ಈ 10 ವಿಷಯ ಓದಿದ ಮೇಲೆ ನಿಮಗೆ ತುಪ್ಪದ ಬಗ್ಗೆ ಇರೋ ಡೌಟೆಲ್ಲ ಹೋಗುತ್ತೆ

ಒಬ್ಬೊಬ್ಬರು ಒಂದೊಂದ್ ಹೇಳುವಾಗ ಗೊಂದಲ ಹೋಗಿಸ್ತೀವಿ ಬನ್ನಿ

ತುಪ್ಪ ಅಂದ್ರೆ ಕೆಲವರಿಗೆ ಆಗಲ್ಲ. ಇನ್ ಕೆಲವರಿಗೆ ತುಪ್ಪ ಇಲ್ದೆ ಒಂದೇ ಒಂದ್ ತುತ್ತು ಅನ್ನ ಸೇರಲ್ಲ. ಒಪ್ಪವಿಲ್ಲದ ಮಾತು ತುಪ್ಪವಿಲ್ಲದ ಊಟ ಅನ್ನೋ ಮಾತಿದೆ. ಆ ಮಾತೇ ಸಾಕು ತುಪ್ಪಕ್ಕಿರೋ ಬೆಲೆ ಏನು ಅಂತ ಹೇಳಕ್ಕೆ. ತುಪ್ಪ ತಿಂದ್ರೆ ದಪ್ಪಗಾಗ್ತಾರೆ, ಆರೋಗ್ಯಕ್ಕೆ ಒಳ್ಳೇದಲ್ಲ, ತುಂಬಾ ಫ್ಯಾಟದು, ಹಾಗೆ ಹೀಗೆ ಅಂತ ಹೇಳೋರು ಜಾಸ್ತಿ ಜನ ಇದ್ದಾರೆ. ತುಪ್ಪ ತಿನ್ನೋದ್ರಿಂದ ನಮ್ ದೇಹಕ್ಕೆ ಸಾಕಷ್ಟು ಲಾಭ ಇದೆ.

1. ಮಿದುಳಿಗೆ, ನರನಾಡಿಗಳಿಗೆ ಒಳ್ಳೇದು ತುಪ್ಪ

ಇದರಲ್ಲಿ ಇರೋ ಒಮೆಗಾ-3 ಮತ್ತೆ ಒಮೆಗಾ-6 ಅನ್ನೋ ಕೊಬ್ಬಿನ ಆಸಿಡ್ಸ್ ದೇಹದ ಆರೋಗ್ಯವನ್ನ ಕಾಪಾಡುತ್ತವೆ. ಒಮೆಗಾ-3 ಒಳ್ಳೆ ಕೊಲೆಸ್ಟ್ರಾಲ್ ಆಗಿದ್ದು ನಮ್ ದೇಹದ ಅಂಗಾಂಗ ಸರಿಯಾದ ರೀತೀಲಿ ಕೆಲಸ ಮಾಡೋಹಂಗೆ ಮಾಡುತ್ವೆ.

2. ಇದನ್ನ ತಿನ್ನೋದ್ರಿಂದ ಬುದ್ಧಿಮಾಂದ್ಯ, ಆಲ್ಜಿಮರ್ಸ್ ತರದ ಕಾಯಿಲೆಗಳು ಬರಲ್ಲ

ಮೇಲೆ ಹೇಳಿದ ಎರಡು ಆಸಿಡ್ಗಳು ಬುದ್ಧಿಮಾಂದ್ಯ, ಆಲ್ಜಿಮರ್ಸ್ (ಮರೆವಿನ ಕಾಯಿಲೆ) ತರದ ಕಾಯಿಲೆಗಳು ಅಷ್ಟು ಬೇಗ ಬರೋದಕ್ಕೆ ಬಿಡಲ್ಲ. ಪ್ರತಿ ದಿನ ಒಂದು ಪ್ರಮಾಣದಲ್ಲಿ ತುಪ್ಪ ತಿನ್ನೋದ್ರಿಂದ ಮಿದುಳಿನಲ್ಲಿರೋ ನಾಡಿ ವ್ಯವಸ್ಥೆ ಇನ್ನಷ್ಟು ಚುರುಕಾಗಿ ಕೆಲಸ ಮಾಡತ್ತೆ ಅಂತ ಸಂಶೋಧಕರು ಹೇಳ್ತಿದ್ದಾರೆ.

3. ತುಪ್ಪದಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಜಾಸ್ತಿ ಇದೆ

ಅಡುಗೆಯಲ್ಲಿ ತುಪ್ಪ ಬಳಸೋದ್ರಿಂದ ಬೇರೆ ಎಣ್ಣೆಗಳಂತೆ ಸೀದುಹೋಗೋ ಗುಣ ಇದಕ್ಕಿಲ್ಲ.

4. ತುಪ್ಪ ತಿನ್ನೋದ್ರಿಂದ ಕ್ಯಾನ್ಸರ್ ಬರಲ್ಲವಂತೆ

ತುಪ್ಪದಲ್ಲಿ ನಮ್ ದೇಹದ ಜೀವಕೋಶಗಳನ್ನ ರಕ್ಷಿಸೋ ಗುಣಾನೂ ಇದೆ.

5. ತುಪ್ಪದೊಂದಿಗೆ ತಿಂದ ಊಟ ಸುಲಭವಾಗಿ ಅರಗತ್ತೆ

ಬೇಗ ಜೀರ್ಣ ಆಗೋಕ್ಕೆ ಬೇಕಾಗಿರೋ ರಸಾಯನಿಕಗಳನ್ನ ನಮ್ ಹೊಟ್ಟೆಲಿ ಬಿಡುಗಡೆ ಮಾಡುತ್ತೆ ತುಪ್ಪ. ನಮ್ ಹೊಟ್ಟೇಲಿ ಜೀರ್ಣ ಆಗೋ ಕೆಲಸ ಸರಿಯಾಗಿ ನಡೆದ್ರೆ ಅರ್ಧ ಆರೋಗ್ಯ ಸಮಸ್ಯೆಗಳು ಕಡಿಮೆಯಾದಂಗೆ ಅಲ್ಲವೆ?

6. ತುಪ್ಪ ತಿನ್ನೋದ್ರಿಂದ ಕೀಲುನೋವು, ಮೈಕೈ ನೋವು ಕಡಿಮೆಯಾಗುತ್ತೆ

ವಯಸ್ಸಾದಂತೆ ಮೊಳಕಾಲಿನ ಕೀಲುಗಳು ಸವೀತಾವೆ. ಮೂಳೆಗಳ ಶಕ್ತಿ ಕಡಿಮೆಯಾಗುತ್ತೆ. ಈ ತರದ ಸಮಸ್ಯೆಗಳು ಬರದಂತೆ ಮಾಡುತ್ತೆ ತುಪ್ಪ.

7. ತುಪ್ಪ ಆರೋಗ್ಯಕ್ಕೆ ಒಳ್ಳೇದು ಅಂತ ಎಲ್ಲರೂ ತಿನ್ನೋಹಂಗಿಲ್ಲ

ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ತುಂಬಾ ದಪ್ಪಗಿರೋರು ತುಪ್ಪವನ್ನ ಬಳಸ್ದೇ ಇರೋದೆ ಒಳ್ಳೇದು.

8. ತುಪ್ಪ ಬಹಳ ಬೇಗ ಕೆಡೋದಿಲ್ಲ

ತುಪ್ಪಾನ ಫ್ರಿಡ್ಜಲ್ಲಿ ಇಡಬೇಕಾಗಿಲ್ಲ. ಅದು ಬೇಗ ಕೆಡೋದು ಇಲ್ಲ. 100 ವರ್ಷಗಳ ತನಕ ತುಪ್ಪ ಕೆಡದೆ ಇರೋ ಉದಾಹರಣೆಗಳು ಇವೆ ಅಂತಾರೆ.

9. ಕೊಬ್ಬರಿ ಎಣ್ಣೆ ತರಹ ತುಪ್ಪದಲ್ಲೂ ತುಂಬಾ ಪೋಷಕಗಳಿವೆ

ಇದ್ರಲ್ಲಿರೋ ಫ್ಯಾಟಿ ಆಸಿಡನ್ನ ಲಿವರ್ ನೇರವಾಗಿ ಹೀರಿಕೊಂಡು ಶಕ್ತಿ ಬರೋಹಂಗೆ ಮಾಡುತ್ತೆ. ಮೈಯಲ್ಲಿ ಒಂದೇ ತೆರನಾದ ಶಕ್ತಿ ಇರೋಹಂಗೆ ತುಪ್ಪ ಮಾಡೋದ್ರಿಂದ ಅಥ್ಲೀಟ್ಗಳು ಇದನ್ನ ಬಳಸ್ಬೋದು.

10. ಆಯುರ್ವೇದದಲ್ಲಿ ಇದನ್ನ ಸಾತ್ವಿಕ ಆಹಾರ ಅಂದಿದ್ದಾರೆ

ತುಂಬಾ ಸಾತ್ವಿಕ ಆಹಾರವಾದ ಕಾರಣ ಇದನ್ನ ತಿನ್ನೋದ್ರಿಂದ ನಮ್ಮಲ್ಲಿ ಪಾಸಿಟೀವ್ ಬೆಳವಣಿಗೆಗೆ ಕಾರಣವಾಗತ್ತೆ ಅನ್ನುತ್ತೆ ಆಯುರ್ವೇದ.

ತುಪ್ಪವನ್ನ ಡಬ್ಬದಲ್ಲಿ ಬಿಗಿಯಾಗಿ ಮುಚ್ಚಿಡೋದ್ರೀಂದ ಬೇಗ ಹಾಳಾಗಲ್ಲ. 2-3 ತಿಂಗಳವರೆಗೂ ಕೆಡದಂಗೆ ಇರುತ್ತೆ. ಡಬ್ಬದಲ್ಲಿ ಮುಚ್ಚಿಟ್ಟು ಫ್ರಿಡ್ಜಲ್ಲಿ ಇಟ್ರೆ ಒಂದು ವರ್ಷದ ತನಕ ಹಾಳಾಗಲ್ಲ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಫೇಸ್ಬುಕ್ ಚರ್ಚೆ:

ಜನರ ನಡವಳಿಕೆ ಬಗ್ಗೆ ಈ 13 ಸತ್ಯಗಳು ಗೊತ್ತಾದಾಗ ನಿಮಗೆ ಪ್ರಪಂಚ ಇನ್ನಷ್ಟು ಚೆನ್ನಾಗಿ ಅರ್ಥ ಆಗುತ್ತೆ

ದುಡ್ಡಿರೋರ್ನ ಜನ ಬುದ್ಧಿವಂತ್ರು ಅನ್ಕೋತಾರೆ

ಮನುಷ್ಯನ ದೇಹ ಒಂದು ಅದ್ಭುತವಾದ ಸೃಷ್ಟಿ. ಒಂದು ಕಡೆಗೆ ಬೇರೆ ಬೇರೆ ಕೆಲಸಗಳ್ನ ಮಾಡ್ಕೊಂಡ್ ಹೋಗೋ ಅಂಗಾಂಗಗಳಾದರೆ ಇನ್ನೊಂದು ಕಡೆ ಇಡೀ ಬ್ರಹ್ಮಾಂಡವನ್ನೇ ಅರ್ಥ ಮಾಡಿಕೊಳ್ಳುವಂಥ ಮನಸ್ಸು! ದೇಹ ಮತ್ತು ಮನಸ್ಸು ಎರಡೂ ಒಗ್ಗೂಡೇನೇ‌ ಮನುಷ್ಯ ತನ್ನದೇ ಆದ ರೀತಿಯಲ್ಲಿ ನಡ್ಕೊಳೋಡು. ಒಬ್ಬೊಬ್ಬ ಮನುಷ್ಯಾನೂ ಬೇರೆಬೇರೇನೇ, ಆದರೆ ಎಲ್ಲರಿಗೂ ಅನ್ವಯಿಸುವಂಥ ಕೆಲವು ಆಶ್ಚರ್ಯಕರವಾದ ಸತ್ಯಗಳಿವೆ. ಕೆಳಗೆ ಅಂಥವು ಕೆಲವು ಕೊಟ್ಟಿದೀವಿ, ಓದ್ತಾ ಹೋಗಿ…

1. ಆತ್ಮಗೌರವ ಕಡಿಮೆ ಇರೋರು ಬೇರೆಯೋರ್ನ ಕಡೆಗಣಿಸಿ ಮಾತಾಡೋದು, ಕೀಳಾಗಿ ಬಿಂಬಿಸೋದು, ಎಲ್ಲಾ ಜಾಸ್ತಿ.

ಯಾಕಂದ್ರೆ ಅವರಿಗೆ ತಮ್ಮೊಳಗೆ ತಾವೇ 'ಮೇಲೆ' ಕಾಣಿಸಲ್ಲ. ಬೇರೆಯೋರ್ನ ಕೆಳಗೆ ಮಾಡಿಕೊಂಡಾಗಲೇ ಕಾಣಿಸೋದು.

2. ಯಾರಾದರೂ ನೋಡ್ತಾ ಇದಾರೆ ಅಂದಾಗ ಜನರ ನಡತೆ ಇನ್ನಷ್ಟು ಚೆನ್ನಾಗಿರುತ್ತೆ.

ಯಾರೂ ಇಲ್ಲದಿರುವಾಗ ನಡ್ಕೊಳೋ ರೀತೀನೇ ಬೇರೆ. ನನಗೆ ಬೇಕಾದ್ದು ಮಾಡ್ತೀನಿ ಅನ್ನೋ‌ ಮನೋಭಾವ ಇರುತ್ತೆ. ಇದು ಕೆಟ್ಟದೆನಲ್ಲ, ಆದರೆ ಒಳಗೊಂದು ಹೊರಗೊಂದು ಅನ್ನೋದು ಮಿತಿಮೀರಿ ಬೆಳೆದರೆ ತೊಂದರೆ, ಅಷ್ಟೆ.

3. ನೋಡಕ್ಕೆ ಚೆನ್ನಾಗಿರೋರ್ನ ಮತ್ತೆ ತುಂಬಾ ಸಾಧು ಮನುಷ್ಯನ ತರಹ ಕಾಣಿಸೋರ್ನ ಜನ ಬೇಗ ನಂಬಿ ಬಿಡ್ತಾರೆ.

'ಗೋಮುಖವ್ಯಾಘ್ರ' ಅಂತ ಹೇಳ್ತಾರಲ್ಲ, ಹಂಗೆ ಇದು. ಸೌಂದರ್ಯ ಮತ್ತೆ ವಿನಯ ಹೊರಗೆ ಕಂಡರೆ ಸಾಕು, ಜನ ಹತ್ತಿರ ಬರ್ತಾರೆ. ಕೆಲವರು ಇದನ್ನ ಇನ್ನೊಂದು ರೀತಿಲಿ ಬಳಸಿಕೊಳ್ತಾರೆ, ಅಷ್ಟೇ.

4. ಜನ ತುಂಬ ಕ್ಲಿಷ್ಟವಾದ ತೀರ್ಮಾನಗಳ್ನ ತೊಗೊಳಕ್ಕೆ ಹೋಗಲ್ಲ; ಅದರ ಬದಲು ಇರೋದು ಇದ್ದಂಗೇ ಇರಲಿ ಅಂತ ಸುಮ್ಮನೆ ಇದ್ದುಬಿಡ್ತಾರೆ.

ಏನ್ ತೀರ್ಮಾನ ತೊಗೋತಿದೀನಿ ಅನ್ನೋದು ತುಂಬ ಸುಲಭವಾಗಿ ಅರ್ಥ ಆಗಬೇಕು. ಇಲ್ಲಾಂದ್ರೆ ತಲೆ ಕೆಡುಸ್ಕೊಳಲ್ಲ ಜನ. ಇದು ರಾಜಕಾರಣಿಗಳಿಗೆ ತುಂಬ ಚೆನ್ನಾಗಿ ಗೊತ್ತಿರೋ ವಿಷಯ!

5. ಯಾರಾದರೂ ತುಂಬ ಕೋಪ ಮಾಡ್ಕೋತಿದ್ರೆ ಅವರ ತರಹ ನಾವೂ ಆಗಬೇಕು, ಅವರ ಸ್ಥಾನಕ್ಕೆ ನಾವೂ ಏರಬೇಕು ಅನ್ಕೋತಾರೆ ಜನ

ಅದೇನೋ ಕೋಪಕ್ಕೆ ಈ ಸ್ಥಾನಮಾನ ಇದೆಯಪ್ಪ. ತುಂಬಾ ಬುದ್ಧಿವಂತರು ಮತ್ತೆ ತುಂಬಾ ಒಳ್ಳೇ ಮನಸ್ಸಿರೋರೆ ಕೋಪ ಮಾಡ್ಕೊಳೋದು ಅಂತ ಜನ ಅನ್ಕೋತಾರೆ. ಮೇಲ್ಮೇಲಕ್ಕೆ ಇದನ್ನ ತೋರಿಸಿಕೊಳ್ಳದೆ ಇರಬಹುದು, ಆದರೆ ಒಳಗೊಳಗೇ ನಾನು ಅವರ ಸ್ಥಾನಕ್ಕೆ ಎರಬೇಕು ಅನ್ಕೋತಾರೆ.

6. ಏನಾದರೂ ಸಿಕ್ಕಾಗ ಆಗೋ ಸಂತೋಷದ ತೂಕ ಒಂದಾದರೆ ಅದನ್ನ ಕಳ್ಕೊಂಡಾಗ ಆಗೋ ದುಃಖದ ತೂಕ ಎರಡು.

ಮೊಬೈಲ್ ಕೊಂಡುಕೊಂಡಾಗ ಆಗುವ ಸುಖ ಹೆಚ್ಚೋ ಅದು ಕಳೆದು ಹೋದಾಗ ಆಗುವ ದುಃಖ ಹೆಚ್ಚೋ?!

7. ಬೊಜ್ಜು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತೆ. ನಿಮ್ಮ ಸುತ್ತ ಮುತ್ತ ಬೊಜ್ಜು ಜಾಸ್ತಿ ಇರೋರೇ ಇದ್ದರೆ ನಿಮಗೂ ಬರೋ ಸಾಧ್ಯತೆ ಇದೆ.

ಇದಕ್ಕೆ ಕಾರಣ ಅಷ್ಟು ಬೊಜ್ಜಿರೋದೇ ನಾರ್ಮಲ್ ಅನ್ಕೊಳೋದು. ಅಲ್ಲದೆ ಅವರು ತಿಂದಿದ್ದೆಲ್ಲ ತಿನ್ನೋದು!

8. ಯಶಸ್ಸು ಮತ್ತೆ ದುಡ್ಡು ಯಾರಿಗಿದೆಯೋ ಅವರನ್ನ ಜನ ಬುದ್ಧಿವಂತರು ಅಂತಾನೂ ಅನ್ಕೋತಾರೆ.

ಇದೊಂದು ದೊಡ್ಡ ವಿಪರ್ಯಾಸ. ನಿಜಕ್ಕೂ ನೋಡಿದರೆ ಸಾಮಾನ್ಯವಾಗಿ ದುಡ್ಡು ಯಶಸ್ಸು ಎಲ್ಲಾ ಇರೋ ಕಡೆ ಬುದ್ಧಿವಂತಿಕೆ ಕಡಿಮೇನೇ ಇರುತ್ತೆ. ದುಡ್ಡು ಮತ್ತೆ ಯಶಸ್ಸಿಗೆ ಬೇಕಾದ ಬುದ್ಧಿವಂತಿಕೆಗೂ ನಿಜವಾದ ಬುದ್ಧಿವಂತಿಕೆಗೂ ವ್ಯತ್ಯಾಸ ಜನರಿಗೆ ಗೊತ್ತಾಗಲ್ಲ.

9. ಸಂತೋಷವಾಗಿರಕ್ಕೆ ತುಂಬಾ ದುಡ್ದಿರಬೇಕಗಿಲ್ಲ. ಅಕ್ಕಪಕ್ಕದ ಮನೆಯೋರ್ಗಿಂತ ಜಾಸ್ತಿ ಇದ್ದರೆ ಸಾಕು.

ಯಾಕಂದ್ರೆ ನಾವು ಯಾವಾಗಲೂ ಬೇರೆಯೋರಿಗೆ ಹೋಲಿಸಿಕೊಳ್ತಾ ಇರ್ತೀವಿ, ಅದಕ್ಕೇ. ಅಂದಹಾಗೆ ಈಗೀಗ ಪಕ್ಕದ ಮನೆಯೋರ ಫೇಸ್ಬುಕ್ಕಲ್ಲಿ ಫ್ರೆಂಡ್ ಆಗಿರೋರೂ ಸೇರಿಕೊಳ್ತಾರೆ!

10. ಸುಳ್ಳು ಹೇಳಕ್ಕೆ ತುಂಬ ಜಾಸ್ತಿ ತಲೆ ಉಪಯೋಗಿಸಬೇಕು. ನಿಜ ಹೇಳಕ್ಕೆ ಅಷ್ಟು ಬೇಕಾಗಿಲ್ಲ.

ಸುಳ್ಳು ಹೇಳುವಾಗ ಮುಂದೆ ಆಗೋ ತೊಂದರೆಗಳಿಗೆಲ್ಲ ಪ್ಲಾನ್ ಮಾಡಿಕೊಂಡು ಹೇಳಬೇಕು. ನಿಜ ಹೇಳೋರಿಗೆ ಈ ತೊಂದರೆಗಳೆಲ್ಲ ಇರಲ್ಲ. ಹೇಳೋದು ಹೇಳಿ ಆಮೇಲೆ ಏನಾಗುತ್ತೋ ನೋಡ್ಕೋತೀನಿ ಅನ್ನೋ ಮನೋಭಾವ ಇರೋದ್ರಿಂದ ಜಾಸ್ತಿ ತಲೆ ಉಪಯೋಗಿಸಬೇಕಾಗಿಲ್ಲ.

11. ನಿಮಗೆ ಇಷ್ಟ ಇರೋರ್ಗೆ SMS / WhatsApp ಸಂದೇಶ ಬರೀಬೇಕಾದ್ರೆ ಕೈ ಬೇಗ ಓಡುತ್ತೆ.

ಯಾಕಂದ್ರೆ ಮನಸ್ಸು ಕೈಗೆ ಹಾಗೆ ಆದೇಶ ಕೊಡುತ್ತೆ! ಆದರೆ ನೆನಪಿರಲಿ, ಇದರಿಂದ ಏನೇನೋ ಟೈಪ್ ಮಾಡಿ ಸಂದೇಶ ಕಳಿಸಿ ಕಷ್ಟಕ್ಕೆ ಸಿಕಾಕೊಳೋ ಸಾಧ್ಯತೆ ಹೆಚ್ಚು!

12. ಆಗಾಗ ಬೇಜಾರು ಅನ್ನೋರು ಸಾಮಾನ್ಯವಾಗಿ ಏನಾದರೂ ಒಳ್ಳೆ ಕೆಲಸ ಮಾಡಕ್ಕೆ ಇಷ್ಟ ಪಡ್ತಾರೆ. ಅವರಿಗೆ ನಿಜಕ್ಕೂ ಮನರಂಜನೆ ಬೇಕಾಗಿರಲ್ಲ.

ಅವರಿಗೆ ಬೇಜಾರು ಆಗೋದೇ ಮನರಂಜನೆ ಅವರಿಗೆ ಬೇಡದೆ ಇರೋದ್ರಿಂದ. ಮನರಂಜನೆಯಿಂದ ಅವರ ಜೀವನ ಇನ್ನಷ್ಟು ಚೆನ್ನಾಗಾಗುತ್ತೆ ಅನ್ನೋ ಅನಿಸಿಕೆ ಅವರಿಗೆ ಇರಲ್ಲ. ಅದರ ಬದಲಾಗಿ ಏನಾದರೂ ಒಳ್ಳೇ ಕೆಲಸ ಮಾಡಿದರೆ ಒಂದಿಷ್ಟು ಸಂತೋಷ ಸಿಗುತ್ತೆ.

13. ತುಂಬ ಬುದ್ಧಿ ಇರೋ ಹುಡುಗೀರ್ಗೆ ಗಂಡು ಸಿಗೋದು ಕಷ್ಟ. ಅವರಿಗೂ ಮದುವೆ ಅಂದ್ರೆ ತುಂಬಾ ಇಷ್ಟ ಇರಲ್ಲ.

ಮದುವೆ ಅನ್ನೋದರ ಬಗ್ಗೆ ತೀರಾ ಜಾಸ್ತಿ ಯೋಚನೆ ಮಾಡೋದು ಏನೂ ಇರಲ್ಲ. ಸ್ವಲ್ಪ ಇರುತ್ತೆ, ಇಲ್ಲವೇ ಇಲ್ಲ ಅಂತಲ್ಲ. ಆದರೆ ಮದುವೆ ಆದ್ಮೇಲೆ ನಿಭಾಯಿಸಿಕೊಂಡು ಹೋಗೋದೇ ಮುಖ್ಯ. ಆದರೆ ತುಂಬ ಬುದ್ಧಿ ಇದ್ದರೆ ಬೇಕಾದ್ದು ಬೇಕಾಗಿಲ್ಲದಿರೋದು ಎಲ್ಲಾ ಯೋಚನೆ ಮಾಡಿಕೊಂಡು ತಲೆ ಕೆಡಿಸಿಕೊಂಡು ಕೂತಿರ್ತಾರೆ. ಬೇಕಾಗಿಲ್ಲದಿರೋದರ ಬಗ್ಗೇನೇ ಜಾಸ್ತಿ ಯೋಚನೆ ಮಾಡ್ತಾರೆ ಅಂದ್ರೂ ತಪ್ಪಲ್ಲ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: