ ತುಂಬಾ ಚಾಲೆಂಜಿಂಗ್ ಆಗಿತ್ತು ಈ ಕೆಲಸ. ಈ ಐಡಿಯಾ ಹೇಗೆ ಬಂತೋ ಅಂತ ನನಗೆ ಒಂದೊಂದ್ ಸಲ ಅನ್ಸತ್ತೆ. ಈ ಬಗ್ಗೆ ಕನಸು ಕಂಡೆ. ಕಡೆಗೆ ಹೆಣ್ಣಿನ ಕಾಮೋದ್ರೇಕದ ಉತ್ತುಂಗ ತಲುಪಿದಾಗ ಹೇಗೆ ಕಾಣ್ತಾಳೆ ಅನ್ನೋದನ್ನ ಸೆರೆಹಿಡಿದೆ. ನನ್ನ ಪಾಲಿಗಿದು ಫೋಟೋಗ್ರಫಿ ಪ್ರಯೋಗ. 

ಮೊದಲು ನನ್ನಿಂದಿದು ಆಗದ ಕೆಲಸ ಅಂತ ಅನ್ನಿಸಿಬಿಡ್ತು. ಮಾಡೆಲುಗಳನ್ನು ಹುಡುಕೋದೇ ದೊಡ್ಡ ತಲೆನೋವಾಗಿತ್ತು. ಈ ಬಗ್ಗೆ ಎಲ್ರಿಗೂ ಪತ್ರ ಬರೀತಾ ಹೋದೆ. ಅವ್ರ ಮನಸ್ಸಲ್ಲಿ ಏನಿದೆ ಅಂತ ತಿಳ್ಕೋಬೇಕಿತ್ತು. ಯಾಕಂದ್ರೆ ಎಲ್ಲಾ ಹೆಣ್ಣು ಒಂದೇ ತರ ಇರಲ್ಲ. ನನಗೆ ಬಂದ ಉತ್ತರಗಳು ಬಹುತೇಕ ಎರಡು ತರ ಇತ್ತು: "ನನಗೆ ಅಷ್ಟೆಲ್ಲಾ ಧೈರ್ಯ ಇಲ್ಲ", ಮತ್ತೆ ಇನ್ ಕೆಲಸವರದ್ದು ಮೌನವೇ ಉತ್ತರ. 

ಕಡೆಗೆ 20 ಮಂದಿ ಹೆಂಗಸರನ್ನ ಆಯ್ಕೆ ಮಾಡ್ಕೊಂಡೆ. ಅವರೆಲ್ಲಾ ಒಪ್ಪಿದ್ರು. ಇದು ಆಕ್ಟಿಂಗ್ ಅಲ್ಲ ಅಂತ ಹೇಳ್ದಾಗ ಕೆಲವರು ಹಿಂದೆ ಸರಿದ್ರು. ಕೆಲವರು ಸ್ವಲ್ಪ ದಿನ ಶೂಟಿಂಗ್‌ನಲ್ಲಿದ್ದು ಹೊರಟೋದ್ರು. ಕಡೆಗೆ ಉಳ್ಕೊಂಡಿದ್ದು 15 ಮಂದಿ ಮಾತ್ರ.    

ಇಲ್ಲಿರೋ ಹೆಂಗಸರೆಲ್ಲಾ ಯಾರೂ ಆಕ್ಟಿಂಗ್ ಮಾಡಿಲ್ಲ. ಅವರೆಲ್ಲಾ ನಿಜವಾಗಿ ಅನುಭವಿಸಿದಾಗ ತೆಗೆದಿರೋ ಅಂತ ಫೋಟೋಗಳಿವು. ಟೈಮ್ ಸೆಟ್ ಮಾಡಿ ಕ್ಯಾಮೆರಾ ಅಲ್ಲಿಟ್ಟು ಬಂದ್ಬಿಡ್ತಿದ್ದೆ. ಆ ಜಾಗದಲ್ಲಿ ಕ್ಯಾಮೆರಾ ಮಾತ್ರ ಇರ್ತಿತ್ತು. ಪ್ರತಿ ಸೆಕೆಂಡಿನ ಫೋಟೋಗಳು ತನ್ನ ಪಾಡಿಗದು ತಗೊಳ್ತಿತ್ತು. ಇದ್ರಿಂದ ಮಾಡೆಲ್‌ಗಳಿಗೆ ಯಾವುದೇ ಕಿರಿಕಿರಿ ಇರ್ಲಿಲ್ಲ. ಆರಾಮವಾಗಿ ಸುಖದ ಉತ್ತುಂಗಕ್ಕೆ ತಲುಪ್ತಿದ್ರು. ಕೆಲವರು ನೀವೇ ಇದ್ದು ತೆಗೆಯಕ್ಕೆ ನಮ್ದೇನು ಅಭ್ಯಂತರ ಇಲ್ಲ ಅಂತ ಹೇಳಿದ್ದಕ್ಕೆ ನಾನೇ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇನೆ. 

ಈ ಪ್ರಾಜೆಕ್ಟನ್ನ ನಟನೆ ಇಲ್ಲದಂಗೆ ಸಹಜವಾಗಿ, ನಿಜವಾಗಿ ಮಾಡ್ಬೇಕಾಗಿತ್ತು. ಹೆಣ್ಣು ಸುಖದ ಉತ್ತುಂಗ ತಲುಪಿದಾಗ ಹೇಗೆ ಕಾಣ್ತಾಳೆ ಅನ್ನೋದನ್ನ ಸೆರೆಹಿಡೀಬೇಕಿತ್ತು. ಒಬ್ರು ಇದ್ದಂಗೆ ಇನ್ನೊಬ್ಬರು ಇರಲ್ಲ. ಕಾಮೋದ್ರೇಕದ ವಿಚಾರದಲ್ಲೂ ಅಷ್ಟೇ. ಹಿಂಗೇ ಮಾಡಿ, ಮುಖದ ಭಾವನೆ ಹಿಂಗೇ ಇರ್ಲಿ ಅಂತ ನಾನೆಲ್ಲೂ ಹೇಳಕ್ಕೆ ಹೋಗಿಲ್ಲ. ಆ ರೀತಿ ಮಾಡಿದ್ರೆ ಈ ಫೋಟೋಗಳಲ್ಲಿ ನಟನೆ ಕಾಣಿಸಿಕೊಂಡ್ ಬಿಡ್ತಿತ್ತು. ನೋಡೋವ್ರ ಕಣ್ಣಿಗೆ ಅದು ಗೊತ್ತಾಗ್ತಿತ್ತು. ಸುಖದ ಉತ್ತುಂಗ ತಲುಪಿದಾಗ ಅವರು ಹೇಗೆ ಕಂಡರೋ ಹಾಗೆ ಸೆರೆಹಿಡಿದ್ದೇನೆ. ಇಲ್ಲಿ ಯಾವುದೇ ಕ್ಲೀಷೆ ಇಲ್ಲ."

ಏನನೇನೋ ಫೋಟೋಗಳನ್ನ ನೋಡಿರ್ತೀರ. ಆದರೆ ಈ ತರದ ಫೋಟೋಗ್ರಫಿ ಮತ್ತೆ ಫೋಟೋಗಳನ್ನ ಖಂಡಿತ ನೋಡಿರಲ್ಲ ಅನ್ಕೊಂಡಿದೀವಿ... ಹೆಣ್ಣಿನ ಜೀವನದ ಈ ಒಂದು ಮುಖ್ಯವಾದ ಭಾಗವನ್ನ ಕೆಟ್ಟದಾಗಿ, ಅಶ್ಲೀಲವಾಗಿ ತೋರಿಸದೆ ಫೋಟೋ‌ ತೆಗೀಬೋದು ಅಂತ ಆಲ್ಬರ್ಟ್ ತೋರಿಸಿಕೊಟ್ಟಿದ್ದಾರೆ... ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಫೇಸ್ಬುಕ್ ಚರ್ಚೆ:

ರಾಮಾಯಣ ಅರಿದು ಕುಡಿದಿದ್ದರೆ ಮಾತ್ರ ನಿಮಗೆ ಈ 10 ವಿಚಿತ್ರ ಸತ್ಯಗಳು ಗೊತ್ತಿರಕ್ಕೆ ಸಾಧ್ಯ

ಇಲ್ಲದಿದ್ದರೆ ಬಹಳ ಆಶ್ಚರ್ಯ ಆಗುತ್ತೆ

ಕೆಲವ್ರು ರಾಮಾಯಣ ಮತ್ತೆ ಮಹಾಭಾರತ ಅರಿದು ಕುಡಿದು ಬಿಟ್ಟಿದ್ದೀವಿ ಅಂತಿರ್ತಾರೆ. ಆದ್ರೂ ಕೆಲವೊಂದು ವಿಷಯಗಳು ಎಷ್ಟೋ ಮಂದಿಗೆ ಗೊತ್ತಿರಲ್ಲ. ವಾಲ್ಮೀಕಿ ಬರೆದಿರೋಂತ ರಾಮಾಯಣದ ರಾಮ, ಲಕ್ಷ್ಮಣ, ಸೀತೆ ಇಂದಿನವ್ರಿಗೂ ಆದರ್ಶ. ಈವತ್ತಿಗೂ ರಾಮಾಯಣ, ಅದ್ರ ಪಾತ್ರಗಳು ನಮಗೆಲ್ಲಾ ದಾರಿ ತೋರಿಸೋ ತರಹ ಇವೆ. ಆದ್ರೂ ರಾಮಾಯಣದ  ಬಗ್ಗೆ ಎಷ್ಟೋ ಸತ್ಯಗಳು ಜನಕ್ಕೆ ಗೊತ್ತಿರಲ್ಲ. ಮಹಾನ್ ಪಂಡಿತರಿಗೆ ಮಾತ್ರ ಗೊತ್ತಿರುವಂಥ 10 ವಿಚಿತ್ರ ಸತ್ಯಗಳನ್ನು ನಾವಿಲ್ಲಿ ಕೊಡ್ತಿದ್ದೇವೆ.

1. ರಾಮನಿಗೆ ಶಾಂತಾ ಅಂತ ಒಬ್ಬಳು ಅಕ್ಕ ಇರ್ತಾಳೆ

ದಶರಥನಿಗೆ ಕೌಸಲ್ಯೆಯಿಂದ ಹುಟ್ಟಿದ ಮಗಳು ಇವಳು. ಅಂಗದೇಶದ ರಾಜ ರೋಮಪಾದ ಅವಳನ್ನ ದತ್ತು ತೊಗೊಂಡಿರ್ತಾನೆ.

2. ರಾವಣನಿಗೆ 10 ತಲೆಗಳು ಬಂದದ್ದು ಈಶ್ವರನಿಂದ

ಈಶ್ವರನ ಪರಮ ಭಕ್ತನಾಗಿದ್ದ ರಾವಣ. ಘೋರ ತಪಸ್ಸು ಮಾಡಿ ತಲೆಯನ್ನೇ ಈಶ್ವರನಿಗೆ ಅರ್ಪಿಸಿದ್ದ. ಆದರೂ ತಲೆ ಮತ್ತೆ ಬೆಳೀತಿತ್ತಂತೆ. ಹತ್ತು ಸಲ ತಲೆ ಈಶ್ವರನಿಗೆ ಅರ್ಪಿಸಿದರೂ ಅದು ಮತ್ತೆಮತ್ತೆ ಬೆಳೀತಾನೇ ಇತ್ತಂತೆ. ಕೊನೆಗೆ ಶಿವನು ಪ್ರತ್ಯಕ್ಷನಾಗಿ ಎಲ್ಲಾ ಹತ್ತು ತಲೆಗಳನ್ನು ವಾಪಸ್ಸು ಕೊಟ್ನಂತೆ. ಹಾಗಾಗಿ ರಾವಣನಿಗೆ 10 ತಲೆಗಳು ಬಂದವು ಅಂತ ಪುರಾಣ ಹೇಳುತ್ತೆ.

3. ರಾವಣನಿಗಿಂತ ಮೊದಲು ಲಂಕೇನ ಕುಬೇರ ಆಳ್ತಿರ್ತಾನೆ

ಲಂಕೆಯನ್ನ ಕಟ್ಟಿ ಆಳ್ತಾ ಇದ್ದದ್ದು ಕುಬೇರ. ಅವನ ಮಲಣ್ಣ ರಾವಣ ಯುದ್ದ ಮಾಡಿ ಕುಬೇರನಿಂದ ಲಂಕೆಯನ್ನ ಕಿತ್ತುಕೊಂಡ ಅಂತ ಪುರಾಣ ಹೇಳುತ್ತೆ.

 

4. ಲಕ್ಷ್ಮಣ ಶೇಷನಾಗನ (ಆದಿಶೇಷನ) ಅವತಾರ

ವಿಷ್ಣುವಿನ ಅವತಾರ ರಾಮ ಅನ್ನೋದು ಎಲ್ರಿಗೂ ಗೊತ್ತು. ಆದರೆ ಶೇಷನಾಗನ ಅವತಾರ ಲಕ್ಷ್ಮಣ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ.   

5. ಹದಿನಾಲ್ಕು ವರ್ಷಗಳ ವನವಾಸದಲ್ಲಿ ಲಕ್ಷ್ಮಣ ನಿದ್ದೇನೇ ಮಾಡಲ್ಲ

ಯಾಕಂದ್ರೆ ವನವಾಸದಲ್ಲಿದ್ದ ರಾಮ ಮತ್ತೆ ಸೀತೆಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋಬೇಕಾಗಿತ್ತು. ಅದಕ್ಕಾಗಿ ತನಗೆ ನಿದ್ದೆ ಬರದೆ ಇರೋಹಂಗೆ ನಿದ್ರಾದೇವಿಯ ವರ ಪಡ್ಕೊಂಡಿರ್ತಾನೆ ಲಕ್ಷ್ಮಣ.

6. ಶ್ರೀಕೃಷ್ಣನನ್ನ ಬೇಟೆಗಾರನಾಗಿ ಬಂದು ಕೊಂದದ್ದು ವಾಲಿ

ಮರದ ಕೆಳಗೆ ಮಲಗಿ ನಿದ್ದೆ ಮಾಡ್ತಿದ್ದಾಗ ಶ್ರೀಕೃಷ್ಣನನ್ನ ಜರಾ ಅನ್ನೋ ಬೇಟೆಗಾರ ಬಾಣಬಿಟ್ಟು ಕೊಂದ. ಈ ಬೇಟೆಗಾರ ಬೇರೆ ಯಾರು ಅಲ್ಲ, ವಾಲಿ ಅವತಾರ. 

7. ಲಕ್ಷ್ಮಣ ಸಾಯೋದು ರಾಮನ ಒಂದು ಮಾತಿಂದ

ಒಮ್ಮೆ ಯಮಧರ್ಮನನ್ನು ರಾಮ ಭೇಟಿಯಾಗಿ ನಮ್ಮಿಬ್ಬರ ಮಾತುಕತೆಗೆ ಯಾರೇ ಬಂದು ಅಡ್ಡಿಪಡಿಸಿದ್ರೂ ಅವರನ್ನ ಸಾಯಿಸಿಬಿಡು ಅಂತ ಕೇಳ್ಕೊಂಡಿದ್ದ. ಅದೇ ಟೈಮಿಗೆ ಪಾಪ ಲಕ್ಷ್ಮಣ ಬರ್ತಾನೆ. ರಾಮನನ್ನ ಮಾತಾಡ್ಬೇಕು ಅಂತಾನೆ. ಆಗ ರಾಮ ಹೇಳಿದಂಗೆ ಲಕ್ಷ್ಮಣನ್ನ ಯಮ ಸಾಯಿಸ್ತಾನೆ.

8. ಹನುಮಂತನಿಗೆ ಒಂದು ಹೂವಿನಿಂದ ಭಜರಂಗಬಲಿ ಅಂತ ಹೆಸರು ಬಂತು

ಸಿಂಧೂರ ಹೂವು ತಲೆ ಮೇಲೆ ಇದ್ದಷ್ಟು ಹೊತ್ತು ರಾಮ ಆರೋಗ್ಯವಾಗಿರ್ತಾನೆ ಅಂತ ಹನುಮಂತನಿಗೆ ಒಮ್ಮೆ ಸೀತೆ ಹೇಳಿದ್ಲು. ಅದನ್ನ ಕೇಳಿ ಹನುಮ ದೇಹವನ್ನೇ ಸಿಂಧೂರವಾಗಿ ಬದಲಾಯಿಸಿಕೊಂಡಿದ್ದ. ಭಜರಂಗ್ ಅಂದ್ರೆ ಸಿಂಧೂರ ಅಂತ ಅರ್ಥ. ತನ್ನನ್ನು ತಾನು ಸಿಂಧೂರವಾಗಿಸಿಕೊಂಡ ಕಾರಣ ಭಜರಂಗಬಲಿ ಅಂತ ಹೆಸರು ಬಂತು.

9. ಅಳಿಲು ಬೆನ್ನ ಮೇಲೆ ಮೂರು ಗೆರೆ ಇರೋದಕ್ಕೆ ರಾಮ ಕಾರಣ

ಲಂಕೆಗೆ ಹೋಗ್ಬೇಕಾದ್ರೆ ಕಪಿಸೈನ ರಾಮಸೇತು ಕಟ್ಟಿತು. ಅದನ್ನ ಕಟ್ಟಬೇಕಾದ್ರೆ ಅಳಿಲುಗಳು ಮಣ್ಣನ್ನ ತಂದುಕೊಡ್ತಿದ್ವು. ಇದನ್ನ ಕಂಡ ಕಪಿಸೈನ್ಯ ನಗಾಡ್ತಿತ್ತು. ಆದರೆ ರಾಮನು ಅವುಗಳ ಅಳಿಲು ಸೇವೆಯನ್ನ ತುಂಬಾ ಇಷ್ಟಪಟ್ಟಿದ್ದ. ಅಳಿಲನ್ನ ಎತ್ಕೊಂಡು ಬೆನ್ನು ಸವರಿದಾಗ ಈ ಮೂರು ಗೆರೆಗಳು ಮೂಡಿದ್ವಂತೆ. 

 

10. ಶೂರ್ಪಣಖೀಗೆ ಅಣ್ಣ ರಾವಣನ್ನ ಸಾಯಿಸಬೇಕು ಅನ್ನೋ ಬಯಕೆ ಇರುತ್ತೆ

ಇದು ನಿಜವಾಗ್ಲೂ ಅಚ್ಚರಿ ಪಡೋಂತ ಸಂಗತಿ. ಶೂರ್ಪಣಕಿಯ ಗಂಡ ದುಷ್ಟಬುದ್ಧಿ ಅನ್ನೋನ್ನ ರಾವಣ ಸಾಯಿಸಿರ್ತಾನೆ. ಕೆಲವು ರಾಮಾಯಣಗಳಲ್ಲಿ ರಾವಣನ ಮೇಲೆ ಸೇಡು ತೀರಿಸಿಕೊಳಕ್ಕೆ ಶೂರ್ಪಣಕಿ ದೊಡ್ಡ ನಾಟಕ ಮಾಡಿ, ಯುದ್ಧ ಆಗೋಹಾಗೆ ನೋಡ್ಕೊಂಡು ರಾವಣನ ಸಾವಿಗೆ ಕಾರಣ ಆಗ್ತಾಳೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: