17-08-16: ಅಮ್ನೆಸ್ಟಿ ಮೇಲೆ ಕೇಸು; ಭಾರತಕ್ಕೆ ಗೂಗಲ್ ಮೊಬೈಲ್, ಇನ್ನಷ್ಟು ಸುದ್ದಿಗಳು

ಇಷ್ಟು ಓದಿದರೆ ಬೇಕಾದಷ್ಟು

ಪೆಟ್ರೋಲು ಮತ್ತೆ ಡೀಸೆಲ್ ರೇಟು ಸ್ವಲ್ಪ ಕಡಿಮೆಯಾಗಿದೆ. ಶಾಸಕರಿಗೆ ಸಂಬಳ ಸಾಲ್ತಿಲ್ಲವಂತೆ, ಜಾಸ್ತಿ ಮಾಡಿ ಅಂತಿದ್ದಾರೆ. ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ಮೇಲೆ ದೇಶದ್ರೋಹ ಕೇಸು ಬುಕ್ಕಾಗಿದೆ..ಇನ್ನಷ್ಟು ಸುದ್ದಿಗಳಿದ್ದಾವೆ ಓದಕ್ಕೆ. 

1. ಪೆಟ್ರೋಲು ಬೆಲೆ 1, ಡೀಸೆಲ್ 2 ರೂಪಾಯಿ ಕಡಿಮೆಯಾಗಿದೆ

ನ್ಯೂಡೆಲ್ಲಿ, ಆ.16 : ಪೆಟ್ರೋಲು ಮತ್ತೆ ಡೀಸೆಲ್ ರೇಟು ಒಂಚೂರು ಕಮ್ಮಿಯಾಗಿದೆ. ಪೆಟ್ರೋಲು ಲೀಟರಿಗೆ 1 ರೂಪಾಯಿ ಕಡಿಮೆಯಾಗಿದ್ರೆ ಡೀಸೆಲ್ 2 ರೂಪಾಯಿ ಕಡಿಮೆಯಾಗಿ. ಜುಲೈನಿಂದ ಬೆಲೆ ಕಡಿಮೆಯಾಗ್ತಿರೋದು ಇದು ನಾಲ್ಕನೇ ಸಲ ಅಂತಿದೆ ಎಕಾನಾಮಿಕ್ಸ್ ಟೈಮ್ಸ್

2. ಶಾಸಕರಿಗೆ ಸಂಬಳ ಸಾಲ್ತಿಲ್ಲವಂತೆ, ಜಾಸ್ತಿ ಮಾಡಿ ಅಂತಿದ್ದಾರೆ

ಬೆಂಗಳೂರು, ಆ. 16: ನಮ್ ಶಾಸಕರಿಗೆ ಈಗ ಕೊಡ್ತಿರೋ ಸಂಬಳ ಸಾಲ್ತಿಲ್ಲವಂತೆ. ಹೋದ ವರ್ಷ 40% ಸಂಬಳ ಜಾಸ್ತಿ ಮಾಡಿದ್ರು. ಇನ್ನೂ ವರ್ಷ ಆಗಿಲ್ಲ ಈಗ ಮತ್ತೆ ಜಾಸ್ತಿ ಮಾಡಿ ಅಂತ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡರನ್ನ ಕೇಳಿದ್ದಾರೆ. ಬೇರೆ ರಾಜ್ಯಗಳ ಶಾಸಕರಿಗೆ ಹೋಲಿಸಿದ್ರೆ ನಮಗೆ ಸಿಗ್ತಿರೋದು ತುಂಬಾ ಕಮ್ಮಿ ಅನ್ನೋ ವಾದ ಅವರದು ಅಂತಿದೆ ದಿ ನ್ಯೂಸ್ ಮಿನಿಟ್ ರಿಪೋರ್ಟ್. 

3. ಅಮ್ನೆಸ್ಟಿ ಇಂಟರ್-ನ್ಯಾಷನಲ್ ಇಂಡಿಯಾ ಸಂಸ್ಥೆ ಮೇಲೆ ದೇಶದ್ರೋಹ ಕೇಸು ಬುಕ್ಕಾಗಿದೆ

ಬೆಂಗಳೂರು, ಆ.16 : ಭಾರತೀಯ ಸೇನೆ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ ಅಂತೇಳಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ಮೇಲೆ ಎಫ್ಐಆರ್ ಬುಕ್ಕಾಗಿದೆ. ಆಗಸ್ಟ್ 13ನೇ ತಾರೀಖಿನ ರಾತ್ರಿ ಕಾಶ್ಮೀರದಲ್ಲಿ ಏನ್ ನಡೀತಿದೆ ಅನ್ನೋದರ ಬಗ್ಗೆ ಕಾರ್ಯಕ್ರಮ ಇಟ್ಟುಕೊಂಡಿದ್ರು. ಆಗ ಕೆಲವರು ಸೈನ್ಯದ ವಿರುದ್ಧ ಘೋಷಣೆಗಳನ್ನ ಕೂಗಿದರಂತೆ ಅಂತ ಪ್ರಜಾವಾಣಿ ಸುದ್ದಿ ಹೇಳುತ್ತೆ. 

4. ನಮ್ ರಾಜ್ಯಕ್ಕೆ ಕನ್ನಡಿಗ ರಾಜ್ಯಪಾಲ ಆಗೋದು ಬೇಡ: ಜಯಲಲಿತಾ

ಬೆಂಗಳೂರು, ಆ.16: ತಮಿಳುನಾಡಿಗೆ ಕನ್ನಡಿಗರನ್ನ ರಾಜ್ಯಪಾಲರನ್ನಾಗಿ ಮಾಡ್ತಾರೆ ಅಂತಿದ್ರು. ಅಯ್ಯೋ ಹಾಗೆ ಮಾಡ್ಬೇಡಿ ಅಂತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಂದಿದ್ದಾರೆ. ತಮಿಳುನಾಡಿಗೆ ವಿಧಾನ ಪರಿಷತ್ನ ಸಭಾಪತಿ ಡಿ.ಎಚ್. ಶಂಕರಮೂರ್ತಿ ರಾಜ್ಯಪಾಲರಾಗೋ ಚಾನ್ಸಸ್ ಇದೆ. ಇದ್ರ ಬಗ್ಗೆ ಈಸಂಜೆ ಸುದ್ದಿ ಬರೆದಿದೆ.

5. ಅನ್ನಭಾಗ್ಯದ ಅಕ್ಕಿ ಇನ್ನೂ ಒಂದ್ ಕೆ.ಜಿ. ಜಾಸ್ತಿ ಕೊಡ್ತಾರಂತೆ

ಬೆಂಗಳೂರು, ಆ.16 : ಬಿಪಿಎಲ್‌ ಕಾರ್ಡ್‌ ಇರೋರಿಗೆ ಅನ್ನಭಾಗ್ಯ ಯೋಜನೆಯಲ್ಲಿ ಕೊಡ್ತಿರೋ ಅಕ್ಕಿ ಜೊತೆಗೆ ಇನ್ನೂ ಒಂದ್ ಕೆ.ಜಿ ಜಾಸ್ತಿ ಕೊಡ್ತೀವಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳವ್ರೆ. ಇದರ ಜೊತಿಗೆ ಡಿಸ್ಕೌಂಟಲ್ಲಿ ತೊಗರಿ ಬೇಳೆನೂ ಕೊಡ್ತೀವಿ ಅಂದಿದ್ದಾರೆ ಅಂತ ಉದಯವಾಣಿ ರಿಪೋರ್ಟ್ ಹೇಳುತ್ತೆ.

6. ಫ್ರಾನ್ಸಲ್ಲಿ ಮಂಗಳೂರು ಗಂಡಹೆಂಡ್ತಿ ಹಾರಾಡಕ್ಕೆ ರೆಡಿ

ಮಂಗಳೂರು, ಆ.16 : ಫ್ರಾನ್ಸಲ್ಲಿ ಜಗತ್ತಿನ ಅತಿದೊಡ್ಡ ಗಾಳಿಪಟ ಉತ್ಸವ ಸೆ. 9ರಿಂದ 19ರ ವರೆಗೆ ನಡೀಲಿದೆ. ಭಾರತೀಯ ಜೋಡಿ ಇರೋ ಗಾಳಿಪಟವನ್ನ ನಮ್ ಮಂಗಳೂರಿನ ಟೀಂ ಹಾರಿ ಬಿಡ್ತಿದೆ. ಭಾರತೀಯ ಗಂಡಹೆಂಡ್ತಿ ಅನ್ನೋ ಥೀಮ್ ಜೊತೆಗೆ ನಮ್ ಸಂಸ್ಕೃತಿಯನ್ನ ಈ ಗಾಳಿಪಟ ತೋರಿಸಲಿದೆ ಅಂತ ಉದಯವಾಣಿ ಬರೆದಿದೆ. (ಫೈಲ್ ಫೋಟೋ)

7. ಚೈನೀಸ್ ಮಾಂಜಾ ಅನ್ನೋ ದಾರವನ್ನ ಡೆಲ್ಲಿ ಸರ್ಕಾರ ಬ್ಯಾನ್ ಮಾಡಿದೆ

ನ್ಯೂಡೆಲ್ಲಿ, ಆ.16: ಗಾಳಿಪಟ ಹಾರ್ಸೋಕೆ ಬಳಸೋ ಚೈನೀಸ್ ಮಾಂಜಾ ಅನ್ನೋ ದಾರ ಹಲವರ ಜನರ ಸಾವುನೋವಿಗೆ ಕಾರಣವಾಗ್ತಿದೆ. ಸ್ವಾತಂತ್ರ್ಯ ದಿನಾಚರಣೆ ದಿನ ಇದನ್ನ ಬಳಸಿ ಬೇರೆಬೇರೆ ಕಡೆ ಮೂರು ಮಕ್ಕಳು ಸತ್ತಿದ್ದಾರೆ. ಕಿಲ್ಲರ್ ಥ್ರೆಡ್ ಅನ್ನಿಸಿಕೊಂಡಿರೋ ಇದನ್ನ ಡೆಲ್ಲಿ ಸರ್ಕಾರ ಬ್ಯಾನ್ ಮಾಡಿದೆ ಅಂತ ಬ್ಯುಸಿನೆಸ್ ಸ್ಟ್ಯಾಂಡರ್ಡ್ ಬರೆದಿದೆ.

8. ಹೊಸ ಮೊಬೈಲ್ ಕನೆಕ್ಷನ್ಗೆ ಆಧಾರ್ ಲಿಂಕ್; ಚಿಟಿಕೆ ಹೊಡೆಯೋಷ್ಟರಲ್ಲಿ ಕೆಲಸ ಆಗುತ್ತೆ

ನ್ಯೂಡೆಲ್ಲಿ, ಆ.16: ಆಧಾರ್ ಕಾರ್ಡ್ ಇದ್ರೆ ಸಾಕು ಇನ್ ಮೇಲೆ ಹೊಸ ಸಿಮ್ ಕಾರ್ಡ್ ತಗೊಳ್ಳೋದು ತುಂಬಾ ಈಸಿ. ಆಕ್ಟಿವೇಷನ್ ಕೂಡ ಬೇಗ ಆಗುತ್ತೆ. ಹೊಸ ಕನೆಕ್ಷನ್ ಪಡೆಯೋಕೆ ಆಧಾರ್ ಲಿಂಕ್ ಮಾಡಕ್ಕೆ ಸರ್ಕಾರ ಪರ್ಮಿಷನ್ ಕೊಟ್ಟಿದೆ. ಫೋಟೋ, ಅಡ್ರಸ್ ಫ್ರೂಪು ಅದೂಇದೂ ಅಂತ ಆಪರೇಟರ್ಗಳು ಕೇಳೋಹಂಗಿಲ್ಲ ಅಂತ ಬ್ಯುಸಿನೆಸ್ ಸ್ಟ್ಯಾಂಡರ್ಡ್ ಬರೆದಿದೆ.

9. ರಾಮನಗರದಲ್ಲಿ ರಾಜ್ಯಮಟ್ಟದ ಗಾಳಿಪಟ ಉತ್ಸವ ನಡೀತಿದೆ

ರಾಮನಗರ, ಆ.16 : ಇಲ್ಲಿನ ಜಿಲ್ಲಾ ಸ್ಟೇಡಿಯಂನಲ್ಲಿ ಗಾಳಿಪಟ ಹಾರಿಸೋ ಉತ್ಸವ ನಡೀತಿದೆ. ನಮ್ ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಬಂದೋರು ಗಾಳಿಪಟಗಳನ್ನ ಹಾರಿಸ್ತಿದ್ದಾರೆ. ಈ 28ನೇ ಗಾಳಿಪಟ ಉತ್ಸವಾನ ಕರ್ನಾಟಕ ಜಾನಪದ ಅಕಾಡೆಮಿ ಮತ್ತೆ ಬೇರೆಬೇರೆ ಇಲಾಖೆಗಳು ನಡೆಸ್ತಿವೆ ಅಂತ ಪ್ರಜಾವಾಣಿಲಿ ಬರೆದಿದ್ದಾರೆ. 

10. ಭಾರತಕ್ಕೆ ಗೂಗಲ್ ಬ್ರ್ಯಾಂಡ್ ಮೊಬೈಲ್ ಫೋನ್ಗಳು ಬರ್ತಿವೆ

ನ್ಯೂಡೆಲ್ಲಿ, ಆ.16: ಗೂಗಲ್ ಬ್ರ್ಯಾಂಡ್ ಮೊಬೈಲ್ ಫೋನ್ಗಳು ಇನ್ನೊಂದ್ ತಿಂಗ್ಳಲ್ಲಿ ನಮ್ ದೇಶದಲ್ಲಿ ಸಿಗ್ಲಿವೆ. 5 ಮತ್ತೆ 5.5 ಇಂಚು ಇರೋ ಈ ಸ್ಮಾರ್ಟ್ ಫೋನ್ಗಳಲ್ಲಿ ಆಂಡ್ರಾಯ್ಡ್ ಎನ್ ಆಪರೇಟಿಂಗ್ ಸಿಸ್ಟಂ ಇರುತ್ತೆ. 32 ಮತ್ತೆ 128 ಜಿಬಿ ಸಾಮರ್ಥ್ಯ ಇಂಟರ್ನಲ್ ಮೆಮರಿ ಇರೋ ಎರಡು ಬೇರೆಬೇರೆ ಫೋನ್ಗಳು ರಿಲೀಸ್ ಆಗ್ತಿವೆ ಅಂತ ಎನ್ಡಿಟಿವಿ ಗ್ಯಾಜೆಟ್ಸ್ ಬರೆದಿದೆ. 
 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: