ಸಂತೋಷದಿಂದ ಜೀವನ ಮಾಡೋರಲ್ಲಿ ಸಾಮಾನ್ಯವಾಗಿ ಈ 21 ಗುಣಗಳ್ನ ನೋಡಬಹುದು

ಸಣ್ಣಪುಟ್ಟ ವಿಷಯಗಳಿಂದಲೂ ಮಜಾ ತೊಗೋತಾರೆ

ಒಂದ್ ಮಗೂನ ನೋಡಿದ್ರೆ ಆಹಾ ಎಷ್ಟ್ ಸಂತೋಷವಾಗಿದೆ ಅದು ಅನ್ಸತ್ತೆ. ಅದೇ ತರ "ನಗುನಗುತಾ ನಲಿ ನಲಿ ಏನೇ ಆಗಲಿ, ಎಲ್ಲಾ ಆ ದೇವನ ಕೃಪೆ ಎಂದೇ ನೀ ತಿಳಿ...'' ಅಂತ ಅಣ್ಣಾವ್ರ ಹಾಡು ಕೇಳ್ತಿದ್ರೆ ಎಂತವರಿಗೂ ಉತ್ಸಾಹ ಬಂದ್ ಬಿಡುತ್ತೆ. ಕೆಲವರು ಸಂತೋಷವನ್ನ ಎಲ್ಲೆಲ್ಲೋ ಹುಡುಕ್ತಾರೆ. ಅದು ಎಲ್ಲೂ ಸಿಗಲ್ಲ. ನಮ್ಮಲ್ಲೇ ಇರುತ್ತೆ. ಸಂತೋಷವಾಗಿ ಇರೋದು ಬಿಡೋದು ನಮ್ ಕೈಯಲ್ಲೇ ಇದೆ. ಜೀವನದಲ್ಲಿ ಸಂತೋಷವಾಗಿರೋರ ಈ 21 ಗುಣಗಳನ್ನ ನೋಡಿ...ನೀವೂ ಸಂತೋಷವಾಗಿರ್ತೀರ.

1. ಸಂತೋಷವಾಗಿರೋರು ಬೇರೆಯೋರ ಜೊತೆ ಜಾಸ್ತಿ ಬೆರೀತಾರೆ

ಇದು ತುಂಬಾ ಸಿಂಪಲ್ ಅನ್ಸತ್ತೆ ಅಲ್ವಾ. ನಾವ್ ಯಾಕ್ ಸಂತೋಷವಾಗಿಲ್ಲ ಅಂತ ಕೇಳ್ಕೊಂಡ್ರೆ...ನಮ್ಮ ಸುತ್ತಮುತ್ತ ಇರೋರೆ ಅದಕ್ಕೆ ಕಾರಣ. ಯಾವಾಗ್ಲೂ ಸಿಡಿಮಿಡಿ ಅಂತಾ ಇರೋರ್ವ ಜೊತೆಗಿದ್ರೆ ನೀವ್ ಸಂತೋಷವಾಗಿರಕ್ಕೆ ಸಾಧ್ಯವಿಲ್ಲ. ಸಂತೋಷವಾಗಿರೋರ ಜೊತೆಗೆ ಇದ್ರೆ ನಾವೂ ಸಂತೋಷವಾಗಿ ಇರ್ತೀವಿ. ಇದನ್ನ ನಾವ್ ಹೇಳ್ತಿಲ್ಲ. 20 ವರ್ಷಗಳ ಕಾಲ ವಿಜ್ಞಾನಿಗಳು ಸ್ಟಡಿ ಮಾಡಿ ಹೇಳ್ತಿರೋದು. 

2. ನಗೋದ್ರಲ್ಲಿ ಕಂಜೂಸ್ ತನ ಮಾಡಕ್ಕೋಗಲ್ಲ

ಅದೇನೋಪ್ಪ ಕೆಲವರು ನಗಕ್ಕೂ ಕಂಜೂಸ್ ಬುದ್ಧಿ ತೋರಿಸ್ತಾರೆ. ಆದರೆ ಸಂತೋಷವಾಗಿರೋರು ಧಾರಾಳವಾಗಿ ನಗ್ತಾರೆ. ನಗೋಂತ ಸಂದರ್ಭ ಸಮಯದಲ್ಲಿ ಸಂತೋಷವಾಗಿರೋರು ನಕ್ಕೇ ನಗ್ತಾರೆ. ನಗ್ಲಾ ಬೇಡ್ವಾ ಅಂತ ಯೋಚನೆ ಮಾಡಲ್ಲ.

3. ಕಷ್ಟ ಬಂದಾಗ ಹೇಗೆ ಎದುರಿಸಬೇಕು ಅಂತ ಅವರಿಗೆ ಗೊತ್ತು

ಸಂತೋಷವಾಗಿರೋರ ಒಂದು ಗುಣ ಅಂದ್ರೆ...ಅವ್ರಿಗೆ ಕಷ್ಟ ಬಂದಾಗ ಡಿಪ್ರೆಷನ್ ಗೆ ಒಳಗಾಗದೆ ಹಂತಹಂತವಾಗಿ ಚೇತರಿಸಿಕೊಳ್ತಾರೆ. ಹಿಂಗ್ ಆಗೋಯ್ತಲ್ಲಾ ಅಂತ ಅದನ್ನೇ ಯೋಚ್ನೆ ಮಾಡ್ತಾ ಕೂರಲ್ಲ. ಬಹಳ ಬೇಗ ಆ ಕೆಟ್ಟ ಘಟನೆಗಳನ್ನ ಮರೆತು ಹೊರಗ್ ಪ್ರಯತ್ನಿಸ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಏನೋ ಒಂದು ಕೆಟ್ಟದ್ದು ನಡೆದುಹೋಗುತ್ತೆ. ಅದನ್ನೇ ಯೋಚ್ನೆ ಮಾಡ್ತಾ ಕೂರೋಕ್ಕಾಗಲ್ಲ ಅನ್ನೋದು ಸಂತೋಷವಾಗಿರೋರಿಗೆ ಗೊತ್ತು. ಏಳು ಸಲ ಬಿದ್ರೂನೂ ಎಂಟನೇ ಸಲ ಎದ್ದು ಕೂರೇ ಕೂರ್ತೀನಿ ಅನ್ನೋ ಛಲ ಅವರಲ್ಲಿರುತ್ತೆ.

4. ಅವರ ಸಂತೋಷದ ಹಿಂದೆ ಪ್ರಯತ್ನ ಇರುತ್ತೆ

ನಾನು ಸಂತೋಷವಾಗಿರ್ಬೇಕು ಅಂತ ಮನಸ್ನಲ್ಲಿ ಸದಾ ಅಂದ್ಕೋತಾ ಇದ್ರೆ...ನಿಜವಾಗ್ಲೂ ಸಂತೋಷವಾಗಿಯೇ ಇರ್ತಾರೆ. ಸಂತೋಷವಾಗಿರೋರು ಹಾಗೆ ಮನಸ್ನಲ್ಲಿ ಅಂದ್ಕೋತಾನೇ ಇರ್ತಾರೆ. ಅದಕ್ಕೆ ಅವರು ಸಂತೋಷವಾಗಿರ್ತಾರೆ. ಎಷ್ಟ್ ಸಿಂಪಲ್ ಅಲಾ?

5. ಸಣ್ಣಪುಟ್ಟ ಸಾಧನೆಗಳನ್ನ ಎಂಜಾಯ್ ಮಾಡ್ತಾರೆ

ಸಂತೋಷವಾಗಿರೋರ ರಹಸ್ಯ ಗುಣಗಳಲ್ಲಿ ಇದೂ ಒಂದು. ಅದು ಸಣ್ಣದೇ ಇರ್ಲಿ ದೊಡ್ದೇ ಇರ್ಲಿ...ಏನೇ ಸಾಧನೆ ಮಾಡಿದ್ರೂ ಎಂಜಾಯ್ ಮಾಡ್ತಾರೆ. ಇದ್ರಿಂದ ದಿನಪೂರ್ತಿ ಸಂತೋಷವಾಗಿರಕ್ಕೆ ಸಾಧ್ಯವಾಗುತ್ತೆ. ಇನ್ನಷ್ಟು ಸಾಧಿಸಕ್ಕೆ ಉತ್ಸಾಹ ಬರುತ್ತೆ.  

6. ಸಣ್ಣಪುಟ್ಟ ಸಂಗತಿಗಳಿಗೂ ಸಂತೋಷಪಡ್ತಾರೆ

ಎಲ್ಲೋ ಪಾರ್ಕಲ್ಲಿ ಬೆಂಚ್ ಮೇಲೆ ಕೂತು ಐಸ್ ಕ್ರೀಮ್ ತಿನ್ನೋದು, ನಾಯಿ ಜೊತೆ ಆಟ ಆಡೋದು, ಕಾಮನಬಿಲ್ಲು ನೋಡಿ ಕುಣಿದಾಡೋದು...ಇವೆಲ್ಲ ಸಣ್ಣಪುಟ್ಟ ಸಂಗತಿಗಳಾದ್ರೂ ಸಂತೋಷವಾಗಿರೋರು ಮಾತ್ರ  ಖುಷಿಯಾಗಿ ಇವನ್ನೆಲ್ಲಾ ಎಂಜಾಯ್ ಮಾಡ್ತಾರೆ. 

7. ಸಾಧ್ಯವಾದಷ್ಟು ಬೇರೆಯವರಿಗೆ ಸಹಾಯ ಮಾಡ್ತಾರೆ

ಅದು ಎಷ್ಟೇ ಬ್ಯುಸಿಯಾಗಿದ್ರೂ ತಮ್ಮ ಟೈಮನ್ನ ಬೇರೆಯರಿಗೂ ಕೊಡ್ತಾರೆ. ಇನ್ನೊಬ್ರಿಗೆ ಹೆಲ್ಪ್ ಮಾಡೋದು, ಸಮಾಜಿಕ ಕೆಲ್ಸಗಳಲ್ಲಿ ತೊಡಗಿಕೊಳ್ಳೋದು ಮಾಡ್ತಿರ್ತಾರೆ. ಇದ್ರಿಂದ ಅವರ ಮಾನಸಿಕ ಆರೋಗ್ಯ ಚೆನ್ನಾಗಿರುತ್ತೆ. ಆಟೋಮ್ಯಾಟಿಕ್ ಆಗಿ ಸಂತೋಷವಾಗಿರ್ತಾರೆ. 

8. ಕೆಲ್ಸದಲ್ಲಿ ತುಂಬಾ ಶ್ರದ್ಧೆ ತೋರಿಸ್ತಾರೆ

ಯಾವುದಾದ್ರೂ ಒಂದ್ ಕೆಲ್ಸ ಅಂತ ಮಾಡ್ತಿದ್ರೆ ಅದರಲ್ಲಿ ಸಂಪೂರ್ಣವಾಗಿ ಮುಳುಗ್ತಾರೆ. ಸವಾಲಿನ ಕೆಲಸಗಳನ್ನ ಮಾಡಕ್ಕೆ ಇಷ್ಟಪಡ್ತಾರೆ. ಇದ್ರಿಂದ ಗುರಿ ಮುಟ್ತಾರೆ. ಹಿಡಿದ ಕೆಲ್ಸದಲ್ಲಿ ಗೆಲ್ತಾರೆ. 

9. ಕೆಲಸಕ್ಕೆ ಬಾರದ್ದು ಮಾತಾಡೋ ಬದಲು ಉಪಯೋಗ ಆಗೋ ಚರ್ಚೆಗಳಲ್ಲಿ ಪಾಲ್ಗೊಳ್ತಾರೆ

ಕೆಲಸಕ್ಕೆ ಬಾರದ್ದನ್ನೆಲ್ಲಾ ಮಾತ್ನಾಡಕ್ಕೆ ಹೋಗಲ್ಲ. ಏನಾದ್ರೂ ಉಪಯೋಗ ಆಗೋ ಅಂತಹದ್ದು, ಮುಖ್ಯವಾದ ವಿಚಾರ ಇದ್ರೆ ಮಾತ್ರ ಮಾತನಾಡ್ತಾರೆ. ಸುಮ್ ಸುಮ್ನೆ ಹರಟೆ ಹೊದೆಯೋದು, ಕಾಫಿ ಆಯ್ತಾ, ತಿಂಡಿ ಆಯ್ತಾ, ಇನ್ನೇನ್ ಸಮಾಚಾರ, ಆಮೇಲೆ ಆ ಪಕ್ಕದ ಮನೆ... ಅಂತ ಮಾತಾಡ್ತಾ ಟೈಮಂತೂ  ವೇಸ್ಟ್ ಮಾಡಲ್ಲ. 

10. ಬೇರೆಯೋರ ಮೇಲೂ ಖರ್ಚು ಮಾಡ್ತಾರೆ

ನಮಗೆ ನಾವೇ ಖರ್ಚು ಮಾಡ್ಕೊಂಡು ತಿನ್ನೋದ್ರಲ್ಲಿ ಅರ್ಥ ಇಲ್ಲ. ಬೇರೆಯವರಿಗೆ ಖರ್ಚು ಮಾಡಿದ್ರೆ ಸಿಗೋ ಖುಷಿನೇ ಬೇರೆ. ಸಂತೋಷವಾಗಿರೋರು ಮಾಡೋದು ಅದನ್ನೇ. 

11. ಇನ್ನೊಬ್ಬರು ಹೇಳಿದ್ದನ್ನ ಚೆನ್ನಾಗಿ ಕೇಳ್ಸ್ಕೋತಾರೆ

ಬೇರೆಯವ್ರು ಮಾತಡ್ತಿರಬೇಕಾದ್ರೆ ಮಧ್ಯೆ ಮಾತಾಡೋದು ಮಾಡಕ್ಕೆ ಹೋಗಲ್ಲ. ಅವರು ಏನ್ ಹೇಳ್ತಿದ್ದಾರೆ ಅನ್ನೋದನ್ನ ಮೊದಲು ಕೇಳಿಸಿಕೊಂಡು ಆಮೇಲೆ ಉತ್ತರ ಕೊಡ್ತಾರೆ. ಇದರಿಂದ ಮನಸ್ಸು, ಬುದ್ಧಿ ಚೆನ್ನಾಗಿ ಕೆಲ್ಸ ಮಾಡುತ್ತೆ. ಬೇರೆಯರಿಗೂ ಇಷ್ಟ ಆಗ್ತಾರೆ. ಅವ್ರಿಗೂ ಸಂತೋಷ, ಇರ್ವಿಗೂ ಸಂತೋಷ ಅಷ್ಟೆ.

12. ಫೋನ್ ಮಾಡೋದಕ್ಕಿಂತ ಡೈರೆಕ್ಟಾಗಿ ಭೇಟಿ ಮಾಡಕ್ಕೆ ಇಷ್ಟಪಡ್ತಾರೆ

ಆಗಾಗ ಫೋನ್ ಮಾಡಿ ಕ್ಷೇಮ ಸಮಾಚಾರ ತಿಳ್ಕೊಳ್ಳೋದೋ, ಎಸ್ಎಂಎಸ್ ಮಾಡಿ ವಿಶ್ ಮಾಡೋದು. ಇಲ್ಲಾ ಅಂದ್ರೆ ಫೇಸ್-ಬುಕ್ಕಲ್ಲಿ ಒಂದ್ ಹಾಯ್ ಹೇಳೋದು ಮಾಡೋದ್ರ ಜೊತೆಗೆ  ನೇರವಾಗಿ ಭೇಟಿಯಾಗಿ ಮಾತಾಡ್ತಾರೆ. ಮುಖತಃ ಭೇಟಿಯಾಗಿ, ಕೈಕುಲುಕಿ, ಇಷ್ಟ ಆದವರನ್ನ ತಬ್ಕೊಂಡೋ ತಮ್ಮ ಪ್ರೀತಿಯನ್ನ, ಭಾವನೆಗಳನ್ನ ವ್ಯಕ್ತಪಡಿಸ್ತಾರೆ.  ಇದ್ರಿಂದ ಸಂಬಂಧಗಳು ಇನ್ನಷ್ಟು ಹತ್ತಿರವಾಗ್ತಾ ಹೋಗುತ್ತೆ. ಅವರ ಬಗ್ಗೆ ಒಳ್ಳೆ ಅಭಿಪ್ರಾಯ ಮೂಡುತ್ತೆ. ಸಂಬಂಧಗಳು ಚೆನ್ನಾಗಿದ್ರೆ ಎಲ್ರೂ ಸಂತೋಷವಾಗೇ ಇರ್ತಾರ್ರೆ ತಾನೆ?

13. ಪ್ರತಿಯೊಂದರಲ್ಲೂ ಒಳ್ಳೇದನ್ನೇ ನೋಡ್ತಾರೆ

ಅದು ಸರಿ ಇಲ್ಲ ಇದು ಸರಿ ಇಲ್ಲ ಅಂತ ತಲೆಕೆಡಿಸಿಕೊಳ್ಳಲ್ಲ. ಪ್ರತಿಯೊಂದರಲ್ಲೂ ಒಳ್ಳೇದನ್ನೇ ನೋಡ್ತಾರೆ. ಇದ್ರಿಂದ ಆರೋಗ್ಯನೂ ಚೆನ್ನಾಗಿರುತ್ತೆ. ಸುಮ್ ಸುಮ್ನೆ ಟೆನ್ಷನ್ ತಗೊಳ್ಳೋದ್ರಿಂದ ಪ್ರಯೋಜನ ಇಲ್ಲ ಅಂತ ಅವ್ರಿಗೆ ಗೊತ್ತು. ಪ್ರತಿಯೊಂದ್ರರಲ್ಲೂ ಒಳ್ಳೇದನ್ನೇ ಹುಡುಕೋದ್ರಿಂದ ಅವ್ರು ಸಂತೋಷವಾಗಿರಕ್ಕೆ ಸಾಧ್ಯವಾಗತ್ತೆ. 

14. ಒಳ್ಳೇ ಸಂಗೀತ ಕೇಳ್ತಾರೆ

ಸಂತೋಷವಾಗಿರೋರ ಇನ್ನೊಂದು ಸೀಕ್ರೆಟ್ ಗುಣ ಇದು. ಒಳ್ಳೆ ಸಂಗೀತ ಕೇಳೋದ್ರಿಂದ ಮನಸ್ಸು ಹಗುರ ಆಗುತ್ತೆ. ದೇಹ ಮತ್ತು ಮನಸ್ಸಿನ ನೋವುಗಳನ್ನ ಮರೀಬೋದು. ಸಂಗೀತದಲ್ಲೇ ಮೈಮರೀತಾ ಸಂತೋಷವಾರ್ಗಿತಾರೆ.

15. ಗ್ಯಾಜೆಟ್ಗಳಿಂದ ದೂರ ಇರೋದು ಹೇಗೆ ಅಂತ ಅವರಿಗೆ ಗೊತ್ತು

ಈ ಹೊತ್ತು ನಾನಾ ತರದ ಗ್ಯಾಜೆಟ್ ಗಳು ಬಂದಿದ್ದಾವೆ. ಅವೆಲ್ಲಾ ನಮ್ಮ ನೆಮ್ಮದಿ ಹಾಳು ಮಾಡೋ ಅಂತಾವೆ. ಅವುಗಳ ಜೊತೆ ಎಷ್ಟೊತ್ತು ಕಳೀಬೋದು ಅಂತ ಸಂತೋಷವಾಗಿರೋರಿಗೆ ಗೊತ್ತು. ಕಂಪ್ಯೂಟರು, ಸ್ಮಾರ್ಟ್ ಫೋನು, ಟ್ಯಾಬ್ಲೆಟ್ ಅದಕ್ಕೆಲ್ಲಾ ಎಷ್ಟ್ ಟೈಮ್ ಕೊಡ್ಬೇಕು ಅನ್ನೋದು ಅವರಿಗೆ ಗೊತ್ತು. ಆದಷ್ಟು ಅವುಗಳಿಂದ ದೂರ ಉಳಿಯಕ್ಕೆ ಪ್ರಯತ್ನ ಪಡ್ತಾರೆ. 

16. ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಇಟ್ಕೊಂಡಿರ್ತಾರೆ

ಅದು ಯಾವುದೇ ಧರ್ಮ ಇರ್ಲಿ ಆಧ್ಯಾತ್ಮಿಕ ವಿಚಾರಗಳು ನಮ್ಮ ಮನಸ್ಸಿಗೆ ನೆಮ್ಮದಿ ಕೊಡ್ತಾವೆ. ಧ್ಯಾನ, ಭಕ್ತಿಯಂತಹ ಗುಣಗಳು ನಮ್ಮ ಮನಸ್ಸಿನ ಆರೋಗ್ಯಕ್ಕೆ ಬೇಕು. ಇದ್ರಿಂದ ದಿನನಿತ್ಯದ ಜಂಜಾಟಗಳಿಂದ ಸ್ವಲ್ಪ ಮುಕ್ತಿ ಸಿಗುತ್ತೆ.  ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಇದ್ರೆ ಇದು ಸಾಧ್ಯವಾಗುತ್ತೆ. ಇದು ಸಂತೋಷವಾಗಿರೋರ ಇನ್ನೊಂದು ಗುಣ. 

17. ರೆಗ್ಯುಲರ್ ಆಗಿ ವ್ಯಾಯಾಮ ಮಾಡ್ತಾರೆ

ವ್ಯಾಯಾಮ ಮಾಡ್ದಾಗ ನಮ್ ದೇಹದಲ್ಲಿ ಎಂಜಾರ್ಪಿನ್ ಅನ್ನೋ ಕೆಮಿಕಲ್ ರಿಲೀಸ್ ಆಗುತ್ತೆ. ಇದು ನಾವು ಸಂತೋಷವಾಗಿರುವಂತೆ ಮಾಡುತ್ತೆ. ಕೋಪ ತಾಪಗಳು, ಮನಸ್ಸಿನ ಒತ್ತಡ, ಉದ್ವೇಗಗಳನ್ನ ವ್ಯಾಯಾಮ ಕಡಿಮೆ ಮಾಡುತ್ತೆ. ದೈಹಿಕವಾಗಿ ಆರೋಗ್ಯವಾಗಿದ್ರೆ ಮಾನಸಿಕ ಆರೋಗ್ಯಾನೂ ಚೆನ್ನಾಗಿರುತ್ತೆ. 

18. ಹಂಗೇ ಒಂದ್ ರೌಂಡ್ ವಾಕಿಂಗ್ ಹೋಗ್ ಬರ್ತಾರೆ

ನಮ್ಮ ಮನಸ್ಸಿಗೆ ವಾಕಿಂಗ್ ಒಳ್ಳೆ ಎಜರ್ಜಿ ಕೊಡುತ್ತೆ. ಪ್ರತಿದಿನ 20 ನಿಮಿಷ ವಾಕ್ ಮಾಡೋದ್ರಿಂದ ತಾಜಾ ಗಾಳಿ ಸಿಕ್ಕಿ ಮನಸ್ಸು ಹಗುರಾಗುತ್ತೆ. ಜಡತ್ವ, ಸೋಮಾರಿತನ ಬರಲ್ಲ. ಲವಲವಿಕೆಯಿಂದ ಇರಕ್ಕೆ ಸಾಧ್ಯವಾಗುತ್ತೆ. 

19. ನೋಡಿದರೆ ಸೋಮಾರಿ ಅನ್ನುವಷ್ಟು ನಿದ್ದೆ ಮಾಡ್ತಾರೆ

ಬೆಳಗ್ಗೆ ಯಾವ್ ಮಗ್ಗುಲಲ್ಲಿ ಎದ್ವಿ ಅನ್ನೋದು ಮುಖ್ಯ ಅಲ್ಲ. ಎಷ್ಟು ಚೆನ್ನಾಗಿ ನಿದ್ದೆ ಮಾಡಿದ್ವಿ ಅನ್ನೋದು ಆ ದಿನಾನ ನಿರ್ಧರ ಮಾಡುತ್ತೆ. ಯಾಕಂದ್ರೆ ಚೆನ್ನಾಗಿ ನಿದ್ದೆ ಮಾಡ್ಲಿಲ್ಲ ಅಂದ್ರೆ ಆ ದಿನ ಎಲ್ಲಾ ಒಂಥರಾ ಕಳೆದುಹೋಗುತ್ತೆ. ಸಂತೋಷವಾಗಿರೋರು ಕಣ್ತುಂಬ ನಿದ್ದೆ ಮಾಡ್ತಾರೆ. ಹಾಸಿಗೆ ಮೇಲೆ ಸೋಮಾರಿ ತರ ಮಲಕ್ಕೋತಾರೆ. 

20. ನಡಿವಾಗ ದೂರ ದೂರಕ್ಕೆ ಹೆಜ್ಜೆ ಹಾಕ್ತಾ ಬಿರಬಿರನೆ ನಡೀತಾರೆ

ಸಂತೋಷವಾಗಿರೋರು ನಡೆಯೋದನ್ನ ನೋಡಿದ್ರೇನೆ ಸಂತೋಷವಾಗುತ್ತೆ. ದೂರ ದೂರಕ್ಕೆ ಹೆಜ್ಜೆ ಹಾಕ್ತಾ, ಕೈಬೀಸ್ಕೊಂಡ್ ನಡೀತಾರೆ. ಇದ್ರಿಂದ ಮಿದುಳು ಚುರುಕಾಗಿ, ದೇಹ ಹಗುರಾಗಿ ಮನಸ್ಸು ಸಂತೋಷವಾಗಿರತ್ತಂತೆ.    

21. ಯಾವಾಗ್ಲೂ ನಗ್ ನಗ್ತಾ ಇರ್ತಾರೆ

ನಗು ಅನ್ನೋದು ಅದ್ಭುತ ಔಷಧ ಅಂತಾರೆ. ನಗೋದ್ರಿಂದ ಮಿದುಳಲ್ಲಿ ರಿಲೀಸ್ ಆಗೋ ಹಾರ್ಮೋನ್‍ಗಳು ಒತ್ತಡ ಮತ್ತು ನೋವನ್ನ ಕಡಿಮೆ ಮಾಡ್ತಾವೆ. ಆರೋಗ್ಯವಾಗಿರ್ಬೇಕು ಅಂದ್ರೆ ನಗುನಗುತ್ತಾ ಇರ್ಬೇಕು. ವ್ಯಾಯಾಮ ಮಾಡ್ದಷ್ಟೇ ಲಾಭ ನಗೋದ್ರಿಂದಲೂ ಆಗುತ್ತಂತೆ.   

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: