ಒಂದೇ ಒಂದು ಶರ್ಟ್ ಇಟ್ಕೊಂಡು ದುಬೈಗೆ ಹೋಗಿ ಬಿಲಿಯನೇರ್ ಆದ ಕನ್ನಡಿಗನ ಕಥೆ

ಸಾಲ ತೀರಿಸಕ್ಕೆ ಹೋಗಿದ್ದಂತೆ

ನಮ್ಮ ಮಂಗಳೂರು ಮೂಲದ ಶೆಟ್ರ ಕಥೆಯಿದು. ಕೇಳ್ತಾ ಇದ್ರೆ ಕನ್ನಡಿಗರಾದ ನಮಗೆ ಹೆಮ್ಮೆ ಅನ್ಸತ್ತೆ. ಉಡುಪಿ ಜಿಲ್ಲೆಯ ಕಾಪು ಅನ್ನೋ ಊರಲ್ಲಿ ಹುಟ್ಟಿದ ಇವರ ಪೂರ್ತಿ ಹೆಸರು ಬಾವಗುತ್ತು ರಘುರಾಮ್ ಶೆಟ್ಟಿ ಅಂತ. ಆದರಿವ್ರು ಬಿ.ಆರ್. ಶೆಟ್ಟಿ ಅಂತ್ಲೇ ಫೇಮಸ್ಸು. ದುಬೈಯಲ್ಲಿರೋ ಜಗತ್ತಿನ ಅತಿ ಎತ್ತರದ ಬಿಲ್ಡಿಂಗ್ ಬುರ್ಜ್ ಖಲೀಫಾದ 100ನೇ ಫ್ಲೋರ್ ಮಾಲೀಕರು. ಅದೇ ಬಿಲ್ಡಿಂಗ್ನ 141ನೇ ಫ್ಲೋರಲ್ಲಿ ಆಫೀಸು ಓಪನ್ ಮಾಡಿದ್ದಾರೆ ಶೆಟ್ರು. ಇಷ್ಟೆಲ್ಲಾ ಹೇಗೆ ಸಾಧಿಸಿದ್ರು, ಸಂಪಾದಿಸಿದ್ರು ಅಂತ ಕೇಳಿದ್ರೆ ಅಚ್ಚರಿಯಾಗತ್ತೆ.

1. 50 ಸಾವಿರ ರೂಪಾಯಿ ಸಾಲ ತೀರ್ಸಕ್ಕೆ ಅಂತ ಅವ್ರು ದುಬೈಗೆ ಹೋಗಿದ್ದು

ಆ ಹೊತ್ತು ಅವ್ರ ಹತ್ರ ಇದ್ದಿದ್ದು ಒಂದೇ ಒಂದು ಷರ್ಟು. ಅದ್ರ ಜೊತೆಗೆ 50 ಸಾವಿರ ರೂಪಾಯಿ ಸಾಲ ಇತ್ತು. ಅದನ್ನ ತೀರ್ಸಕ್ಕೆ ಅಂತ ದುಬೈಗೆ ಹೋದ್ರು. 50 ಸಾವಿರ ಸಂಪಾದನೆ ಮಾಡ್ಕೊಂಡು ಬಂದು ಸಾಲ ತೀರ್ಸೋಣ ಅಂತ 1973ರಲ್ಲಿ ದುಬೈ ಹೋಗ್ತಾರೆ.

2. ಈ ಹೊತ್ತು ಕೋಟಿಗಟ್ಟಲೆ ಸಂಪಾದ್ನೆ ಮಾಡಿದ್ದು, ಅದನ್ನ ಸಮಾಜಕ್ಕೆ ಬಳಸ್ತಾರಂತೆ

ಈಗ ಅವ್ರಿಗೆ 74 ವರ್ಷ ವಯಸ್ಸಾಗಿದೆ. ಯುಎಇಯಲ್ಲಿರೋ ಕನ್ನಡಿಗರಿಗೆಲ್ಲಾ ಶೆಟ್ರು ಅಂತ್ಲೇ ಪರಿಚಯ. ಈ ಹೊತ್ತು ಕೋಟಿಗಟ್ಲೆ ದುಡ್ದು ಮಾಡಿರೋ ಅವರು ಸಮಾಜಕ್ಕೆ, ಅದ್ರಲ್ಲೂ ತಾಯ್ನಾಡಿಗೆ ಅದನ್ನ ಹಿಂತಿರುಗಿಸ್ಬೇಕು ಅಂತ ಮನಸ್ಸು ಮಾಡಿದ್ದಾರಂತೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಅನ್ನೋ ಫಿಲಾಸಫಿ ಅವರ್ದು.

3. ಜೋಗ ಜಲಪಾತ ಅಭಿವೃದ್ಧಿ ಮಾಡಕ್ಕೆ ಕೈಹಾಕಿದ್ದಾರೆ ಶೆಟ್ರು

"ಭಗವಂತ ನನಗೆ ಎಲ್ಲಾನೂ ಕೊಟ್ಟಿದ್ದಾನೆ. ಅವ್ನ ಕೃಪೆಯಿಂದ ಇಷ್ಟೆಲ್ಲಾ ದುಡ್ಡು ಸಂಪಾದನೆ ಮಾಡ್ದೆ. ಈಗ ನಮ್ಮ ನಾಡಿಗೆ ಏನಾದ್ರೂ ಮಾಡ್ಬೇಕು ಅಂತ ಇದೆ. ಅದಕ್ಕಾಗಿ ಜೋಗ ಜಲಪಾತಾನ ಅಭಿವೃದ್ಧಿ ಮಾಡಕ್ಕೆ ಹೊರಟಿದ್ದೀನಿ ಅಂತಾರೆ ಶೆಟ್ರು. 
 

4. ಒಂದು ಕಾಲ್ದಲ್ಲಿ ಸಮಾಜ ಸೇವೆ ಮಾಡಕ್ಕೋಗಿ ಎಲ್ಲಾನೂ ಕಳ್ಕೊಂಡಿದ್ರಂತೆ

"ಒಂದು ಕಾಲದಲ್ಲಿ ಸಮಾಜ ಸೇವೆ ಮಾಡಕ್ಕೋಗಿ ಎಲ್ಲಾನೂ ಕಳ್ಕೊಂಡೆ. ಈ ಹೊತ್ತು ದೇವ್ರು ಅದ್ರ ಹತ್ತು ಪಟ್ಟು ವಾಪಸ್ ಕೊಟ್ಟಿದ್ದಾನೆ. ಅದನ್ನ ಮತ್ತೆ ಸಮಾಜ ಸೇವೆಗೆ ಖರ್ಚು ಮಾಡ್ತೀನಿ" ಅಂತಾರೆ ಈ ಇಳಿವಯಸ್ಸಲ್ಲೂ ಗಟ್ಟಿಮುಟ್ಟಾಗಿರೋ ಶೆಟ್ರು.
 

5. "ನನ್ನತ್ರ ಇದ್ದಿದ್ದು ಒಂದೇ ಷರ್ಟು, ರಾತ್ರಿ ಒಗೆಯೋದು ಬೆಳಗ್ಗೆ ಅದನ್ನೇ ಹಾಕ್ಕೋಳ್ಳೋದು ಮಾಡ್ತಿದ್ದೆ"

"ಮೆಡಿಕಲ್ ರೆಫ್ರಸೆಂಟೇಟಿವ್ ಕೆಲಸಕ್ಕೆ ಅಂತ ಯುಎಇಗೆ ಹೋದಾಗ ನನ್ನತ್ರ ಇದ್ದಿದ್ದು ಒಂದೇ ಒಂದು ಷರ್ಟು. ಅದ್ರ ಜೊತೆಗೆ ಪಾರ್ಟ್ ಟೈಮ್ ಕೆಲಸಾನೂ ಮಾಡ್ತಿದ್ದೆ. ನನಗೆ ಇನ್ನೂ ನೆನಪಿದೆ. ನನ್ನತ್ರ ಇದ್ದದ್ದು ಒಂದೇ ಒಂದು ಷರ್ಟು. ರಾತ್ರಿ ಒಗೆಯೋದು, ಬೆಳಗ್ಗೆ ಅದನ್ನೇ ಹಾಕ್ಕೊಳ್ಳೋದು ಮಾಡ್ತಿದ್ದೆ. ಆಮೇಲೆ ಪಾರ್ಟ್ಟೈಮ್ ಕೆಲಸದಲ್ಲಿ ಬಂದ ಕಮೀಷನ್ ದುಡ್ಡಲ್ಲಿ 10 ದಿನಾರ್ ಕೊಟ್ಟು ಹೊಸ ಶರ್ಟ್ ತಗೊಂಡಿದ್ದೆ." ಅಂತ ಹಳೆ ದಿನಗಳನ್ನ ನೆನಸ್ಕೊಳ್ತಾರೆ ಅವರು. 
 

6. "ದುಬೈ ವಿಪರೀತ ಬಿಸ್ಲಲ್ಲೂ ಆಸ್ಪತ್ರೆಯಿಂದ ಆಸ್ಪತ್ರೆಗೆ ಮೆಡಿಸಿನ್ ಮಾರಕ್ಕೆ ಹೋಗ್ತಿದ್ದೆ"

"ನಾನು ಫಾರ್ಮಸಿ ಓದ್ದ ಕಾರಣ, ಅಲ್ಲಿನ ಡಾ. ಇಸ್ಮಾಯಿಲ್ ಫಾಹಿಮಾ ಫಾರ್ಮಾಸಿಯಲ್ಲಿ ಫಾರ್ಮಾಸಿಟ್ ಆಗಿ ಕೆಲ್ಸಕ್ಕೆ ಸೇರ್ಕೊಂಡೆ. ಮೊದ್ಲೇ ಅಲ್ಲಿ ವಿಪರೀಪ ಬಿಸ್ಲು. ಅಂತದ್ದರಲ್ಲಿ ನಾನು ಆಸ್ಪತ್ರೆಯಿಂದ ಆಸ್ಪತ್ರೆಗೆ ಮೆಡಿಸಿನ್ಸ್ ಸೇಲ್ ಮಾಡಕ್ಕೆ ಹೋಗ್ತಿದ್ದೆ. ನನ್ನ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಕೊಟ್ಟ ಫಾಹಿಮಾ ಅವ್ರಿಗೆ ನಾನು ಯಾವತ್ತೂ ಋಣಿ" ಅಂತಾರೆ ಶೆಟ್ರು.
 

7. ಯುಎಇಲಿ ಶೆಟ್ರು ಆಸ್ಪತ್ರೆ ಓಪನ್ ಮಾಡ್ತಾಗ ಜನ ನಗಾಡ್ತಿದ್ರಂತೆ

ಯುಎಇಲಿ ಶೆಟ್ರು ಚಿಕ್ಕದಾಗಿ ಒಂದು ಆಸ್ಪತ್ರೆ ಶುರು ಮಾಡ್ತಾರೆ. ಇವರನ್ನ ನೋಡಿ ಸುಮಾರು ಜನ ನಗಾಡ್ತಾರೆ. ಯುಎಇ ಸರ್ಕಾರ ಮೆಡಿಕಲ್ ಫೆಸಿಲಿಟೀಸು ಫ್ರೀಯಾಗಿ ಕೊಡ್ತಿದ್ರೆ ಇವ್ರೇನ್ರಿ ಆಸ್ಪತ್ರೆ ಓಪನ್ ಮಾಡಿದ್ದಾರೆ ಅಂತ ನಗಾಡ್ತಿದ್ರಂತೆ. ನಗೋವ್ರು ನಗ್ತಾನೇ ಇದ್ರು, ಆದ್ರೆ ಶೆಟ್ರು ಮಾತ್ರ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮ ಪ್ರಯತ್ನ ಮಾಡ್ತಾನೇ ಇದ್ರು. ಈಹೊತ್ತು ಅವರ ಆಸ್ಪತ್ರೆಗಳಲ್ಲಿ ವರ್ಷಕ್ಕೆ 25 ಲಕ್ಷ ರೋಗಿಗಳು ಚಿಕಿತ್ಸೆ ಪಡೀತಿದ್ದಾರಂತೆ. ಒಟ್ಟು 15 ಮೆಡಿಕಲ್ ಸೆಂಟರ್ಗಳು ಇದ್ದಾವಂತೆ. 
 

8. ಶೆಟ್ರು ತೀರಾ ಬಡತನದಲ್ಲೇನು ಹುಟ್ಲಿಲ್ಲ, ಅವರ್ದು ಜಮೀನ್ದಾರಿ ಕುಟುಂಬ

"ನಾನು ಹುಟ್ಟಿದ್ದು ಶ್ರೀಮಂತ ಮನೆತನದಲ್ಲೇ. ನಮ್ದು ಜಮೀನ್ದಾರರ ಕುಟುಂಬ. ಆದ್ರೂ ಎಲ್ಲಾ ಕಳ್ಕೊಂಡ್ವಿ. ನನಗೆ ಉಳಿದಿದ್ದ ಕೊನೆ ಆಯ್ಕೆ ಅಂದ್ರೆ ಯುಎಇಗೆ ಹೋಗೋದು. ಮೇ 3, 1973ರಲ್ಲಿ ಹೊರಟೆ. ನಮ್ಮ ತಂದೆ ಶಂಭು ಶೆಟ್ಟಿ ಮೇಲಿನ ನಂಬಿಕೆಯಿಂದ ನನಗೆ ಸಾಲ ಕೊಟ್ಟಿದ್ರು. ಆ ಸಾಲಾನ ಹೇಗಾದ್ರು ಮಾಡಿ ತೀರಿಸ್ಲೇಬೇಕಿತ್ತು" ಅಂತ ಆ ದಿನಗಳನ್ನ ನೆನಪಿಸ್ಕೊಳ್ತಾರೆ ಶೆಟ್ರು. ಈಹೊತ್ತು ಬುರ್ಜ್ ಖಲೀಫಾದಲ್ಲಿರೋ ಅವ್ರ ಎರಡು ಫ್ಲೋರ್ ಬೆಲೆ 250 ಲಕ್ಷ ಡಾಲರ್. 
 

9. ಶೆಟ್ರ ಗೋಬ್ಲಲ್ ಮನಿ ಟ್ರಾನ್ಸಫರ್ ಕಂಪನಿ ಹೆಸ್ರು-ಯುಎಇ ಎಕ್ಸ್‌ಚೇಂಜ್

"ಅಪ್ಪಅಮ್ಮ, ಬಂಧುಬಳಗ, ಹೆಂಡ್ತಿ ಮಕ್ಕಳನ್ನ ಬಿಟ್ಟು ಎಲ್ಲೋ ದೂರದ ದೇಶಗಳಲ್ಲಿ ಇರೋರಿಗೆ ಅನುಕೂಲ ಆಗ್ಲಿ ಅಂತ ಯುಎಇ ಎಕ್ಸ್‌ಚೇಂಜ್ ಶುರು ಮಾಡ್ದೆ. ಇದೊಂದು ಗ್ಲೋಬಲ್ ಮನಿ ಟ್ರಾನ್ಸರ್ ಕಂಪನಿ. 32 ದೇಶಗಳಲ್ಲಿ ಕೆಲಸ ಮಾಡ್ತಿರೋ ಇದ್ರಲ್ಲಿ 750 ಜನ ಡೈರೆಕ್ಟ್ ಆಫೀಸರ್ಸ್ ಇದ್ದಾರೆ. 40 ದೇಶಗಳ 10,000 ಜನಕ್ಕೆ ಕೆಲಸ ಕೊಟ್ಟಿದೆ” ಅಂತ ತಮ್ಮ ಕಂಪನಿ ಬಗ್ಗೆ ಹೆಮ್ಮೆಯಿಂದ ಹೇಳ್ಕೋತಾರೆ ಶೆಟ್ಟಿ.
 

10. "ಸಮಾಜ ನಮ್ಗೆ ಇಷ್ಟೆಲ್ಲಾ ಕೊಟ್ಟಿದೆ, ತಿರುಗಿ ಅದನ್ನ ಸಮಾಜಕ್ಕೆ ಕೊಡೋದು ನಮ್ ಕರ್ತವ್ಯ"

ಅಬುದಾಬಿ ಸರ್ಕಾರ ಇವ್ರಿಗೆ ’ಆರ್ಡರ್ ಆಫ್ ಅಬುದಬಿ’ ಅನ್ನೋ ಆ ದೇಶದ ಅತಿದೊಡ್ಡ ನಾಗರೀಕ ಪ್ರಶಸ್ತಿ ಕೊಟ್ಟಿದೆ. ನಮ್ಮ ಸರ್ಕಾರ 2009ರಲ್ಲಿ ಪದ್ಮಶ್ರೀ ಅವಾರ್ಡ್ ಕೊಟ್ಟಿದೆ. "ಸಮಾಜ ನಮ್ಮನ್ನ ಈ ಮಟ್ಟಕ್ಕೆ ಬೆಳ್ಸಿದೆ, ಎಲ್ಲವನ್ನ ಕೊಟ್ಟಿದೆ. ಅದನ್ನ ತಿರುಗಿ ಸಮಾಜಕ್ಕೆ ಕೊಡೋದು ನಮ್ಮ ಕರ್ತವ್ಯ. ನಿಮ್ಮ ಸಕ್ಸಸನ್ನ ಶೇರ್ ಮಾಡ್ಕೊಂದ್ರೆ ಅದು ಡಬಲ್ ಆಗುತ್ತೆ. ನಾನು ನಂಬಿರೋ ಸಿದ್ದಾಂತ ಇದೇ. ಅದು ನನ್ನ ಎಂದಿಗೂ ಕೈಬಿಟ್ಟಿಲ್ಲ" ಅಂತಾರೆ ಬಿ.ಆರ್.ಶೆಟ್ಟಿ. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬೆಳ್-ಬೆಳಗ್ಗೆ 20 ನಿಮಿಷ ಹೀಗ್ ಕಳೆದರೆ ಇಡೀ ದಿನ ಲವಲವಿಕೆ ಮತ್ತು ಸಂತೋಷಗಳು ನಿಮ್ನ ಬಿಟ್ಟು ಹೋಗಲ್ಲ

ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತೋರು ಬಿಚ್ಚಿಟ್ಟ ಗುಟ್ಟು

ಇಂಥದ್ದು ನಡೆದೇ ಇರುತ್ತೆ - ಬೆಳ್ ಬೆಳಿಗ್ಗೆನೇ ಯಾವ್ದೂ ನೀವಂದ್ಕೊಂಡ ಹಾಗೆ ನಡೀತಿರೊಲ್ಲ. ನೀವಿಟ್ಟ ಸಮಯಕ್ಕೆ ಅಲಾರ್ಮು ಹೊಡ್ದಿರೊಲ್ಲ, ಅಥವಾ ನೀವೇ ತಪ್ಪಾಗಿ ಅಲಾರ್ಮ್ ಸೆಟ್ ಮಾಡಿರ್ತೀರ. ಅಯ್ಯಯ್ಯೋ ಲೇಟ್ ಆಯ್ತು ಅಂದ್ಕೊಂಡು ಬೇಗ ಸ್ನಾನ ಮಾಡಿ ತಿಂಡಿ ರೆಡಿ ಮಾಡೋಕೆ ಹೋದ್ರೆ ಅದು ಸೀದು ಹೋಗುತ್ತೆ. ಇಸ್ತ್ರಿ ಹಾಕೋಕೆ ಹೋದಾಗ ಕರೆಂಟು ಕೈ ಕೊಡುತ್ತೆ. ಸರಿ, ಆ ದಿನ ಪೂರ್ತಿ ಎಲ್ಲವೂ ಹಾಳು. ನೀವು ಮುರ್ಫಿ ಅನ್ನೋನು ಹೇಳಿರೋದು ಕೇಳಿರ್ಬಹುದು - ಏನಾದ್ರು ಹಾಳಾಗೋ ಚಾನ್ಸ್ ಇದ್ರೆ, ಅದು ಹಾಳಾಗಿಯೇ ಆಗುತ್ತೆ. ಒಟ್ನಲ್ಲಿ ಬೆಳ್ ಬೆಳಿಗ್ಗೆ ಕೆಟ್ಟದಾಗಿ ಶುರುವಾದ್ರೆ ಅವತ್ತು ಪೂರ್ತಿ ಮುರ್ಫಿ ಹೇಳಿದ್ದು ನಿಜ ಆಗ್ತಾ ಹೋಗುತ್ತೆ. ಇದಕ್ಕೆ ಪರಿಹಾರ ಇದೆ - ದಿನವೂ ಬೆಳಿಗ್ಗೆ ಬರೀ ಇಪ್ಪತ್ತು ನಿಮಿಷ ಈ ರೀತಿ ಕಳ್ದ್ರೆ ಇಡೀ ದಿನ ಸಕತ್ತಾಗಿರುತ್ತೆ. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತು ಸಂತೋಷ, ನೆಮ್ಮದಿಗಳ ಬಗ್ಗೆ ರಿಸರ್ಚ್ ಮಾಡ್ತಿರೋ ಶಾನ್ ಏಚರ್ ಅನ್ನೋನು ಹೇಳಿರೋ ಪ್ರಕಾರ ಬೆಳಿಗ್ಗೆ ನೀವು ಪಾಸಿಟಿವ್ ಆಗಿದ್ರೆ ಆ ದಿವ್ಸ ಖಷಿಯಾಗಿರ್ತೀರಿ. ಪಾಸಿಟಿವಿಟಿ ಹೆಚ್ಚಾದ್ರೆ ನಿಮ್ ಮಿದುಳು ಖುಷ್ ಖುಷಿಯಾಗಿರುತ್ತೆ. ಖುಷಿಯಾಗಿದ್ದಾಗ ಮಿದುಳು ಚೆನ್ನಾಗಿ ಕೆಲಸ ಮಾಡುತ್ತೆ, ಎಷ್ಟು ಕಷ್ಟ ಇದ್ರೂ ಟೆನ್ಷನ್ ತೆಗೊಳೊಲ್ಲ. ಆ 20 ನಿಮಿಷ ಏನು ಮಾಡ್ಬೇಕು ಅಂತ ಹೇಳ್ತಾರೆ ಅನ್ನೋದನ್ನ ಓದ್ಕೊಳ್ಳಿ.

1) 2 ನಿಮಿಷ ಹಿಂದಿನ್ ದಿವ್ಸ ಏನೇನು ಒಳ್ಳೇದಾಯ್ತು ಅನ್ನೋದನ್ನ ನೆನೆಸ್ಕೋಬೇಕು

ನಾವು ಮಿದುಳಿಗೆ ಮೋಸ ಮಾಡ್ಬಹುದು. ಖುಷಿಯಾಗಿದ್ದೀನಿ ಅಂತ ನಿಮ್ಗೆ ನೀವೇ ಹೇಳ್ಕೊಂಡ್ರೆ ಅದು ನಿಜಕ್ಕೂ ಖುಷಿಯಾಗಿ ಬಿಡುತ್ತೆ. ಹಿಂದಿನ್ ದಿನ ಖುಷಿ ಕೊಡೋ ಅಂಥದ್ದು ಏನಾಯ್ತು ಅಂತ ನೆನಪು ಮಾಡ್ಕೊಂಡು ಬರ್ದಿಟ್ಕೊಳ್ಳಿ. ಹಿಂದಿನ್ ದಿನದ ಖುಷೀನ ಎರಡು ನಿಮಿಷ ಮತ್ತೆ ಅನುಭವ್ಸಿ. ಇದರಿಂದ ನಿಮ್ ಮಿದುಳು ಪಾಸಿಟಿವ್ ಆಗುತ್ತೆ. ಮೊದ್ಲೇ ಹೇಳಿದ್ ಹಾಗೆ, ಮಿದುಳು ಪಾಸಿಟಿವ್ ಆಗಿದ್ರೆ ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

2) 2 ನಿಮಿಷ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋಬೇಕು

ನಾವು ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋದು ಕಡಿಮೆ. ಬೆಳ್ ಬೆಳಿಗ್ಗೆ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳಿ. ನೆನೆಸ್ಕೊಳ್ಳೋದಷ್ಟೆ ಅಲ್ಲ, ಅವ್ರು ನಿಮ್ ಮುಂದೆ ಇದ್ರೆ ಅವ್ರಿಗೆ ಹೇಳಿ. ಅಥ್ವಾ ಈಮೇಲೋ ಮೆಸೇಜೋ ಮಾಡಿ. ಇದರಿಂದ ಎರಡು ರೀತಿ ಪ್ರಯೋಜನ ಇದೆ - ಈ ರೀತಿ ಒಳ್ಳೆ ಕೆಲ್ಸ ಮಾಡಿದ್ದೀನಿ ಅಂತ ನೀವು ಖುಷಿಯಾಗ್ತೀರಿ, ಅಲ್ಲದೆ ಬೇರೆಯವ್ರ ಜೊತೆ ನಿಮ್ ಸಂಬಂಧ ಗಟ್ಟಿಯಾಗುತ್ತೆ. ಇದರಿಂದ ಮಿದುಳು ಖುಷಿಯಾಗುತ್ತೆ, ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

3) 2 ನಿಮಿಷ ನಿಮ್ಗಿರೋ ಭಾಗ್ಯ ನೆನೆಸ್ಕೋಬೇಕು

ಡಿ.ವಿ.ಗುಂಡಪ್ಪ 'ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು, ಹರುಷಕ್ಕಿದೆ ದಾರಿ' ಅಂತ ಹೇಳಿದ್ದಾರೆ. ಹೀಗೆ ನಿಮ್ ಬದುಕಲ್ಲಿ ನಿಮ್ಗೆ ದಕ್ಕಿರೋ ಭಾಗ್ಯಗಳ್ನ ನೆನೆಸ್ಕೋಬೇಕಂತೆ ಬೆಳಿಗ್ ಬೆಳಿಗ್ಗೆ. ಇದರಿಂದ ಮಿದುಳು ಪಾಸಿಟಿವ್ ಆಗುತ್ತೆ. ಬದುಕಲ್ಲಿ ಏನೇನಿದೆ ಅಂತ ನೋಡೋದ್ರಿಂದ, ಏನೇನಿಲ್ಲ ಅಂತ ಕೊರಗೋದು ತಪ್ಪುತ್ತೆ. ಲೋಟ ಅರ್ಧ ಖಾಲಿಯಾಗಿದೆ ಅಂತ ಕೊರಗೋ ಬದ್ಲು ಅರ್ಧ ಲೋಟ ನೀರಿದ್ಯಲ್ಲ ಅಂತ ಖುಷಿ ಪಡ್ಬೇಕು. ಇಂಥ ಆಶಾವಾದದಿಂದ ಇಡೀ ದಿನ ಚೆನ್ನಾಗಿ ಕಳಿಯುತ್ತೆ. ನೀವು ಅಂದ್ಕೊಂಡ ಕೆಲಸ ಎಲ್ಲ ಮಾಡಿ ಮುಗಿಸ್ಬಹುದು.

ಮೂಲ

4) 12 ನಿಮಿಷ ವ್ಯಾಯಾಮ ಮಾಡ್ಬೇಕು

ಮನುಷ್ಯನ್ ದೇಹದಲ್ಲಿ 'ಎಂಡಾರ್ಫಿನ್' ಅನ್ನೋ ಹಾರ್ಮೋನು ಇದ್ದಷ್ಟು ಅವ್ನು ಖುಷಿಯಾಗಿರ್ತಾನಂತೆ. ನಾವು ಜಾಗಿಂಗ್, ಯೋಗಾಸನ, ವ್ಯಾಯಾಮ್ ಮಾಡೋವಾಗ್ಲೂ ಈ ಎಂಡಾರ್ಫಿನ್ ದೇಹದಲ್ಲಿ ಹೆಚ್ಚಾಗುತ್ತೆ. ಇದರಿಂದ ಟೆನ್ಷನ್ ಕಡಿಮೆ ಆಗಿ, ಮಿದುಳು ಅದರ ಪೂರ್ತಿ ತಾಕತ್ತು ತೋರ್ಸುತ್ತೆ. ಅಲ್ಲದೆ ನೀವು ನಿಮ್ ಬಗ್ಗೆ ಯೋಚ್ನೆ ಮಾಡೋದನ್ನ ಕಲೀತೀರಿ. ದಿವ್ಸ ವ್ಯಾಯಾಮ ಮಾಡೋದ್ರಿಂದ, ಹಿಡಿದ ಕೆಲ್ಸಾನ ಕಷ್ಟ ಬಿದ್ದು ಪೂರ್ತಿ ಮಾಡ್ಬೇಕು ಅನ್ನೋದೂ ಮಿದುಳಿಗೆ ಅರ್ಥ ಆಗುತ್ತೆ. ಇದೆಲ್ಲ ಪಾಸಿಟಿವಿಟಿ ಹೆಚ್ಸುತ್ತೆ.

ಮೂಲ

5) 2 ನಿಮಿಷ ಧ್ಯಾನ ಮಾಡ್ಬೇಕು

ಎರಡೇ ಎರಡು ನಿಮಿಷ ಧ್ಯಾನ ಮಾಡೋದ್ರಿಂದ ತುಂಬ ಪ್ರಯೋಜನ ಇದೆ. ಒಂದು ಕಡೆ ಶಾಂತವಾಗಿ ಕೂತು, ನಿಮ್ ಉಸಿರಾಟದ್ ಮೇಲೆ ನಿಮ್ ಗಮನ ಇಡಿ. ಬೇರೆ ಯಾವುದ್ರ ಬಗ್ಗೆನೂ ಯೋಚ್ನೆ ಮಾಡ್ಬೇಡಿ. ಇದ್ರಿಂದ ಕೈಯಲ್ಲಿರೋ ವಿಷಯದ್ ಬಗ್ಗೆ ಮಾತ್ರ ಯೋಚ್ನೆ ಮಾಡೋ ಶಕ್ತಿ ಹೆಚ್ಚಾಗುತ್ತೆ. ದಿವ್ಸ ಇದನ್ನ ಅಭ್ಯಾಸ ಮಾಡ್ಕೊಂಡ್ರೆ ನಿಧಾನಕ್ಕೆ ಪಾಸಿಟಿವಿಟಿ ಹೆಚ್ಚಾಗುತ್ತೆ.

ಮೂಲ

ಬೆಳಿಗ್ಗೆ ಸ್ವಲ್ಪ ಜಾಸ್ತಿ ಟೈಮ್ ಇದ್ದ ದಿವ್ಸ ಬೇಕಿದ್ರೆ ಇದನ್ನೆಲ್ಲ ಜಾಸ್ತಿ ಹೊತ್ತು ಮಾಡ್ಬಹುದು. ಈ ಅಭ್ಯಾಸಗಳನ್ನ ರೂಢಿ ಮಾಡ್ಕ್ಕೊಂಡ್ರೆ ನೀವು ಹೆಚ್ಚು ಪಾಸಿಟಿವ್ ಆಲೋಚನೆಗಳನ್ನ ಮಾಡ್ತೀರಿ. ನಿಮ್ಮ ದಿನವೂ ಚೆನ್ನಾಗಿರುತ್ತೆ. ಅಂದ್ಕೊಂಡ ಕೆಲ್ಸ ಎಲ್ಲ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತೀರಿ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: